ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಾಂಧಿ ಕುಟ್ಟುವ ಕೋಲು

ಬಿದಲೋಟಿ ರಂಗನಾಥ್

ಗಾಂಧಿ ಕುಟ್ಟುವ ಕೋಲಿನ ಸದ್ದಿಗೆ
ಆಂಗ್ಲರು ನಿದ್ದೆಕೆಟ್ಟರು
ಭಾರತೀಯರು ನಿದ್ದೆಯಿಂದೆದ್ದರು

ಕನಸುಗಳು ಕೊನರುವ ಕೋಲಿನೊಳಗೆ
ಭಾರತಾಂಬೆಯನ್ನು ಬಿಡಿಸಿಕೊಳ್ಳುವ ಕನಸಿಗೆ
ಕಣ್ಣು ಮೂಡಿ, ಕತ್ತಲೆಯನ್ನು ಸೀಳುತಿತ್ತು.

ಅರಿವಿನ ದೀಪಕೆ
ಎಣ್ಣೆ ಹೊಯ್ದ ಗಾಂಧಿ
ಭಾರತೀಯರ ಮನಸುಗಳಿಗೆ
ಬೆಳಕು ಚೆಲ್ಲಿ.. ಒಗ್ಗಟ್ಟಿಗೆ ಗಜ್ಜೆ ಕಟ್ಟಿದರು.

ಗಾಂಧಿಯ ಮನಸಿನ ಕೋಲಿನ ಕಿಡಿ
ಪಂಜಾಗಿ, ಸುತ್ತಿದ ಬಟ್ಟೆ ಬ್ರಿಟೀಷರ ಅಟ್ಟಹಾಸವಾಗಿ
ಎಣ್ಣೆ , ಜಾಗೃತ ಮನಸುಗಳ ಅರಿವಾಗಿ
ದಾರಿಗೆ ದೀಪವಾಗಿ ನಡೆಕಾರನ ನಡೆಸುತಿತ್ತು.

ಆಂಗ್ಲರಿಗೋ
ಗಾಂಧಿಕುಟ್ಟುವ ಕೋಲಿನ ಮೇಲೆ ಕಣ್ಣು
ಎಷ್ಟೋ ಬಂದೂಕುಗಳು ಮಾತಾಡಿದರು
ಕೋಲು ಜಪ್ಪಯ್ಯ ಅನ್ನಲಿಲ್ಲ.!

ಅಹಿಂಸೆಯಿಂದ ಗೆಲ್ಲುವ ಮನಸ್ಸಾದರೂ
ಕುಟ್ಟುವ ಕೋಲಿನ ಸದ್ದಿಗೆ
ಬ್ರಿಟೀಷರ ಪಾರ್ಲಿಮೆಂಟೇ
ತರಗುಟ್ಟುತಿತ್ತು

ಆ ಕೋಲು ಎಂದೂ ನಿದ್ದೆ ಮಾಡಿದ್ದಿಲ್ಲ
ಮೂಲೆಯಲ್ಲಿ ನಿಂತರೂ ಬ್ರಿಟೀಷರ ಎದೆಗೆ
ಕುಟ್ಟುವ ಸದ್ದು ಕೇಳುತ್ತಲೇ ನಡುಕ ಹುಟ್ಟಿಸಿತ್ತು

ಎಲ್ಲಾ ಶಾಂತ ಹೋರಾಟಕ್ಕೂ
ಗಾಂಧಿ ಬೇಕೇ ಇರಲಿಲ್ಲ
ಅವರ ಕೋಲಿದ್ದರೆ ಸಾಕು !
ಅಷ್ಟೇ ಭಯ ಮರ್ಯಾದೆ ಕೋಲ ಕಂಡರೆ.

ಒಂದು ದಿನ
ಕಾಲು ಮುರಿದುಕೊಂಡ ಕೋಲು
ನೋವಿನಿಂದ ಸುಮ್ಮನೆ
ಕಣ್ಣ ರೆಪ್ಫೆ ಮುಚ್ಚಿತ್ತೇನೋ
ಉಸಿರೆಳೆದು ಉಸಿರ ಬಿಡುವಾಗ,
ನಾಥರಾಮ್ ಗೂಡ್ಸೆ ಎಂಬ ಹಂತಕ
ಕೋಲನ್ನೇ ಅಪಹರಿಸಿ ಸುಟ್ಟು ಬಿಟ್ಟ.!

ಸದ್ಯ
ಅಲ್ಲಿಗಾಗಲೇ
ಸ್ವತಂತ್ರದ ಭಾವುಟ
ಭಾರತಾಂಬೆಯ ಮುಡಿಯಲ್ಲಿತ್ತು.

ಕುಟ್ಟಿ ಎಚ್ಚರಿಸುವ ಕೋಲನ್ನ
ಕಳೆದು ಕೊಂಡ ದುಃಖ
ಭರತಖಂಡದಲ್ಲಿ ಮಡುಗಟ್ಟಿತ್ತು.!!

‍ಲೇಖಕರು Admin

4 October, 2020

2 Comments

  1. Anonymous

    ರಂಗನಾಥ ಸರ್ ನಿಜವಾಗಿಯೂ ಕೋಲಿನ ಶಕ್ತಿ ಅನಿರ್ವಚನೀಯ. ಬಾಪೂಜಿ ನಿಮ್ಮ ಕೈಯೊಳಗಿದ್ದ ಕೋಲು ಕೋಲ್ಮಿಂಚಿಗೂ ತರಿಸಬಹುದಲ್ವೆ ಸೋಲು. ಬಾಲ್ಯದಲ್ಲಿ ಓದಿದ್ದು ಕವಿಯ ನೆನಪಿಲ್ಲ.

  2. vasudeva nadig

    Ghandhiji avara kolina bagge heege yochisida bage ananya mattu ruupakaatmaka…aparoopada chintane. ee hindeuu ranganath ambedkar kotina bagge barediddaru..parichita sangatigalhannu hosa aayamagalhalli noduva avara niluvu shlaaghaneeya..kaviteya shareera innashtu kaavyatmaka vaagabahudittu..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading