ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುಪ್ತಗಾಮಿನಿ…

 ಸುಧಾರಾಣಿ ನಾಯ್ಕ

ಬಿಟ್ಟುಬಿಡು ಎಂದರೆ
ಉಟ್ಟ ಬಟ್ಟೆ
ಕಳಚೆಸೆದಂತಲ್ಲ,
ಹಾವು, ಪೊರೆ
ಬಿಟ್ಟು ಹೋದಂತೆಯೂ ಅಲ್ಲ,
ಅಡಿಯಿಂದ ಮುಡಿಯವರೆಗೆ
ಆವರಿಸಿದ
ಮೈ ತೊಗಲಂತೆ ಪ್ರೀತಿ..

ಮಾತು ಮೌನ
ಎಲ್ಲವೂ ಒಂದೇ..
ಮಾತು, ಭೇಟಿ
ದೀಪಾವಳಿಯಾದರೆ,
ಮೌನ ಧ್ಯಾನಿಸುವ
ಶಿವರಾತ್ರಿಯಂತೆ,
ಎರಡೂ ಹಬ್ಬವೇ..

ನೆನೆ ನೆನೆದು ನೆನಪುಗಳ
ಹಸಿಯಾಗಿಸಿ
ಮನದ ತುಂಬ ಬಳ್ಳಿ ಹರಡಿ
ಮಲ್ಲಿಗೆ ಅರಳಿಸುತ್ತೇನೆ,
ಕಂಪು ನಿನ್ನೆದೆಯ ತಲುಪಿ
ಪ್ರೇಮ ಪಲ್ಲವಿಸಲಿ
ಕಲ್ಲಾದ ಎದೆಯಲಿ..

ಹಿಡಿ ಹೃದಯಕ್ಕೆ
ಬೊಗಸೆ ಪ್ರೀತಿಯ ಬಯಕೆ
ತಪ್ಪೆಂದರೆ, ತಪ್ಪು ನೂರೇಕೆ?
ಸಾವಿರ ಬಾರಿ ಸಂಭವಿಸಲಿ,
ಮನ ಬರಡಾಗದೆ
ಪ್ರೀತಿಯ ಸೆಲೆ ಜಿನುಗಿ
ಅನುರಾಗಿಯಾಗಲಿ..

ಬೇಡವಾದರೆ ಬಿಡು
ನಿನ್ನ ತಡೆಯಲೇನಿದೆ?
ಅಕ್ಕನ ಚೆನ್ನಮಲ್ಲ
ಮೀರೆಯ ಗೊಲ್ಲ
ಆಂತರ್ಯಕ್ಕೆ ದಕ್ಕಿದರೆ
ಹೊರತು ಲೋಕದ ಲೆಕ್ಕಕಲ್ಲ,
ಒಳಗಿರುವ ನಿನ್ನೊಂದಿಗೆ
ಬಿಗಿಯಾಗಿ ಬಂಧಿಸಿಕೊಳ್ಳುವೆ,
ಪ್ರವಹಿಸಲಿ ಪ್ರೇಮ ಸದಾ
ಗುಪ್ತಗಾಮಿನಿಯಂತೆ..

‍ಲೇಖಕರು Admin

12 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading