ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೊಟ್ರೇಶ್ ಅರಸೀಕೆರೆ ಕವಿತೆ- ನಾವೆಂದೂ ಪ್ರೇಮಿಗಳಾಗಲೇ ಇಲ್ಲ…

ಕೊಟ್ರೇಶ್ ಅರಸೀಕೆರೆ

ನಾವೆಂದೂ ಪ್ರೇಮಿಗಳಾಗಲೇ ಇಲ್ಲ
ಏಕೆಂದು ಈಗ ಕಾರಣ ಹುಡುಕುತ್ತಿರುವೆ

ಕೈ ಹಿಡಿದು ಎಂದೂ ನಡೆಯಲಿಲ್ಲ
ಭುಜ ಭುಜ ಒರಗಿ ಕೂರಲಿಲ್ಲ
ನಗಲಿಲ್ಲ ಒಮ್ಮೆಯೂ ಬೆನ್ನು ಬೆನ್ನು
ಆನಿಸಿಕೊಂಡು

ತುಟಿ ತುಟಿ ಒತ್ತಿಕೊಂಡು ದೀರ್ಘವಾಗಿ
ಚುಂಬಿಸಲಿಲ್ಲ
ಕಳೆದುಕೊಂಡ ತೂಕವ ಲೆಕ್ಕಾಚಾರ
ಹಾಕಲಿಲ್ಲ
ಹಾಸ್ಯಪ್ರಜ್ಞೆಯನು ಬೆಳೆಸಿಕೊಳ್ಳಲಿಲ್ಲ

ಮಾತಾಡಿದೆವು ಗಂಟೆಗಟ್ಟಲೆ ಬಿಸಿಯಾಗುವವರೆಗೂ ನಮ್ಮ
ಫೋನ್ ಬ್ಯಾಟರಿಗಳು
ಒಬ್ಬರ ಮೇಲೆ ಒಬ್ಬರು ಆರೋಪ
ಮಾಡಿದೆವು
ಮುನಿಸಿಕೊಂಡೆವು ಸುಮ್ಮ ಸುಮ್ಮನೆ

ನಾವು ಭೇಟಿಯಾದಾಗ ಸೃಷ್ಟಿಸಿಕೊಳ್ಳಲಿಲ್ಲ ಖಾಸಗಿ
ಕ್ಷಣಗಳ
ಒಮ್ಮೆಯೂ ತಬ್ಬಿಕೊಳ್ಳಲಿಲ್ಲ
ಹೃದಯಗಳು ಒಂದಾಗುವಂತೆ

ವಿಶ್ವಾಸವಿಡಲಿಲ್ಲ ನಮ್ಮ ಮೇಲೆ
ಬೇರೆಯವರ ಅವಿಶ್ವಾಸದ ಬಗ್ಗೆ
ಮಾತಾಡಿಕೊಂಡೆವು

ನಾವೆಂದೂ ಪ್ರೇಮಿಗಳಾಗಲೇ ಇಲ್ಲ
ಸತ್ಯವಾಗಲೂ ನಮ್ಮ ಹೃದಯಗಳ
ಮೇಲಾಣೆ

ಎಲ್ಲಕ್ಕಿಂತ ಮುಖ್ಯ ಕಾರಣ
ಹುಡುಕಿರುವೆ
ನಮಗೆ ಪ್ರೇಮವೆಂದರೇನೆಂದು
ಗೊತ್ತೇ ಇರಲಿಲ್ಲ

‍ಲೇಖಕರು Admin

21 September, 2022

2 Comments

  1. Kotresh T A M

    ಧನ್ಯವಾದಗಳು ಅವಧಿ ಗೆ

  2. Kotresh Arsikere

    ಧನ್ಯವಾದಗಳು ಅವಧಿಗೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading