ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೀಚು ಪದ್ಯಗಳು

ವಿನತೆ ಶರ್ಮ

 

ನಿಮ್ಮಯ ಮನೆ ಬೆಳಗಲು

ಬಂದೆ ಎನ್ನದಿರಿ ದಮ್ಮಯ್ಯ.

ಅಂಗಡಿಯಲ್ಲಿ ಸಿಕ್ಕತ್ತೆ

ಬೇಕಿದ್ದರೆ – ತರಾವರಿ

ಟಾರ್ಚುಗಳು.

ಹುಡುಗಿ ಬೆಳ್ಳಗಿರಬೇಕು

ಅಂದರು.

‘ಹೌದಾ?ನಿಮ್ಮನೆಯಲ್ಲಿ

ಏನೇನಿದೆ ಹೇಳಿ ಮೊದಲು…

ಏಸಿ, ಬ್ಯುಟಿ ಪಾರ್ಲರ್ರು, ಆಳುಕಾಳು,

ರತ್ನಗಂಬಳಿ, ಬಾತ್ ಟಬ್ಬು…

ನಾ ಬೆಳ್ಳಗೆ ಇರಬೇಕಲ್ಲಾ!

ಇನಿಯಾ, ಎಷ್ಟೆಲ್ಲಾ ಹೊಗಳಿದೆ

ನನ್ನ ಮುಖ, ಆಕೃತಿ, ಆಕಾರವ.

ಮೌನವಾಯಿತಲ್ಲಾ

ನಿನ್ನ ದನಿ.

ನನ್ನ ಬುದ್ಧಿ, ತರ್ಕ,

ಹವ್ಯಾಸ, ಧ್ಯೇಯಗಳ

ನಾ ಚರ್ಚಿಸಿದಾಗ?

ಒಂದಂತೂ ಇದ್ದೇ ಇರತ್ತೆ,

ಮ್, ಇವಳು ಒಪ್ಪಿದರೆ ಎರಡು…

ನಿನ್ನ ಕನವರಿಕೆ ನಡೆದಿತ್ತು.

ನಿಜವೆಂದರೆ, ಮಕ್ಕಳ ಹೆಡೆಯಲು

ನಾ ಯೋಚಿಸಿಯೇ ಇಲ್ಲವಲ್ಲ!

ಹೆಣ್ಣಿನಂತೆ ನಿನ್ನ ರೂಪಿಸುವೆ

ತಿದ್ದುವೆ, ತೀಡುವೆ, ಎಂದ ಒಬ್ಬ.

ನೀ ಬಲುಚೆನ್ನ

ಅಂದ ಮತ್ತೊಬ್ಬ.

ನೀ ಹೇಗಿದ್ದರೂ

ಐ ಡೋಂಟ್ ಕೇರ್

ಅಂದ ಇನ್ನೊಬ್ಬ.

ನಿರೀಕ್ಷೆಯಿಲ್ಲದೆ, ಅಪೇಕ್ಷೆಯಿಲ್ಲದೆ

ಜೊತೆಯಾಗಿರೋಣ, ಎಂದ ಇವ.

ನನಗೂ ಜನಿವಾರ ಹಾಕಿಸುವೆಯಾ,

ಎಂದ. ಹಾಗೆ ಮಾಡಿದರೆ

ನೀ’ಸ್ಪೆಷಲ್’ ಆಗಿಬಿಡುತ್ತೀ!

ಹೀಗೇ ಇರೋಣ,

ಸೀದಾಸಾದ.

 

ಮಗುವೇ, ಹಾಡುತ್ತಾ ಆಗಸದ

ನಕ್ಕಿ ಚುಕ್ಕಿ ತೋರಿಸುವೆ,

ನೀನೇ ಅವನ್ನ

ನೋಡಬೇಕೆಂದರೆ

ಸರಿಯಾದ ವಿದ್ಯೆ ಸೂಚಿಸುವೆ.

‍ಲೇಖಕರು avadhi

5 June, 2017

2 Comments

  1. Vinathe Sharma

    Thank you, Avadhi

  2. Mmshaik

    ಉತ್ತಮ ಕವನ..ನನ್ನದೇ ಭಾವವೆನಿಸಿತು..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading