ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಂಗಾ ಚಕ್ರಸಾಲಿ ಕವಿತೆ- ಮೌನದಲ್ಲೂ ಮಾತುಗಿಳಿಯುತ್ತೇನೆ..

ಗಂಗಾ ಚಕ್ರಸಾಲಿ

ಅವನಾಡಿದ ಪ್ರತಿಮಾತಿಗೂ..
ಅರ್ಥ ಹುಡುಕುತ್ತೇನೆ
ಆ ಮಾತುಗಳು ಮನದ ಕೋಣೆಯಿಂದ
ಹೊರಹೋಗದಂತೆ ಬಂಧಿಸುತ್ತೇನೆ..
ಅವನೊಂದಿಗೆ ಮೌನಿಯಾಗಿಯೇ..
ಮಾತಿಗಿಳಿಯುತ್ತೇನೆ..

ತಪ್ಪು ನನ್ನದಾ..ಅವನದಾ
ಕಾರಣಗಳನ್ನು ಹೆಕ್ಕುತ್ತೇನೆ
ಕಂಗಳಲ್ಲಿ ಹನಿ ಕೂಡಿ
ನೀರಾಗಿ ಹರಿಯಗೊಟ್ಟು
ಮೌನಕ್ಕೆ ಜಾರುತ್ತೇನೆ..
ಅಲ್ಲಿಯೇ ಮಾತಿಗಿಳಿಯುತ್ತೇನೆ..

ಅವನ ಪ್ರತಿ ನೋಟಕ್ಕೂ
ನೋಟಗಳನ್ನು ಬೆರೆಸುತ್ತೇನೆ
ದೃಷ್ಟಿಯುದ್ಧವೇ ನಡೆಯುತ್ತದೆ ಆಗ
ಮಾತುಗಳು ಹೊರಬಾರದೇ..
ಮನದೊಳಗೆ ಕಿರುಚುತ್ತವೆ
ಹೆಣ್ಣಮನಸ್ಸನ್ನ ಅರಿಯದವನೆಂದು..

ಸ್ವಾಭಿಮಾನಿ ಹೃದಯವದು
ಬಾಯಿಗೆ ಆದೇಶ ನೀಡಿದೆ
ಮಾತುಗಳನ್ನು ಹೊರಕ್ಕೆ ಬೀಳಿಸದಂತೆ
ತಪ್ಪಿಲ್ಲದ ತಪ್ಪನ್ನು ಒಪ್ಪಿಕೊಳ್ಳದಂತೆ
ಹಾಗಾಗಿಯೇ ಮನದಲ್ಲೇ ಮಾತಿಗಿಳಿಯುತ್ತೇನೆ

ದಿನಗಳು ಕಳೆದವು
ಅವನದೂ ನನ್ನಂತಯೇ ಹಠ
ಮನಗಳೇ ಮಾತನಾಡುತ್ತಿವೆ
ಆದರೆ..ಒಮ್ಮೆಲೇ ಭಯ ಬೀಳುತ್ತೇನೆ
ಸುಪ್ತ ಜ್ವಾಲಾಮುಖಿಯು
ಒಮ್ಮೆಲೇ ಸ್ಫೋಟಿಸುವದಂತೆ?
ವಿನಾಶ ಮಾಡುವದಂತೆ…?

‍ಲೇಖಕರು avadhi

3 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading