ಬರ್ತಿದೆ ಸಿಜಿಕೆ ಬೀದಿರಂಗ ದಿನ – ಕರ್ನಾಟಕದ ಎಲ್ಲಾ ಜಿಲ್ಲೆಗಳ ಕಾರ್ಯಕ್ರಮ ವಿವರ

27 ಜೂನ್ 2015 ಸಿಜಿಕೆ ಬೀದಿರಂಗ ದಿನ

ಏಕ ಕಾಲಕ್ಕೆ ಕರ್ನಾಟಕದ ಎಲ್ಲಾ ಜಿಲ್ಲೆಗಳ ಕಾರ್ಯಕ್ರಮ ವಿವರ


ಶತ ಶತಮಾನಗಳಿಂದ ಧರ್ಮ-ಜಾತಿ-ಮೌಡ್ಯಗಳಲ್ಲಿ ಸಮಾಜ ಸಮತೋಲನ ಕಳೆದುಕೊಂಡಾಗಲೆಲ್ಲ ಕಿಡಿಯಾಗಿ ನುಡಿಯಾದವರು ಜಗತ್ತಿನಲ್ಲಿ ಹಲವರು. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ದೇಶಕ್ಕೆ ಹೊಸ ಅರಿವಿನ ದಾರಿಯಾದವರು. ಇಂಥದನ್ನು ಅನುಸರಿಸಿರುವ ದೊಡ್ಡ ಪರಂಪರೆ ನಮ್ಮಂಥವರವರೆಗೆ ಝರಿಯಾಗಿ ಹರಿಯುತ್ತಿದೆ. ಇಂಥ ಸಂದರ್ಭದಲ್ಲಿ ಯುವಸಮೂಹ ಹಾದಿತಪ್ಪದಂತೆ ರಂಗಭೂಮಿಯಲ್ಲಿಯೂ ಜಾಗೃತಿಪ್ರಜ್ಞೆಯನ್ನು ಹಸಿಯಾಗಿಟ್ಟಿದ್ದವರು ಸಿಜಿಕೆ. ಈ ಕಾರಣಗಳನ್ನು ಗಮನಿಸಿ ಇವರ ಹುಟ್ಟುಹಬ್ಬದ ನೆಪದಲ್ಲಿ ಒಂದು ಕಾರ್ಯಕ್ರಮವೇ ನಮ್ಮ ಪ್ರೇರಣೆ.
ಸಿಜಿಕೆ ಒಂದು ಮಾಂತ್ರಿಕ ಕ್ರಿಯೆ
ತಾನಿರುವ ಬಯಲಿನಲ್ಲಿಯೇ ಸಂಘಟನೆಯನ್ನ ಹುಟ್ಟು ಹಾಕುವ, ಹತ್ತಾರು ಜನರನ್ನ ಕಲೆಹಾಕುವ, ಹೋರಾಟ-ಅರಿವು-ಸಂಭ್ರಮದ ಸಾಕ್ಷೀಪ್ರಜ್ಞೆಯೇ ಸಿಜಿಕೆ. ರಂಗಭೂಮಿಯ ಕನಸುಗಳು ಇಂದು ಸರ್ಕಾರದ ಮರ್ಜಿಗಳಲ್ಲಿ ಹೂತು ಹೋಗಿರುವಾಗ ಮೌಲ್ಯ, ಸಿದ್ದಾಂತದ ಮಾತುಗಳು ದುರ್ಲಭವಾಗುತ್ತಿರುವ ಈ ಹೊತ್ತಲ್ಲಿ ಒಂದು ಹೊಸ ಪಡೆ ಕರ್ನಾಟಕದ ತುಂಬೆಲ್ಲಾ ಕೆಲಸ ಮಾಡುವ ಜರೂರು ಇದೆ ಎಂಬುದು ನಮ್ಮ ಸಣ್ಣ ಸದಾಶಯ. ಸಿಜಿಕೆ ಇವತ್ತು ನಮಗೆ ಸಮಕಾಲೀನವೇ ಎಂದರೆ? ಖಂಡಿತಾ ಹೌದೆನ್ನುತ್ತದೆ ಕರ್ನಾಟಕ. ಸಾಂಸ್ಕೃತಿಕ ಒಡಲ ಒಂದಷ್ಟು ಹೆಸರುಗಳು ನಿಜಕ್ಕೂ ಉಳಿದು ಪ್ರೇರಣೆ ನೀಡಬೇಕೆಂಬುದು ನಮ್ಮೆಲ್ಲರ ಹಂಬಲ. ದಿಕ್ಕು ತಪ್ಪುತ್ತಿರುವ ಸಾಮಾಜಿಕ ಚಿಂತನೆಗಳ ಈ ಕಾಲದಲ್ಲಿ ನಾವುಗಳು ಜನಪರವಾದ ನಿಲುವಿನೊಂದಿಗೆ ಇವರ ಹುಟ್ಟುಹಬ್ಬವಾದ ಜೂನ್ 27ನ್ನು `ಸಿಜಿಕೆ ಬೀದಿ ರಂಗದಿನ’ ವನ್ನಾಗಿ ಘೋಷಣೆ ಮಾಡುತ್ತಾ ಒಂದು ಹೊಸ ಬೀದಿನಾಟಕದೊಂದಿಗೆ ಸಿಜಿಕೆ ರಂಗ ಹುಡುಕಾಟ ಎಂಬ ವಿನೂತನ ಕಾರ್ಯಕ್ರಮದೊಂದಿಗೆ ಸಂಸ ಥಿಯೇಟರ್, ಅವಿರತ ಪುಸ್ತಕ, ಬೆಂಗಳೂರು ಆರ್ಟ್  ಫೌಂಡೇಶನ್ ಸಹಭಾಗಿತ್ವದಲ್ಲಿ ಕನರ್ಾಟಕವನ್ನು ಸುತ್ತುವ ಪ್ರಯತ್ನವನ್ನು ರೂಪಿಸಿದೆ.
ಕರ್ನಾಟಕದ ಜಿಲ್ಲೆಗಳಲ್ಲಿರುವ ಸಿಜಿಕೆ ರಂಗಪ್ರಜ್ಞೆಯನ್ನು ಬಲ್ಲ ಗೆಳೆಯರು, ಸಂಘಟನೆಗಳು ಅವರ ಹುಟುಹಬ್ಬದ ದಿನದಂದು ಪಾಲ್ಗೊಂಡು, ಜಿಲ್ಲೆಗಳಲ್ಲಿ ಸಮಾನ ಮನಸ್ಕರಾದ ಜನರೊಂದಿಗೆ ಬೆರೆತು ಕಾರ್ಯಕ್ರಮದ ಮೂಲಕ ಆ ಜಿಲ್ಲೆಯಲ್ಲಿ ಸಾಂಸ್ಕೃತಿಕವಾಗಿ ಗುರುತಿಸಿಕೊಂಡ ಕಲಾವಿದರಿಗೆ ರಂಗಗೌರವವನ್ನು ನೀಡುವುದು, ಹೊಸ ಸವಾಲುಗಳನ್ನು ಚರ್ಚಿಸುವುದು, ಭಿನ್ನ ಕಾರ್ಯಕ್ರಮಗಳನ್ನು ರೂಪಿಸುವುದು ಪ್ರಜ್ಞಾವಂತರಾದ ನಮ್ಮೆಲ್ಲರ ಹೊಣೆ ಕೂಡಾ ಎಂದು ಭಾವಿಸಿದೆ. ಅಂದು ಏಕ ಕಾಲಕ್ಕೆ ಸಿಜಿಕೆ ಅವರನ್ನು ನೆನೆಯುತ್ತಾ ಕರ್ನಾಟಕ 30ಜನ ಕಲಾವಿದರನ್ನು ಆಯಾ ಜಿಲ್ಲೆಗಳಲ್ಲಿ ಪುರಸ್ಕರಿಸುವ ಮೂಲಕ ನಾಂದಿ ಹಾಡಬೇಕೆಂಬುದು ಕಾರ್ಯಕ್ರಮದ ಒತ್ತಾಸೆ.

 
ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಗಳ ವಿವರ
27 ಜೂನ್ 2015 10.30
ಸಿಜಿಕೆ ಕನಸು ಮತ್ತು ಸಾಮಾಜಿಕ ಸವಾಲುಗಳು
ಪ್ರಾಸ್ತಾವಿಕ : ಕೃಷ್ಣ ರಾಯಚೂರು
ಉದ್ಘಾಟನೆ : ಬರಗೂರು ರಾಮಚಂದ್ರಪ್ಪ
ಅಧ್ಯಕ್ಷತೆ : ಕೆ. ಮರುಳಸಿದ್ಧಪ್ಪ
ಅತಿಥಿಗಳು : ಬಂಜಗೆರೆ ಜಯಪ್ರಕಾಶ್
 
11.30
ಸಾಂಸ್ಕೃತಿಕ ಅರಿವು ಮತ್ತು ಜವಾಬ್ದಾರಿಗಳು
ಅಧ್ಯಕ್ಷತೆ : ಎಸ್.ಜಿ. ಸಿದ್ಧರಾಮಯ್ಯ
ಕಾ.ತ. ಚಿಕ್ಕಣ್ಣ
ಎಲ್.ಎನ್. ಮುಕುಂದರಾಜ್
ಎಂ.ಎಸ್. ಆಶಾದೇವಿ
ರಂಗನಾಥ್ ಕಂಟನಕುಂಟೆ
 
1.00
ಚಳುವಳಿಗಳ ತಾತ್ವಿಕತೆ
ಅಧ್ಯಕ್ಷತೆ : ರಾಜಪ್ಪ ದಳವಾಯಿ
ವಿಮಲ ಕೆ.ಎಸ್
ಮಾವಳ್ಳಿ ಶಂಕರ್
ಜಿ.ಎನ್. ನಾಗರಾಜ್
ಲಕ್ಷ್ಮಣಜಿ
 
3.00
ಸಾಮಾಜಿಕ ನಿಲುವು ಮತ್ತು ಯುವಜನತೆ
ಅಧ್ಯಕ್ಷತೆ : ಕೆ.ವೈ. ನಾರಾಯಣಸ್ವಾಮಿ
ಡೊಮಿನಿಕ್
ದಿಲಾವರ್ ರಾಮದುರ್ಗ
ಸಂಧ್ಯಾರಾಣಿ
ಶಶಿಕಾಂತ ಯಡಹಳ್ಳಿ
 
6.00
ಸಮಾರೋಪ
ಸಿಜಿಕೆ ಬೀದಿರಂಗ ದಿನ ಘೋಷಣೆ : ಕೆ.ಎ. ದಯಾನಂದ್
ಅಧ್ಯಕ್ಷತೆ : ಎಂ.ಎಸ್ ಮೂರ್ತಿ
ಶ್ರೀನಿವಾಸ ಜಿ. ಕಪ್ಪಣ್ಣ
ಸಿ.ಎಸ್. ದ್ವಾರಕನಾಥ್
ಜಯಲಕ್ಷ್ಮಿ ಸಿಜಿಕೆ
 

ನಾಡಿನ ಸಂಘಟನೆಗಳು ಆಯಾ ಜಿಲ್ಲೆಯ ಕ್ರಿಯಾಶೀಲ ರಂಗ ಮನಸ್ಸುಗಳನ್ನು ಗುರುತಿಸಿ ನೀಡುತ್ತಿರುವ

ಸಿಜಿಕೆ ರಂಗ ಪುರಸ್ಕೃತರ ಜಿಲ್ಲಾವಾರು ವಿವರಗಳು

 

ಬೆಂಗಳೂರು ನಗರ ಜಿಲ್ಲೆ
ಸಿಜಿಕೆ ರಂಗ ಪುರಸ್ಕಾರ : ಶಶಿಧರ್ ಭಾರೀಘಾಟ್ (ರಂಗಕರ್ಮಿಗಳು)
 
ಬಾಗಲಕೋಟೆ ಜಿಲ್ಲೆ
ಬಯಲು ಆರ್ಟ್ ಫೌಂಡೇಶನ್
ಸಿಜಿಕೆ ರಂಗ ಪುರಸ್ಕಾರ : ಗೂಡುಸಾಬ್ ಚೆಟ್ನಿಹಾಳ್ (ರಂಗ ಕಲಾವಿದರು)
 
ಬೀದರ್ ಜಿಲ್ಲೆ
ಬೀದರ್ ಜಿಲ್ಲಾ ಜಾನಪದ ಕಲಾವಿದರ ಒಕ್ಕೂಟ
ಸಿಜಿಕೆ ರಂಗ ಪುರಸ್ಕಾರ : ಮಹೇಶ್ ದೂಪೆ (ರಂಗಕಲಾವಿದರು)
 
ಚಿತ್ರದುರ್ಗ ಜಿಲ್ಲೆ
ರಂಗಸೌರಭ ಕಲಾ ಸಂಘ-ಕರ್ನಾಟಕ ರಂಗ ಪರಿಷತ್ತು ಜಿಲ್ಲಾ ಘಟಕ, ಚಿತ್ರದುರ್ಗ
ಸಿಜಿಕೆ ರಂಗ ಪುರಸ್ಕಾರ : ಅಶೋಕ್ ಬಾದರದಿನ್ನಿ (ರಂಗಕರ್ಮಿಗಳು)
 
ಧಾರವಾಡ ಜಿಲ್ಲೆ
ಸಂಸ ರಂಗಪತ್ರಿಕೆ ಮತ್ತು ಗಣಕರಂಗ, ಧಾರವಾಡ
ಸಿಜಿಕೆ ರಂಗ ಪುರಸ್ಕಾರ : ವಿಲಾಸ ಶೇರಖಾನ (ರಂಗಕರ್ಮಿಗಳು)
 
ಕಲಬುರಗಿ ಜಿಲ್ಲೆ
ಸಂಭ್ರಮ ಕಲಾಕುಟೀರ ಕಲಬುರಗಿ
ಸಿಜಿಕೆ ರಂಗ ಪುರಸ್ಕಾರ : ದೂತ್ರೆ ಮತಿ (ರಂಗಕಲಾವಿದರು)
 
ಯಾದಗಿರಿ ಜಿಲ್ಲೆ
ಸಂಸ ಥಿಯೇಟರ್ ಬೆಂಗಳೂರ-ಸಂಧ್ಯಾ ಸಾಹಿತ್ಯ ವೇದಿಕೆ ಶಹಾಪುರ
ಸಿಜಿಕೆ ರಂಗ ಪುರಸ್ಕಾರ : ಎಲ್.ಬಿ.ಕೆ. ಆಲ್ದಾಳ ಮಳ್ಳಿ (ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರು)
 
ಹಾಸನ ಜಿಲ್ಲೆ
ಕಲಾಸಿರಿ ನಾಟಕ ಶಾಲೆ ಹಾಸನ
ಸಿಜಿಕೆ ರಂಗ ಪುರಸ್ಕಾರ : ಪ್ರಸಾದ್ ರಕ್ಷಿದಿ (ರಂಗ ಸಂಘಟಕರು)
 
ಮಂಡ್ಯ ಜಿಲ್ಲೆ
ಯುವದನಿ ಸೇವಾ ಪ್ರತಿಷ್ಠಾನ, ಮಂಡ್ಯ
ಸಿಜಿಕೆ ರಂಗ ಪುರಸ್ಕಾರ : ಜಿ.ಎಂ. ಸಿದ್ಧರಾಜು ಗುರುದೇವರಹಳ್ಳಿ (ರಂಗನಟರು)
 
ವಿಜಯಪುರ ಜಿಲ್ಲೆ
ರಂಗಮೇಳ ಕಲಾ ಸಂಸ್ಥೆ, ವಿಜಯಪುರ
ಸಿಜಿಕೆ ರಂಗ ಪುರಸ್ಕಾರ : ವಿಜಯ ಮುಳವಾಡ (ರಂಗ ಕಲಾವಿದರು)
 
ತುಮಕೂರು ಜಿಲ್ಲೆ
ಕಲರ್ಸ್ ಗ್ರೂಪ್ (ರಿ.) ತುಮಕೂರು
ಸಿಜಿಕೆ ರಂಗ ಪುರಸ್ಕಾರ : ಲಕ್ಷ್ಮಣದಾಸ್ (ಹರಿಕಥಾ ವಿಧ್ವಾನ್)
 
ಗದಗ ಜಿಲ್ಲೆ
ಗೋಲಬಾವಿ ಸಾಂಸ್ಕೃತಿಕ ಸಂಘ, ಗದಗ
ಸಿಜಿಕೆ ರಂಗ ಪುರಸ್ಕಾರ : ಶ್ರೀಮತಿ ವಿದ್ಯಾಮೊರಬ (ಚಿತ್ರ ಕಲಾವಿದರು)
 
ಬಳ್ಳಾರಿ ಜಿಲ್ಲೆ
ಸಂಸ್ಕೃತಿ ಪ್ರಕಾಶನ ಹಾಗೂ ಚಿಗುರು ಕಲಾತಂಡ ಬಳ್ಳಾರಿ.
ಸಿಜಿಕೆ ರಂಗ ಪುರಸ್ಕಾರ : ಪಿ.ಅಬ್ದುಲ್ಲ (ಮಕ್ಕಳ ರಂಗಕರ್ಮಿ)
 
ದಾವಣಗೆರೆ ಜಿಲ್ಲೆ
ಸ್ಪೂರ್ತಿ ಸೇವಾ ಸಂಘ, ದಾವಣಗೆರೆ
ಸಿಜಿಕೆ ರಂಗ ಪುರಸ್ಕಾರ : ಗೋಂದಳಿ ದುರ್ಗಪ್ಪ ಅರಸಿಕೆರೆ (ಜಾನಪದ ಕಲಾವಿದರು)
 
ಚಾಮರಾಜ ನಗರ ಜಿಲ್ಲೆ
ರಂಗವಾಹಿನಿ, ಚಾಮರಾಜನಗರ
ಸಿಜಿಕೆ ರಂಗ ಪುರಸ್ಕಾರ : ಗಣಪತಿ ನಾಗೇಶ್ (ರಂಗಕರ್ಮಿ)
 
ಹಾವೇರಿ ಜಿಲ್ಲೆ
ಜಿಲ್ಲಾ ಕಲಾ ಬಳಗ ಹಾವೇರಿ
ಸಿಜಿಕೆ ರಂಗ ಪುರಸ್ಕಾರ : ಸತೀಶ ಕುಲಕರ್ಣಿ (ಬಂಡಾಯ ಸಾಹಿತಿಗಳು)
 
ರಾಯಚೂರು ಜಿಲ್ಲೆ
ಅಂಕಿತ ಸಂಸ್ಥೆ ರಾಯಚೂರು
ಸಿಜಿಕೆ ರಂಗ ಪುರಸ್ಕಾರ : ನಾಗಪ್ಪ ಬಾಳೆ (ರಂಗಕಮರ್ಿಗಳು)
 
ಕೊಡಗು ಜಿಲ್ಲೆ
ರಂಗಗೆಳೆಯರು ಸರಕಾರಿ ಪದವಿ ಪೂರ್ವ ಕಾಲೇಜು. ಪೊನ್ನಂಪೇಟೆ
ಸಿಜಿಕೆ ರಂಗ ಪುರಸ್ಕಾರ : ಅನಿತಾ ಕಾರಿಯಪ್ಪ (ರಂಗನಟಿ)
 
ಬೆಂ ಗ್ರಾಮಾಂತರ ಜಿಲ್ಲೆ
ರಂಗ ಸ್ಪೂರ್ತಿ ಕೇಂದ್ರ ನೆಲಮಂಗಲ
ಸಿಜಿಕೆ ರಂಗ ಪುರಸ್ಕಾರ : ಬಾಳೇಕಾಯಿ ನಾಗರಾಜ್ (ಪರಿಸರ ಪ್ರೇಮಿ)
 
ಉತ್ತರ ಕನ್ನಡ ಜಿಲ್ಲೆ
ಕರ್ನಾಟಕ ಸಂಘ ಅಂಕೋಲ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಅಂಕೋಲ
ಸಿಜಿಕೆ ರಂಗ ಪುರಸ್ಕಾರ : ಕೆ. ರಮೇಶ್ ಅಂಕೋಲ (ಯುವ ರಂಗಕರ್ಮಿಗಳು)
 
ಬೆಳಗಾವಿ ಜಿಲ್ಲೆ
ರಂಗಸಂಪದ (ರಿ.) ಬೆಳಗಾವಿ
ಸಿಜಿಕೆ ರಂಗ ಪುರಸ್ಕಾರ : ವಿಶ್ವನಾಥ ಗುಗ್ಗರಿ (ರಂಗಕರ್ಮಿ ಮತ್ತು ಚಿತ್ರಕಲಾವಿದರು)
 
ಕೊಪ್ಪಳ ಜಿಲ್ಲೆ
ಕವಿ ಸಮೂಹ ಮತ್ತು ಕನ್ನಡ ನೆಟ್ ಡಾಟ್ಕಾಮ್, ಕೊಪ್ಪಳ
ಸಿಜಿಕೆ ರಂಗ ಪುರಸ್ಕಾರ : ವಿರುಪಾಕ್ಷಪ್ಪ ದುತ್ತರಗಿ (ರಂಗಕರ್ಮಿಗಳು)
 
ಉಡುಪಿ ಜಿಲ್ಲೆ
ನಮ ತುಳವೇರ್ ಕಲಾ ಸಂಘಟನೆ, ನಾಟ್ಕದೂರು ಮುದ್ರಾಡಿ.
ಸಿಜಿಕೆ ರಂಗ ಪುರಸ್ಕಾರ : ಬಿ.ಎಸ್. ರಾಮಶೆಟ್ಟಿ ಹಾರಾಡಿ (ರಂಗಕರ್ಮಿಗಳು)
 
ಶಿವಮೊಗ್ಗ ಜಿಲ್ಲೆ
ಸ್ಪಂದನ (ರಿ.) ಸಾಗರ
ಸಿಜಿಕೆ ರಂಗ ಪುರಸ್ಕಾರ : ಎಸ್. ಮಾಲತಿ ಸಾಗರ (ರಂಗಕರ್ಮಿಗಳು)
 
ರಾಮನಗರ ಜಿಲ್ಲೆ
ಮಾನಸ ಟ್ರಸ್ಟ್ (ರಿ.) ಪಟ್ಲು
ಸಿಜಿಕೆ ರಂಗ ಪುರಸ್ಕಾರ : ಕುಂದೂರುದೊಡ್ಡಿ ಪುಟ್ಟರಾಜು (ರಂಗಕಲಾವಿದರು)
 
ದಕ್ಷಿಣ ಕನ್ನಡ ಜಿಲ್ಲೆ
ಮಹಾಲಸಾ ಚಿತ್ರಕಲಾ ಶಾಲೆ, ಮಂಗಳೂರು ಬೆಳಿಗ್ಗೆ : 11.00
ಸಿಜಿಕೆ ರಂಗ ಪುರಸ್ಕಾರ : ಪುರುಷೋತ್ತಮ್ ನಾಯಕ್ (ಚಿತ್ರಕಲಾವಿದರು)
 
ಚಿಕ್ಕಬಳ್ಳಾಪುರ ಜಿಲ್ಲೆ
ದಲಿತ ಸಾಹಿತ್ಯ ಪರಿಷತ್ತು, ಚಿಕ್ಕಬಳ್ಳಾಪುರ
ಸಿಜಿಕೆ ರಂಗ ಪುರಸ್ಕಾರ : ಕೆ. ನಾರಾಯಣಸ್ವಾಮಿ ( ಜಲತಜ್ಞರು )
 
ಕೋಲಾರ ಜಿಲ್ಲೆ
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಮಾಲೂರು
ಸಿಜಿಕೆ ರಂಗ ಪುರಸ್ಕಾರ : ಅಚ್ಯುತ್ ಸಮುದಾಯ ಕೆಜಿಎಫ್ (ರಂಗಕಲಾವಿದರು)
 
ಚಿಕ್ಕಮಗಳೂರು ಜಿಲ್ಲೆ
ನಟನ ರಂಗ, ಚಿಕ್ಕಮಗಳೂರು
ಸಿಜಿಕೆ ರಂಗ ಪುರಸ್ಕಾರ : ಜಗದೀಶ್ ಆರ್. ಜಾನಿ ಎನ್ಎಸ್ಡಿ (ರಂಗಕರ್ಮಿಗಳು)
 
ಮೈಸೂರು ಜಿಲ್ಲೆ
ನೆಲೆ ಹಿನ್ನೆಲೆ, ಮೈಸೂರು
ಸಿಜಿಕೆ ರಂಗ ಪುರಸ್ಕಾರ : ಎಸ್.ಆರ್ ರಮೇಶ್ (ರಂಗಕರ್ಮಿಗಳು)
 
 

‍ಲೇಖಕರು G

June 23, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ನಾದಾ

    ಚೆನ್ನಾಗಿ ಆಯೋಜಿಸಿದ್ದೀರಿ.ಶುಭಂ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: