ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೃಹಿಣಿಯ ದಿನಚರಿ..

ಶಂಕರಾನಂದ ಹೆಬ್ಬಾಳ

ಆಕೆಯೋರ್ವ ಗೃಹಿಣಿ
ಎಲ್ಲ ಹೆಣ್ಮಕ್ಕಳ ನಿತ್ಯ ಕಾರ್ಯ
ಅರುಣೋದಯಕ್ಕೆ ಮೋಬೈಲ
ಅಲಾರಂನಲ್ಲಿ ಏಳುತ್ತ..
ರಾಶಿ ರಾಶಿ ಕಸ ಮುಸುರೆ
ಹೆಕ್ಕುತ್ತ,ಕುಕ್ಕುತ್ತ,
ಮಗನಿಗೆ‌…
ಲೋ…! ಎದ್ದೇಳೋ ದ್ರಾಬೆ,
ಗಂಟೆ ಎಂಟಾಯಿತು….?

ಅವನಂದ ಅಮ್ಮಾ,
ಬೆಳಬೆಳಿಗ್ಗೆ ಸುಪ್ರಭಾತನಾ,
ಇವಳು ಹಾಲು ಕಾಸಿ,
ಚಹಾ ಸೋಸಿ, ಇಡ್ಲಿಗೆ
ಚಟ್ನಿ ಮಿಕ್ಸರನಲ್ಲಿ ಗೊರ್
ಅನ್ನಿಸಿದಳು, ನುಣ್ಣಗಾಗಿ
ನಾಲ್ಕು ಇಡ್ಲಿಯೊಂದಿಗೆ,
ಡೈನಿಂಗ ಟೇಬಲನೊಂದಿಗೆ
ಬಂದು ಕುಳಿತಿತು…ಟಿಫನ್…!

ಗಂಡ ಹೊರಟ ಆಫಿಸಿಗೆ..
ಹೋಗಿ ಬರ್ತೆನೆ ಕಣೆ,
ಸರಿ, ಒಲೆ ಮೇಲೆ ಬೇಳೆ
ಸೀದೋಗಿತ್ತು…
ಓಡಿದೆ…!
ಹಳದಿಕಾಳು ಕರಿ ಇದ್ದಿಲಿನ
ಗುಳಿಗೆಯಾಗಿತ್ತು…
ಥುತ್ ನನ್ನ ಅಜ್ಞಾನಕ್ಕೆ
ಮತ್ತೆ ತಿಕ್ಕಿ ಇಟ್ಟು
ಘಮಘಮ ಎನಿಸುವ ಬೆಳೆಸಾಂಬರ
ರೆಡಿ ಇನ್ ಮಿನಿಟ್….!!

ಮತ್ತೆ,ಸಂಜೆ ಚಹಾ ರೆಡಿ,
ಗಂಡ ಚಹ ಕುಡಿದು
ಕುಳಿತ ಸಂಜೆಗೆ ಏನ್ ಸ್ಪೇಶಲ್..?
ಹೆಂಡತಿ….ಜೀರಾ ರೈಸ್…
ಓಕೆ…ಹಾಗೆ ವಾಕಿಂಗ ಹೊರಟ
ಈಕೆ…!
ತಯಾರಿ ಶುರು….
ಮಕ್ಕಳ ಕಿರಿಕಿರಿ….
ಅಮ್ಮ….
ನನ್ನ ನೈಟ ಡ್ರೆಸ್ ಇಲ್ಲ..?
ಅಮ್ಮಾ ಟೀ ಶರ್ಟ ಇಲ್ಲ….?
ಅಯ್ಯೋ….!
ಇಲ್ಲೆ ಇದೆ ನೋಡಿ
ದಯವಿಟ್ಟು ಕಾಡಬೇಡಿ..!
ಓಡಿದಳು ಅಡುಗೆ ಮನೆಗೆ..
ಚಣದಲ್ಲಿ ತಯಾರಿ
ಜೀರಾ ರೈಸ್ ಪುಲ್ ಘಮಘಮ…!

ರಾಶಿ ರಾಶಿ ಮುಸುರೆ ಬಿಟ್ಟು
ಮಲಗಿದಾಗ ನೆನೆಯುತ್ತಿದ್ದಾಳೆ
ಅವರಮ್ಮನ ಮಾತು
ನೆನಪಾಗಿ…
ಇದು ಪುಲ್ ಟೈಮ್ ಜಾಬ್
ಹೀಗಿದೆ…?
ಅವಳಮ್ಮ ಹಾಕಿಕೊಟ್ಟ
ಗೃಹಿಣಿಯ ದಿನಚರಿ….?

‍ಲೇಖಕರು Avadhi

4 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading