ಹೀಗೊಂದು ನೆನಪು ….
– ಎಂ ಎಂ ಶೇಖ್ ಯಾದಗಿರಿ
ಹೃದಯದ ಮೂಲೆಯಲ್ಲಿ
ಏನೋ ಸುಟ್ಟ ವಾಸನೆ ..
ತಾರೆಗಳು ಚಾಡಿ ಹೇಳಿದವು ..
ಚಂದ್ರನಿಗೆ, ಆದರೆ ಅವನು ಅವಿತು
ಕೊಂಡ ಮೋಡದೊಳಗೆ ….
ವಿಷಯ ತಿಳಿದ ಭೂಮಿಯಲ್ಲಿ
ಪ್ರತಿ ಹಾದಿ ಗುರುತೊಂದ
ಉಳಿಸತೊಡಗಿತು …
ಗಾಯವಿಲ್ಲದೆ ನೋವೊಂದು
ಬೆಳೆಯತೊಡಗಿತು …
ಅದನ್ನು ನಾನು ಬೆಳೆದಿಂಗಳಿಂದ
ಮರೆಸತೊಡಗಿದೆ ….. !!!!







ಅದ್ಭುತವಾದ ಕಲ್ಪನೆ ಎಂ.ಎಂ.ಶೇಖ್ ರವರೆ.
Chenngide..
ಇಷ್ಟ ವಾಯಿತು ಪದ್ಯ
ಸುಂದರ ಕವನದ ಸಾಲುಗಳು, ಆಸಮ್ ಲೈನ್ಸ್..
ಮೇಡಂ ವಂದನೆಗಳು
ಮನದ ಅಭಿವ್ಯಕ್ತಿಯ ಸುಂದರ ನಿರೂಪಣೆ, ಬೆಳದಿಂಗಳಂದರೇನೆ ಅಂತಹುದು ಅದಕ್ಕೆ ಎಲ್ಲ ನೋವನ್ನು ಮರೆಸುವ ಅದ್ಬುತ ಶಕ್ತಿಯಿದೆ, ಇಂದಿಗೂ ಬೆಳದಿಂಗಳು ಭಾವ ಜೀವಿಗಳನ್ನು ಭಾವುಕವಾಗಿಸುತ್ತೆ. ಬೆಳದಿಂಗಳು ತಾರೆಗಳು ಚಂದಿರ ಮೋಡ ಭೂಮಿ ಸೂಕ್ಷ್ಮಮನ ಭಾವುಕ ಯಾನ ಮಾಡಿಸುವ ತುಂಬ ಸಶಕ್ತ ಕವನ.
KAVANA CHENNAGIDE
pratikriyisida ellarigu dhanyavaadagaLu.
gayavaillde novondu beleyatodagitu… super madam