ನನ್ನೊಳಗೆ ಇಳಿಯುವಾಗ

ಕರೆಗಂಟೆ ಇಲ್ಲದ ಮನೆ ನನ್ನದು
ನನ್ನ ಪಕ್ಕೆಲುಬುಗಳ ತಟ್ಟಿದರೆ ಸಾಕು
ಬಾಗಿಲು ತೆರೆಯುವೆ.
ಎಲ್ಲ ಹೃದಯಗಳ ಬಣ್ಣ ನನ್ನ ಮನೆಗೆ.
ತಕರಾರು ತೆಗೆಯದೇ
ಪೈಂಟರ್ನಿಂದ ಬಳಿಸಿಕೊಂಡದ್ದು.
ಬನ್ನಿ
ಕರುಳ ಚಾಪೆ ಹಾಸುವೆ
ಕೂತು ಸುಧಾರಿಸಿಕೊಳ್ಳಿರಿ
ಬೇಕಿದ್ದರೆ
ಮೆದುಳು, ಹೃದಯ, ರಕ್ತದ ಕೋಣೆಗಳ ಬಗ್ಗೆ
ಚರ್ಚೆ ನಡೆಸಿರಿ.
ಬೀಗವೂ ಇಲ್ಲ ನನ್ನ ಮನೆಗೆ.
ಗಾಳಿ ಮಳೆಗೆ ಮುರಿದುಬಿದ್ದರೆ
ಮಣ್ಣೇ ನನ್ನ ಮನೆ.
ಅಲ್ಲಿಗೂ ಬರುವಿರಾದರೆ ಬನ್ನಿ
ಉಗುರು, ರೋಮ, ಮೂಳೆಗಳ ಬಗ್ಗೆ
ಚರ್ಚೆ ನಡೆಸಿರಿ.
ಕರೆಗಂಟೆ ಅಲ್ಲಿಲ್ಲದಿದ್ದರೂ
ಗಾಳಿಯನ್ನು ತಟ್ಟಿ ಸಾಕು
ಬಾಗಿಲು ತೆರೆಯುವೆ.






‘ಕರೆಗಂಟೆ ಇಲ್ಲದ ಮನೆ ನನ್ನದು’ಎನ್ನುವ ಕವಿ ತಾನು ಮುಕ್ತವಾಗಿದ್ದೇನೆ.ತನಗೆ ಯಾವ ಜಾತಿ ಮತಗಳ ಹಂಗಿಲ್ಲ.ನನ್ನ ಮನೆಗೆ ಎಲ್ಲಾ ಹೃದಯಗಳ ಬಣ್ಣವಿದೆ.ಇದಕ್ಕೆ ಯಾವ ತಕರಾರು ಇಲ್ಲ. ಏಕೆಂದರೆ ಇಲ್ಲಿ ಮತ ಧರ್ಮಗಳನ್ನು ಮೀರಿದ ಒಂದು ಬಣ್ಣವಿದೆ,ಅದು ಭ್ರಾತೃತ್ವದ ಬಣ್ಣ. ಇಲ್ಲಿ ಶಾಂತಿ, ಸಹನೆ,ಹೃದಯವ್ಯೇಶಾಲ್ಯತೆಯಿದೆ ಎನ್ನುತ್ತಾರೆ .’ಬನ್ನಿ ಕರುಳ ಚಾಪೆಯನ್ನು ಹಾಸುವೆ’ಎನ್ನುವ ಕವಿ ಒಳಗುದಿಯೊಂದಿಗೆ ಆಕ್ರೋಶವನ್ನು ತಳೆದಿರುವುದು ಕಾಣಬಹುದು.ಮತ್ತೆ ನಾನು ಕಟ್ಟಿಕೊಂಡಿರುವ ವಿಶ್ವಭ್ರಾತೃತ್ವದ ಮನೆ ಬಿದ್ದರೆ ಅಂದರೆ ಭೌತಿಕವಾಗಿ ಇಲ್ಲವಾದಾಗ ಮಣ್ಣೇ ನನ್ನ ಮನೆ ಅಲ್ಲಿಗೂ ಬರುವಿದಾದರೆ ಬನ್ನಿ ಶೇಷವಾಗುಳಿದ ಉಗರು,ರೋಮ,ಮೂಳೆಗಳ ಬಗ್ಗೆ ಚರ್ಚೆ ಮಾಡೋಣ ಎಂದು ಚರ್ಚೆಗೆ ಇಳಿಯುತ್ತಾರೆ.ಒಟ್ಟಾರೆ ಕವಿತೆ ಚಿಂತನೆಗೆ ಹಚ್ಚುತ್ತದೆ.
ಅದ್ಭುತವಾದ ಕವನ… ತನ್ನೊಳಗಿನ ಮನೆಯೋಳಗೆ ಸ್ವಾಗತಿಸುವ ಪರಿ ನಮ್ಮೆಲ್ಲರನ್ನೂ ಬರಮಾಡಿಕೊಳ್ಳುತ್ತದೆ. ತನ್ನ ಮನೆಯ ವಿಶಾಲತೆಯನ್ನ ತೋರಿಸುತ್ತ, ನಮ್ಮ ಸಂಕುಚಿತ ಮನೋಭಾವನೆಯನ್ನ ವಿಡಂಬನೆಯ ಮೂಲಕ ಪ್ರಶ್ನಿಸುತ್ತದೆ. ಕೊನೆಗೆ ತಾನು ಅಂತರ್ಗತವೆಂದರೂ ನಮ್ಮ ದುರಾಸೆಯ ಕಂಡು ಕೇಳುತ್ತದೆ… ಇನ್ನೇನಾದರು ಉಳಿಸಿದ್ದಿರಾ ನನ್ನ ನಿರ್ಣಾಮ ಮಾಡಲು… ತಿಳಿಸಿ… ಹಾಗಿದ್ದರೆ ಮತ್ತೆ ಸ್ವಾಗತಿಸುವೆ…
ಅತಿ ಉತ್ತಮವಾದ ಕವನ… ಧನ್ನ್ಯವಾದಗಳು
satish ananya anisuvude inthaha aparuupada chitranha koduva kaaranha..avara vishaya mattu abhivyaktiya kramave teeera bhinna matthu srujanasheela..