ನಿರುಪಾಯ
ರೂಪ ಹಾಸನ
ಯಾವ ಮಾಯದಲ್ಲೋ
ಕೈಯೇರಿದ ಈ
ಚುಲ್ಟಾರಿ ಮಲ್ಲಿರುವೆ
ಯಾವ ಜನ್ಮದ ಹಗೆತನದ
ಬಾಕಿ ತೀರಿಕೆಗೋ
ಕಚ್ಚುತ್ತದೆ
ಮುಳ್ಳು ಮೊನೆ ಚುಚ್ಚಿದಂತೆ.
ಮುಟ್ಟಿದರೆ ಸತ್ತು ಬೀಳುವಷ್ಟು
ಸೂಕ್ಷ್ಮಾತಿ ಸೂಕ್ಷ್ಮ ಜೀವಿಗೆ
ಅದೆಷ್ಟು ಚೂಪು ಹಲ್ಲು
ಅದೆಂಥಾ ತೀಕ್ಷ್ಣ ನಾತ!
ಆದರೂ….ಪಾಪದ್ದು
ಉರುಬಿದರೆ ಉಸಿರುಗಟ್ಟಿ
ಸಾಯುವಷ್ಟು ಪುಟಾಣಿ.
ಕ್ಷುದ್ರಾತಿಕ್ಷುದ್ರ ಹುಳುವನ್ನು
ಕೊಡವಿ ಕೆಡವಲೆತ್ನಿಸಿದ ಕೈ,
ಉರುಬಿ ಬೀಳಿಸಲು ಮುಂದಾದ
ತುಟಿಗಾಳಿ
ತಟಸ್ಥವಾಗುತ್ತವೆ ನಿರುಪಾಯವಾಗಿ.
ಚುಲ್ಟಾರಿ ಮಲ್ಲಿರುವೆ ಮೊಗದಲ್ಲೀಗ
ಕಂಡೂ ಕಾಣದಂತಾ ಕಿರುನಗೆ!







ಚೆನ್ನಾಗಿದೆ; ಚುಲ್ಟಾರಿ ಇರುವೆಯ ಪದ್ಯ.
Aha.. chendada kavite.
ಚನ್ನಾಗಿದೆ
ರೂಪಾ ಜಿ, ನಮಸ್ಕಾರ..ಕವನ ಅಗೋಚರವಾಗಿದ್ದರೂ, ತಟ್ಟನೆ ಏನೋ ಹೊಳೆದಂತೆ ಭಾಸ….ಏನೂ ಮಾಡಲಾಗದ ಅಸಹಾಯತೆಯಂತೆ….ಹೊಟ್ಟೆಯೊಳಗಿನ ಸಿಟ್ಟಂತೆ…ತುಂಬ ಸಶಕ್ತ ಕವನ. ವಂದನೆಗಳು
ಕವನ ಚನ್ನಾಗಿದೆ ಮೇಡಂ ಹೀಗೆ ಬರೆಯುತ್ತೀರಿ. . . .
Aeshtondu arthapoorna kavite eshtavaytu
ತುಂಬಾ ಇಷ್ಟ ಆಯ್ತು
ಕವಿತೆಗೆ ಸ್ಪಂದಿಸಿದ ಸಹೃದಯರಿಗೆಲ್ಲಾ ವಂದನೆಗಳು….
-ರೂಪ