ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಕೊನೆಯಿರದ ಹಾದಿಯಲಿ ಸಾವಿರದ ಕನಸುಗಳು..' – ಜಯಶ್ರೀ

ಹಾದಿ

ಜಯಶ್ರೀ ಬಿ ಕದ್ರಿ


ಹಾದಿ ಮುಗಿಯುವುದಿಲ್ಲ
ತಿರುವುಗಳು ಕೋರೆಗಳು
ಹಾದಿ ಮಿಗಿಲೋ
ವೃತ್ತ ಹೆಚ್ಚೋ
 
ಮುಳ್ಳು ಕಂಟಿಗಳು
ಮಬ್ಬು ದಾರಿಗಳು
ಹೊದರಿನಲ್ಲೆಲ್ಲೊ
ಅವಿತ ಹಾವು
 
ಹಾದಿಯಲೆಲ್ಲ
ಸುರಗಿ ಹೂವಿನ ಘಮಲು
ಬೆಟ್ಟದೊಡಲಿನ ತಾಯಿ
ಕರೆವ ಮುಗಿಲು
 
ಬಾನು ಕರೆದಾಗೆಲ್ಲ
ಹಾದಿಯಲಿ ಪುಳಕ
ಇರುಳು ಕಳೆದಂತೆಲ್ಲ
ನಿತ್ಯ ಜನ್ಮ
 
ಕೊನೆಯಿರದ ಹಾದಿಯಲಿ
ಸಾವಿರದ ಕನಸುಗಳು
ಹಾದಿ ಮುಗಿಲೋ ವೃತ್ತ ಮಿಗಿಲೋ
ಹಾದಿಯೇ ವೃತ್ತವೋ
 

‍ಲೇಖಕರು G

26 May, 2015

4 Comments

  1. bidaloti Ranganath

    ಕವಿತೆ ಸ್ವಾದಭರಿತವಾಗಿ,ಭಾವನೆಗಳ ಸಂಗಡ ಕುಂತು ಹಬ್ಬದೂಟ
    ಮಾಡಿದೆ.

  2. smitha

    Thumba chennagide

  3. ಅಕ್ಕಿಮಂಗಲ ಮಂಜುನಾಥ

    ಪದ್ಯ ಚೆನ್ನಾಗಿದೆ.

  4. Jayashree b kadri

    Thank you Smitha and Ranganath

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading