ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಾಂಧೀ ಪುಸ್ತಕ ಹುಡುಕೋದೇ ನಿಲ್ಲಿಸಿ, ನಿಟ್ಟುಸಿರಾಗಿ ಪುಸ್ತಕದ ಕಪಾಟನೊಮ್ಮೆ ನೋಡಿದೆ..

nagu talvar

ನಾಗು ತಲ್ವಾರ್

people sculptureರಾತ್ರಿ ಮಹಡಿ ಮೇಲಿನ ಕಪಾಟೊಳಗೆ ಪುಸ್ತಕ ಹುಡುಕುತ್ತಿದ್ದೆ, ಏನ್ ಪಪ್ಪಾ ಮಾಡ್ತಿದ್ದೀಯ? ನನ್ನ ಆರು ವರ್ಷದ ಮಗಳು ಮಂಥನ ಹತ್ತಿರ ಬಂದು ಕೇಳಿದಳು.

ಈ ಟೇಬಲ್ ಮೇಲೆ ಚಷ್ಮಾ ಹಾಕಿದ ಅಜ್ಜನ ಪುಸ್ತಕ ಇಟ್ಟಿದ್ದೆ ಮೊನ್ನೆ, ಅದನ್ನೇನಾದ್ರೂ ನೋಡಿದೆಯಾ ಅಂದೆ. ಗಾಂಧೀ ತಾತಂದೂ ಅಲ ಪಪ್ಪಾ. ನಾನೂ ನೋಡಿದ್ದೆ, ಇಲ್ಲೇ ಇತ್ತು ನಿನ್ನೆ ಅನ್ನುತ್ತಾ.. ಪಪ್ಪಾ ಇನ್ನುಮುಂದೆ ಅಮ್ಮಗೆ ಹೇಳು ಚಿಚ್ಚಿ(ಮಾಂಸ) ಮಾಡಬೇಡ ಅಂತ, ನಾನಂತೂ ಉಣ್ಣಲ್ಲ ನೋಡು ಅಂದಳು.

ಯಾಕವ್ವ ಏನಾಯಿತು ಅಂದೆ. ಮೊನ್ನೆ ಆರತಿ ಬೆಳಗಕ್ಕೆ ನಾನು, ಚೇತು ಗುಡಿಗೆ ಹೋಗಿದ್ವಲ್ಲಾ? ನನ್ನ ಹೊರಗೇ ನಿಲ್ಲಿಸಿ, ತಟ್ಟಿ ಇಸ್ಕೊಂಡು ಬೇರೆಯವರು ಬೆಳಗಿ ಕೊಟ್ಟರು. ಚೇತುನ್ನ ಒಳಗೆ ಬಿಟ್ಟಿದ್ರೂ. ನಾನು ಚೇತುನಾ ಕೇಳಿದೆ ದೊಡ್ಡೋರು ನನ್ನ ಯಾಕೆ ಹೊರಗೆ ನಿಲ್ಲಿಸಿದ್ರೂ, ಅಂತ. ಅದಕ್ಕೆ ಅವಳು ನೀವು ಮಾಂಸ ತಿಂತೀರಲ್ಲಾ ನೀವು ಗುಡಿ ಒಳಕೆ ಹೋಗಬಾರದು ಅಂದ್ಲೂ ಪಪ್ಪಾ..!

ಅದಕ್ಕೆ ನಾವೂ ತಿನ್ನೋದು ಬೇಡ plz..ಪಪ್ಪಾ..! ಅನ್ನೋ ವಿನಂತಿಗೆ ಗಾಂಧೀ ಪುಸ್ತಕ ಹುಡುಕೋದೇ ನಿಲ್ಲಿಸಿ, ನಿಟ್ಟುಸಿರಾಕಿ ಅವಳ ತಲೆ ಸವರುತ್ತಾ ಪುಸ್ತಕದ ಕಪಾಟನಮ್ಮೆ ನೋಡಿದೆ.. ಬುದ್ಧ, ಬಸವ, ಅಂಬೇಡ್ಕರ್ ನಕ್ಕಂತಾಯಿತು. ಸುಮ್ಮನೆ ಎರಡನೇ ಸಾಲಿನಲ್ಲಿದ್ದ ಚೆಗುವಾರನ ಪುಸ್ತಕ ಹಿಡಿದು ಕಳಗಿಳಿದು ಬಂದೆ.

‍ಲೇಖಕರು admin

9 December, 2015

1 Comment

  1. ಚಲಂ

    ಇದನ್ನು ಓದಿದ ಮೇಲೂ ಸಹಿಷ್ಣುತೆ..ಅಸಹಿಷ್ಣುತೆ ಬಗ್ಗೆ ಮಾತನಾಡಬಾರದು ಅಂತಾದರೆ ಸರಿ..
    ಹಿಂದೂ ಇತ್ತು…ಈಗಲೂ ಇದೆ..ಎಲ್ಲಾ ಬುಲ್ ಶಿಟ್.
    ಈಗಲೂ ಇರಬೇಕಂತ ಬಯಸುವ ಟೋನ್ ಇರುವಂತಿದೆ..ಸಾಕ್ಷಿ ಬೇಕಾ..?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading