ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಡಿ ದಾಟಿ ಹರಡಿದ ಕತ್ತಲೆದೆ ಸೀಳಿ..

ಸರೋಜಿನಿ ಪಡಸಲಗಿ

**

ಮನದ ಕಿಟಕಿ ಇಷ್ಟಗಲ ತೆಗೆದು

ಅದ ಮೀರಿ ಕಣ್ಣರಳಿಸಿ ಅಷ್ಟಗಲ

 ಗಡಿದಾಟಿ ಹರಡಿದ ಕತ್ತಲೆದೆ ಸೀಳಿ

ತಡಕಿ ಸೋತ ಜೀವ ದಿಕ್ಕು ತಪ್ಪಿದರೂ

ಊಂ ಹೂಂ ಏನೂ ಗೊತ್ತಾಗಲೇ ಇಲ್ಲ

ಹೌದು ಎಲ್ಲಾ  ಅದಲು ಬದಲು ಗದ್ದಲ

ನೂರು ಕತೆ ಹೇಳುವ ನೆನಪು ಇಣುಕುವ ನೆರಿಗೆಗಳ

ನೆರವಿಯಲಿ ಮೌನ ಸಾಮ್ರಾಜ್ಯ 

ಯೋಚನೆಗಳ ಭಾರಕೆ ನಜ್ಜು ಗುಜ್ಜಾದರೂ

ಊಂ ಹೂಂ ಏನೂ ಗೊತ್ತಾಗಲೇ ಇಲ್ಲ 

ಗಾಬರಿ  ಗೊಂದಲದಲಿ ಅತ್ತಿತ್ತ ಹೊರಳಿ

ಧಡಬಡಿಸಿದರೆ ಅಲ್ಲೇನಿದೆ ಅಷ್ಟಾವಕ್ರ ನಗು

ಕೆಂಜುಗಣ್ಣ ತುಂಬ ಸತ್ತ ಕನಸುಗಳ ನೆರಳು 

 ಹುಚ್ಚೋ ಮರುಳೊ ತಿಳೀದೆ ಪರಚಿಕೊಂಡರೂ

ಊಂ ಹೂಂ ಏನೂ ಗೊತ್ತಾಗಲೇ ಇಲ್ಲ

ಅಸಹನೀಯ ಸ್ಥಿತಿ ಕಣ್ಬಾಯಿ ಬಿಡುತ ಕೇಳಿತು 

ಏನಾಗ್ತಿದೆ ತಿಳಿಯಾಗಿ ಅರ್ಥವಾಗೋದ್ಯಾವಾಗ

ಬಿಟ್ಟು ಬಿಡು ಆ ಹುಚ್ಚು ಯೋಚನೆ ಆಸೆ ಎಲ್ಲಾ

ಈ ಗೊತ್ತಾಗದ ಅರ್ಥವಾಗದ ಹೊರೆ ಹೊತ್ತು  

ಶೇಷಗಳ ಶೇಷವಾಗೋದಷ್ಟೆ ಮತ್ತೇನಿಲ್ಲ ವಿಶೇಷ 

‍ಲೇಖಕರು Admin MM

3 May, 2024

4 Comments

  1. Vranda Sangam

    Sooooooper sooooooper

    • Sarojini Padasalgi

      Thank you Vrunda

  2. Shrivatsa Desai

    ಚಂದನ್ನ ಕವಿತೆ. ಶೇಷಗಳನ್ನು ಎಲ್ಲ ಪೇರಿಸಿ ನೋಡಿದರೂ ಅಶೇಷವೇ . ಈ ಪ್ರತಿಕ್ರಿಯೆಯೂ ಸಹ!

    • Sarojini Padasalgi

      Thank you Shrivastava Desai Sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading