ಈಗ ಲಕ್ಷ್ಮೀ ಮುಟ್ಟಾದಳು, ಶಿ ಈಸ್ ಹ್ಯಾಪೀ ಟು ಬ್ಲೀಡ್..

ಸಂಯುಕ್ತ ಪುಲಿಗಳ್ 

coupleಎಂಟೂವರೆಯ ಮುಂಜಾವು!
ರೂಮಿನ ಕಿಟಕಿ ಚಿಕ್ಕದು, ಸೂರ್ಯನಿಗೆ ತಾವಿಲ್ಲ
ಒಂದಷ್ಟು ಬೆಳಕು ಹೇಗೋ ಒಳಗೆ
ಕಣ್ಣೊಳಗೆ…

ಕಲಸುಮೇಲೋಗರ ಕನಸ ಕೆದಕಿ
ಕಣ್ಣುಜ್ಜುತ್ತಾ ಎದ್ದರೆ.., ಸಮಯವಿದ್ದರೆ
ದಿನಪತ್ರಿಕೆ, ಇಲ್ಲದಿದ್ದರೆ
ಪುಟ್ಟ ಗೌರಿ ಮದುವೆ

ಪಾರ್ಲಿಮೆಂಟಲಿ ಸ್ಟೇಟು
ಮನೇಲಿ ಡಿಬೇಟು
ವಿತ್ ಕಾಫ಼ಿ ಬೈಟು

ಚೆನ್ನೈ ಮುಳುಗುತ್ತಿದೆ
“ಅಮ್ಮಾ ನೀರು ಕೇಳುತ್ತಾಳಾ?”
ವಾಟ್ಸಾಪ್ ಮೆಸೇಜು!
“ಭಾಯಿಯೋ ಔರ್ ಬಹನೋ”
ಅಯ್ಯೋ ಫ಼ೇಸ್ ಬುಕ್ಕೇ
ಕಿವಿ ಮುಚ್ಚು!

ಸಂಕಟದ ವೆಂಕಟ ಹುಚ್ಚನಾದನೇ
ಹುಷಾರ್ ಸಾರ್
ನ್ಯೂಸ್ ಚಾನಲ್ನಿಂದ ದೂರ
ಆರೋಗ್ಯ ಭಾಗ್ಯದ ಸೂತ್ರ

“ಬಾರಿಸು ಕನ್ನಡ ಡಿಂಡಿಮವ”
ನೀರು ಕಾದಿದೆ ಸ್ನಾನ ಮುಗಿಸಿ
ಟ್ರಾಫ಼ಿಕ್ಕು ಜಾಮಿನ ನಡುವೆ ಸಿಲುಕಿ
“ಸಂಜೆ ವೇಳೇಲಿ ತಂಪು ಗಾಳಿ ಬೀಸೋ ಸಮಯಾ….”

ಬೇಂದ್ರೆಯಜ್ಜ ಮಳೆಯಲಿ ನಿಂತು
ಪದ್ಯ ಓದಿದ್ದರಂತೆ
ಆಫ಼ೀಸಿನ ಈ-ಮೇಲಿನ್ನೂ ಕಳಿಸಿಲ್ಲ ನಾನು
ಈಗ ಲಕ್ಷ್ಮೀ ಮುಟ್ಟಾದಳು
ಶಿ ಈಸ್ ಹ್ಯಾಪೀ ಟು ಬ್ಲೀಡ್
ಪಾಪ ದೇವರಿಗೇನು ಗೊತ್ತು!?

(ಅ)ಸಹಿಷ್ಣುತೆ, (ಅ)ಸಮಾನತೆ
-ಗಳ ಅರಚಾಟಗಳ ನಡುವೆ
ನಮ್ಮೂರ ನಾರಾಯಣನಿಗಿನ್ನೂ
ಮೂಲೆಯ ಬರಿನೆಲ, ಹರಿದ ಚಡ್ದಿ…
ಸರ್ವಂ ಪಾಲಿಟಿಕ್ಸಾಯನ್ನಮಃ

ಸಾಹಿತ್ಯಾಭ್ಯಾಸ ಮಾಡೋಣ ನಿಲ್ಲಿ…
ಒಂಚೂರು ಪ್ರೆಸೆಂಟೇಶನ್ ಕೆಲಸ ಬಾಕಿ
“ಎಡ-ಬಲ” ಮಾರ್ಚ್ ಫ಼ಾಸ್ಟ್ ಮಾಡುವಾಗ
ಒಲೆಯ ಮೇಲಿನ ಹಾಲುಕ್ಕುಕ್ಕಿ ಕರಡು
ಯಾಕೋ ಬಿಪಿ ಏರಿದೆ
ಒಂದಷ್ಟು ಪ್ರಾಣಾಯಾಮ?

ಏನಿದ್ದರೇನು ಇಲ್ಲದೇನು
ವೀಕೆಂಡ್ ಗೇಟ್ವೇ ಇದೆಯಲ್ಲಾ
ಒಬ್ಸೀನ್ಲೀ ಬ್ಯೂಟಿಫ಼ುಲ್ ಜೀವನಕ್ಕಾಗಿ
ಓನ್ಲೀ ಕ್ರೋರ್ಸ್ ಅಪಾರ್ಟ್ಮೆಂಟೂ ಸಹ

ನಿಟ್ಟುಸಿರು…
ಕಣ್ಣ ಮುಚ್ಚುತ್ತೇನೆ ನಾನು
ಕಡಲೆಪರಿಶೆಯ ಬಣ್ಣಗಳು
ಎದುರು ಮನೆಯ ಮುದ್ದಾದ ಮಗುವ ನಗು
ಕಾಂಪೌಂಡಿನ ಮುಂದೆ ಮಲಗುವ ನಾಯಿ
ಇನ್ನೂ ಕಾಯುತ್ತವೆ ನನ್ನ

ಇರುವುದೆಲ್ಲವೂ ಇಷ್ಟೇ
ಆಗುವುದೆಲ್ಲವೂ ಅಷ್ಟೇ
“ಸರಿಯಾಗಿರುವುದೆಲ್ಲ ಸರಿಯಾಗಿದೆ”
ಸೋತ (?) ಭಾವದಲೇ ನೆಮ್ಮದಿ ಹುಡುಕುತ್ತಾ…

ಲೈಫ಼್ ಈಸ್ ಬ್ಯೂಟಿಫ಼ುಲ್!

‍ಲೇಖಕರು admin

December 9, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

14 ಪ್ರತಿಕ್ರಿಯೆಗಳು

  1. Bidaloti Ranganath

    ಪದ್ಯ ಚನ್ನಾಗಿದೆ.ಮತ್ತು ಹೊಸತನವಿದೆ.

    ಪ್ರತಿಕ್ರಿಯೆ
  2. ಚಲಂ

    ಎಂಟೂವರೆಯ ಮುಂಜಾವು…ಎಂಬುದಂತೂ ನಂಗೆ ಹೊಸತು..ಅಲ್ಲಿಂದ ಮುಂಜಾವು ಶುರುವಾದ ಮೇಲೆ ಎಲ್ಲಾ ಹೇಗಿರಬಹುದು ಎಂಬುದಕ್ಕೆ ಸಾಕ್ಷಿ.
    ಅದರ ನಡುವೆಯೂ ಏನೆಲ್ಲಾ ವಿಷಯಗಳು..ನಿಜಕ್ಕೂ ಹೊಸತಾಗಿದೆ

    ಪ್ರತಿಕ್ರಿಯೆ
  3. Malini

    ಸೊಗಸಾದ ಕವನ. ಓದಿದಷ್ಟೂ ಸ್ಫುರಿಸುತ್ತಲೇ ಇರುವ ಅರ್ಥಗಳು. ಸೋತ ಭಾವದಲ್ಲೇ ನೆಮ್ಮದಿ ಹುಡುಕುತ್ತಾ….. superb
    ಇಂತಹ ಮತ್ತಷ್ಟು ಕವನಗಳ ನಿರೀಕ್ಷೆಯಲ್ಲಿ.

    ಪ್ರತಿಕ್ರಿಯೆ
  4. ಜಯಶಂಕರ್ ಬೆಳಗುಂಬ

    ಅಬಸ್ಟ್ಯಕ್ಟ ಆಗಿದೆ ನೀವು ಏನೊಹೇಳಲು ಹೋಗಿ ಇನ್ಮೇನನ್ನೊ ಸಂಮಪ್ ಮಾಡಿರುವಂತೆ ಕಾಣುತ್ತೆ ಮೇಡಂ

    ಪ್ರತಿಕ್ರಿಯೆ
  5. Shivappa Ramakrishna

    Suttle reading of womens ‘ pain as well as pleasure. I like the writing. Congrats Samyuktha Puligal.

    ಪ್ರತಿಕ್ರಿಯೆ
  6. Gn Nagaraj

    ಜಿ.ಎಸ್ ಶಿವರುದ್ರಪ್ಪನವರ ಮುಂಬೈ ಜಾತಕವನ್ನು ನೆನಪಿಸುತ್ತಾ , ಬೆಂಗಳೂರು ಮುಂಬಯ ಆಗಿಯೇ ಬಿಟ್ಟಿತಲ್ಲಾ ಎನ್ನುವ ಹೆಣ್ಣು ನೋಟದ ವಿಷಾದವನ್ನು ಬೀರುತ್ತಾ ಚೆನ್ನಾಗಿ ಮೂಡಿ ಬಂದಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: