ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುರುರಾಜ್ ಕವಿತೆ : ಅವರಿಲ್ಲ;ಆದರೂ ಇದ್ದಾರೆ..!

ಒಂದಿಂಚೂ ಜಾಗ ಬಿಡದ ಹಾಗೆ

ಆಗಸದ ತುಂಬೆಲ್ಲಾ ತುಂಬಿಕೊಂಡು

ಕಣ್ಣಾಮುಚ್ಚಾಲೆ ಆಡುತ್ತಿದ್ದ ನಕ್ಷತ್ರಗಳನ್ನು

ತೋರಿಸುತ್ತಲೇ ಬೆಳೆಸಿದ ನನ್ನಪ್ಪ

ಮುಚ್ಚಿದ ಕಣ್ಣು ಬಿಡಲೇ ಇಲ್ಲ.

ಕೇಳಿದ್ದಕ್ಕೆ ಅಮ್ಮ ಹೇಳಿದಳು-

‘ಮೇಲಿದ್ದಾರೆ ಬಿಡು, ನೋಡುತ್ತಲೇ ಇರು’

ಹುಡುಕುತ್ತಲೇ ಇದ್ದೇನೆ, ಇನ್ನೂ ಸಿಕ್ಕಿಲ್ಲ.

………………………………..

ರಾತ್ತಿ ಪ್ತೀತಿಯಿಂದ ಇಟ್ಟ ರಂಗೋಲಿ

ಸುಳಿವೇ ಕೊಡದೆ ಸುಳಿದ ಮಳೆಗೆ

ಚುಕ್ಕಿ ಉಳಿಯದ ಹಾಗೆ ತೊಳೆದು ಹೋಗಿತ್ತು.

ಮಲಗಿದ್ದ ನನ್ನಮ್ಮನಿಗೆ ಮತ್ತೆ

ಎಚ್ಚರವೇ ಆಗಲಿಲ್ಲ.

ಕತ್ತಲು ಕಣ್ಣು ತೆರೆಯುವ ಹೊತ್ತಿಗೆ

ಮನೆಯೊಳಗೆ ಬೆಳಕಿರಲಿಲ್ಲ.

ಎಲ್ಲಿ ಹೋದಿರೆಂದು ಕೇಳಲಿಕ್ಕೆ ಇಬ್ಬರೂ ಇಲ್ಲ.

…………………………………………

ಹಗಲಿನಲ್ಲೀಗ ಮೊದಲಿನ ತಂಪಿಲ್ಲ

ಅಂಗಳಕ್ಕೂ ರಂಗವಲ್ಲಿಯ ಹಂಗಿಲ್ಲ

ರಾತ್ತಿಗಳಲ್ಲಿ ತಾರೆಗಳನ್ನು ಹುಡುಕುವುದಿಲ್ಲ

ನಕ್ಷತ್ತಗಳ ಬೋಗುಣಿ ಖಾಲಿಯಾಗಿದೆ

ಯಾರಿದ್ದರೂ ನಿಮ್ಮಿಬ್ಬರಂತಾಗುವುದಿಲ್ಲ.

ಸುತ್ತ ಇದ್ದವರೆಲ್ಲ ಮೆತ್ತಗೆ ಮಾಯವಾದರೂ

ಈ ಇಬ್ಬರನ್ನು ಇನ್ನೂ ಜೀವಂತವಾಗಿರಿಸಿದ್ದೀಯಲ್ಲ-

ಓ ನೆನಪೇ, ನಿನಗೆ ನನ್ನ ನಮಸ್ಕಾರ…!ಟಿ

 

ಟಿ.ಗುರುರಾಜ್, ಮೈಸೂರು.

 

‍ಲೇಖಕರು G

24 April, 2011

3 Comments

  1. Anasuya M.R.

    Bavanegalu thumba sogasagi heppugattive.

  2. veda

    sogasada kavana Gururaj avre

  3. MohanKumar

    Bavanegalanu melaku akuvantaha Kavana…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading