ಎಚ್ ಆರ್ ರಮೇಶ ಕವಿತೆ- ಅಚ್ಚರಿಯೆಂಬುದಿಲ್ಲ…

ಎಚ್ ಆರ್ ರಮೇಶ 

ಅಗಾಧತೆಯಲ್ಲಿ ತಾಗುವುದು
ಅಚ್ಚರಿಯಲ್ಲ;
ಸಾಮಾನ್ಯವಾದುದಾಗಿದೆ
ಆಗುವುದರಲ್ಲಿ ಒಳಗೊಂಡು
ಆಗಿರುವುದನು ಹೊತ್ತುಕೊಳ್ಳದೇ ಇರುವುದು
ಸಾಮಾನ್ಯವಾಗುವುದು
ಅಚ್ಚರಿ;
ಅಲ್ಲೆಲ್ಲಿಯೋ ನಕ್ಷತ್ರದ ಚೂರು ಕಣ್ಣಲ್ಲಿ
ಇಲ್ಲಿ,
ತಾಗಿದೆ
ಇದು

ಅದು
ಎಲ್ಲೆ ಇಲ್ಲದಿದುದರಲಿ ಎಲ್ಲೆಗೊಂಡು
ತಾಗಿ ಕೊಂಡಿದೆ,
ಆದರೂ ಯಾವುದಿದು ಪರಿಣಾಮ
ನಡುವೆ ಸುಳಿವ
ಗೆರೆ?
ಪರ್ವತ ಕೇವಲ ಕಣವಾಗಿ ಅಲೆವುದು
ಗೆರೆಯೂ ಸಹ,
ಮಾಡಿರುವುದರಲ್ಲೇ ಮಾಡಬಾರದುದು ಕೂತಿದೆ
ಕತ್ತಲಲಿ ಕಪ್ಪು ಬೆಕ್ಕು!

‍ಲೇಖಕರು Admin

January 15, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: