ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕು ಸ ಮಧುಸೂದನ ರಂಗೇನಹಳ್ಳಿ – ನಾನೀಗ ಕಿವುಡಾಗಿದ್ದೇನೆ!…

ಕು ಸ ಮಧುಸೂದನ ರಂಗೇನಹಳ್ಳಿ

ತೋಟದೊಳಗೆ ಹೂ ಕೀಳುವ ಸಡಗರ
ಕೆನ್ನೆ ಮೇಲೆ ಕಣ್ಣೀರು

ಅಲೆಗಳಿಗೂ ಕೋಪಬಂದಿದೆ
ದಡವ ಮುತ್ತಿಡದೆ ಹಿಂದಿರುಗುತ್ತಿವೆ

ಪ್ರೀತಿಸಲೆ ಬೇಕೆಂದಿಲ್ಲ ಹೂಗಳ
ಹೂದಾನಿಯೊಳಗೊ ಕಲಾತ್ಮಕ ಚೂರಿಗಳು

ಬೆನ್ನಿಗಿರಿದು ನಗುತ್ತಾರೆ ನನ್ನದೇ ಜನ
ರಕ್ತ ಒಸರುತ್ತದೆ ಕಣ್ಣೀರು ಹನಿಯುವುದಿಲ್ಲ

ಕಲಿಸುವವರಿಲ್ಲ ಪ್ರೀತಿಸುವುದ
ದ್ವೇಷಕ್ಕೆ ಮಾತ್ರ ನೂರಾರು ಪಠ್ಯ ಪುಸ್ತಕಗಳು

ಉಡಿ ತುಂಬಾ ಅವಮಾನದ ಗಾಯಗಳು
ಮಾಯಿಸುವ ಮುಲಾಮಿಲ್ಲ

ಮೊರೆಯುತಿಹ ಬಂದೂಕುಗಳು
ಎದೆಯೊಡ್ಡಲಾಗದ ಹೇಡಿತನ

ಅರ್ಥ ಕಳೆದುಕೊಂಡ ಮಾತುಗಳು
ಮೌನ ಹೇಡಿಗಳ ಹತಾರವಾಗಿದೆ

ನಾನೇ ಬರೆದ ಕವಿತೆ ಅಪರಿಚಿತರ ಬಾಯೊಳಗೆ
ನನಗೀಗ ಕಿವುಡು

‍ಲೇಖಕರು Admin

9 February, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading