ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೈಕಾಲುಗಳನ್ನು ಎಳೆಸಿಕೊಳ್ಳುವ ಗೀಳು..

ಸುಷ್ಮಿತಾ ಶೆಟ್ಟಿ 

ಕೈಕಾಲುಗಳನ್ನು ಎಳೆಸಿಕೊಳ್ಳುವ ಗೀಳು
ನಮ್ಮನ್ನು ಎಂದು ಹತ್ತಿತು ಎಂದು ಅರ್ಥ
ಮಾಡಿಕೊಳ್ಳುವುದರಲ್ಲೇ ಒಗ್ಗಿಹೋಗುವೆವು
ನಡೆವುದೆಷ್ಟೋ ಅಷ್ಟೇ ಎಂದು
ಹೊರಡಲವಾದಾಗಲೂ ಕಟ್ಟಿಸಿಕೊಂಡ
ಸೂತ್ರಗಳು ಎಳೆದು ತಡೆಯುವವು

ಥೈ ಥೈ ಥೋಮ್ ಗಳು ಎಡಕ್ಕೆರಡು
ಬಲಕ್ಕೊಂದೆಂಬ ಕಲಿತ ಪಟ್ಟನ್ನೇ ದಿಕ್ಕರಿಸಿ
ತಾಳಗಳೂ ಹದ್ದುಬಸ್ತಿನಲ್ಲೇ ಬಿದ್ದು
ಮುಖದ ಸ್ನಾಯುಗಳೆಲ್ಲ ಎಷ್ಟು ಸಡಿಲವೋ
ಅಷ್ಟೇ ಮೂಡಿ ಹೋರಾಟ ಜಾಗಕ್ಕೆ ಬಂದಿಳಿಯುವವು

ಊರು ಬಳಿಯುವ ಕೊಟ್ಟುಗ ಗೂಡು ಕಟ್ಟಿ
ಮಳೆಗಾಲದಲ್ಲಿ ಸುಖಕ್ಕೊರಗಿದಂತೆ
ಮೇರೆಯಾಚೆಗೆ ಹಾರುವ ಕನಸುಗಳಿರಲಿ
ನಿಂತ ಮೈದಾನದಲ್ಲೂ ಓಡಾಡಿ ಬರುವ ಮೈಯಿಲ್ಲ
ಆಡುವುದನ್ನು ಬದಿಗಿರಿಸಿ ಕೂಡುಹಾಕಿಸಿಕೊಳ್ಳುವುದಕ್ಕೆ
ಕಟ್ಟಿರುವುದು ಪ್ರಾಪಂಚಿಕ ಗಂಟುಗಳಷ್ಟೇ
ಬಿಡಿಸಿಕೊಂಡಷ್ಟು ಅಭದ್ರತೆ ಎಂದರೆ ಅಂತಲೇ
ಇದ್ದು ಬಿಡಬಹುದು ಮೀರುವ ಗೋಜನ್ನು ಬಿಟ್ಟು

ಗೋಡೆಗೊರಗದೆ ನೆಟ್ಟಗಾಗದ ನನ್ನಜ್ಜಿಯ
ಬಾಯಲ್ಲಿ ಕೇಳಬೇಕು ಹಿನ್ನೆಲೆಗೂ ಹಾಡಿರದೆ
ಆಡುವ ಕೈಕಾಲುಗಳ ಪಾಡು ಏನೆಂಬುದ

#ಪದ್ಯಗಳಏಕಾಂಕಿ

‍ಲೇಖಕರು avadhi

9 May, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading