ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಾಂಧಾರಿ ತುಣುಕುಗಳು             

       

 

 

ದಿಶಾ ಗುಲ್ವಾಡಿ  

 

 

 

 

ಬಿಸಿಲ ತುಣುಕೊಂದು ಸಿಂಗರಿಸಿಕೊಳ್ಳಲು

ಮಳೆ ಕನ್ನಡಿ ಹಿಡಿಯಿತು ಬಿಸಿಲು ಮಳೆಬಿಲ್ಲಾಯಿತು

ಕುದಿದು, ಹಬೆಯಾಗಿ, ತೊಟ್ಟಿಕ್ಕಿ,ತಳಸೇರಿ, ತಣಿದು,

ಹೊರಬಿದ್ದ ನೋವುಮತ್ತೆ ಜಾರುತಿದೆ

ಹನಿಯಾಗಿ ಹರಳುಗಟ್ಟಿಸುವ ಜನರ ಮಧ್ಯೆ…

ನೆನೆದಷ್ಟೂ ಹರಳುಗಟ್ಟುವ ನೋವನ್ನ ತಂದು ಅಂಗಳದಲ್ಲಿಟ್ಟಿದ್ದೇನೆ

ಹೂ ಬಿಸಿಲಿಗೆ ಸೋಕಿ ಹನಿಯಾಗಿಹಿಡಿ ಮಣ್ಣನ್ನ ತೇವಗೊಳಿಸಲೆಂದು

ಹೆತ್ತು ಹಗುರವಾಗುವ ಬಸುರಿ ಭಾರವಾಗುವುದು ತಾಯ್ತನದಲ್ಲಿ

ಕರಿಮಣಿಯೆಂಬುದು, ಅವನು ಅವಳೆದೆಯ

ಕನಸುಗಳನ್ನಕದ್ದು ಪೋಣಿಸಿದ ಸರವಾಗಬೇಕು

ಮೋಡಕ್ಕೆ ಭೂಮಿ ಚುಂಬಿಸುವ ಬಯಕೆ,

ನಡುವಿನ ಆಕಾಶ ಒದ್ದೆಯಾಯಿತು..

ನೆನೆದಷ್ಟೂ ಗಾಢವಾಗುವ ನೋವುಗಳಿಗೆಲ್ಲ

ಸುಣ್ಣ ಹಚ್ಚಿಬಿಡಿ ಹೊಸ ಚಿತ್ತಾರ ಬರೆಯಬೇಡಿ.

‍ಲೇಖಕರು admin

8 August, 2017

10 Comments

  1. Sasashiv soratur

    ಹೆತ್ತು ಹಗುರವಾಗುವ ಬಸುರಿ ಭಾರವಾಗುವುದು ತಾಯ್ತನದಲ್ಲಿ

    ಅದ್ಬುತ ಸಾಲು

    • ದಿಶಾ

      ಧನ್ಯವಾದಗಳು
      -ದಿಶಾ ಗುಲ್ವಾಡಿ

  2. ಅಕ್ಕಿಮಂಗಲ ಮಂಜುನಾಥ

    ಚೆನ್ನಾಗಿದೆ.

    • ದಿಶಾ ಗುಲ್ವಾಡಿ

      ಧನ್ಯವಾದಗಳು

  3. chi na hally kirana

    vishadada naduve u jeevena Preetiyannu , ukki hariuva manasugalannu kavite yalli bandisalagide…
    thanks for the poet with regards.

    • ದಿಶಾ ಗುಲ್ವಾಡಿ

      ಧನ್ಯವಾದಗಳು☺

  4. Vijaykumar wadawadagi

    ಕರಿಮಣಿಯೆಂಬುದು,ಅವನು ಅವಳೆದೆಯ ಕನಸುಗಳನ್ನಕದ್ದು ಪೋಣಿಸಿದ ಸರವಾಗಬೇಕು…ಪದಗಳ ಪೋಣಿಸಿದ ರೀತಿ ಗೆಳೆಯ ಕರಿಮಣಿ ಕಟ್ಟು ಹಿಡಿದು ಓಡಿಬರುವಂತಿದೆ.

    • ದಿಶಾ ಗುಲ್ವಾಡಿ

      ಧನ್ಯವಾದಗಳು☺

  5. ನಿಮ್ಮ ಪ್ರೀತಿಸುವ ಜೀವಾ

    ಕರಿಮಣಿಯೆಂಬುದು, ಅವನು ಅವಳೆದೆಯ

    ಕನಸುಗಳನ್ನಕದ್ದು ಪೋಣಿಸಿದ ಸರವಾಗಬೇಕು

    ಮುದ್ದು ಭಾವಗಳ, ಸಾಲುಗಳು,,,,,,,, ಇದಕ್ಕಿಂತ ಇನ್ನೆಂತಹ ಸಾಲುಬೇಕು ಮದುವೆಯ ಭಾವ ಅರಿಯಲು

    • ದಿಶಾ ಗುಲ್ವಾಡಿ

      ಧನ್ಯವಾದಗಳು ನವೀನ್.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading