
ನಿರುಪಮಾ ಉಚ್ಚಿಲ್
ಬೆಳೆದಿಹುದು ಚೆರಿ ವೃಕ್ಷ ಮನೆಯಂಗಳದಿ
ಚಾಚಿವೆ ಬಾಹುಗಳು ಛತ್ರಿಯಂದದಿ
ಹೂವು ಹಣ್ಣೆಲೆಗಳ ಪಾತ ರಂಗೋಲಿಯಂದದಿ
ನೆಳಲು ಬೆಳಕುಗಳ ಚಿನ್ನಾಟ
ಅಳಿಲುಗಳ ಜೂಟಾಟ
ಮುಸ್ಸಂಜೆಯಲಿ ಬಾವಲಿಗಳ ಜೋಕಾಲಿಯಾಟ
ಜೃಂಬಿತ ಜೇಂಕರೆವ ಹೂವುಗಳು
ಝೇಂಕರಿಪ ದುಂಬಿಗಳು
ಸಂಭ್ರಮದಿ ಸುಳಿವ ಚಿಟ್ಟೆಗಳು

ಕಪ್ಪುಹಕ್ಕಿ ಹಸಿರುಹಕ್ಕಿ ಹೊನ್ನಹಕ್ಕಿ
ಚಿಕ್ಕಹಕ್ಕಿ ಚುಕ್ಕಿಹಕ್ಕಿ ಜುಟ್ಟಹಕ್ಕಿ
ಸವಿಯುತಿವೆ ಮಧುರ ಕೆಂಪು ಹಣ್ಣಕುಕ್ಕಿ
ಕಾಕಾ ಕುಹೂಕುಹೂ ಟುವ್ವಿಟುವ್ವಿ ರಾಗ
ಕೋಗಿಲೆಗಿಲ್ಲ ಮಾಮರದ ಹಂಗು
ತಣ್ಪಿನ ಚೆರಿ ವೃಕ್ಷದಾಶ್ರಯದ ಸಂಗ






0 Comments