ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಟುಕ ಬೇಡ ಕೆದಕಿ ಕೆದಕಿ..

ಆಟಾಟೋಪ

-ಮುಕುಂದಾ

ಕುಟುಕ ಬೇಡ ಕೆದಕಿ ಕೆದಕಿ
ಇನ್ನು ಮಾದಿಲ್ಲ ಹುಣ್ಣು
ನೊಂದ ಜೀವಗಳ ನಿಂದಿಸಬೇಡ

ಮುಲಾಮು ಹಚ್ಚಿಲ್ಲವೆಂದರೆ
ಚಿಂತೆಯಿಲ್ಲ
ಉಪ್ಪು ಖಾರ ಚಿಮುಕಿಸಬೇಡ

ಹಲ್ಕಚ್ಚಿ ನೋವ ನುಂಗಿ
ಸಾಗಿರಲು ಹೆಂಗೋ
ಗಾಯದಮೇಲೆ ಬರೆ ಎಳೆಯಬೇಡ

ಕತ್ತಲೆಯ ಬದುಕಲ್ಲಿ ಪುಟ್ಟ
ಮಿಣುಕೊಂದಿಹುದು
ಊದ ಬೇಡ ಊದಿ ಆರಿಸಬೇಡ

ಜ್ಞಾನದಾ ಬೆಳಕಲ್ಲಿ ಅರಳಲಿ
ಮನುಷ್ಯತ್ವ
ಮೌಢ್ಯ ಬಿಟ್ಟೆದ್ದು ಮಮತೆ ಹಿಡಿದೆತ್ತು

ಕಾಲ ಅಕಾಲ ಎಲ್ಲ ಅವನ ಆಟ
ಕಾಡಿ ಬೇಡಲ್ಲ ಕಷ್ಟ
ಕಾರುಣ್ಯ ಮೆರೆದು ಕಳಚು ಅಂಧತ್ವ

ಒಲವ ತೋರು ಆಗೊಮ್ಮೆಈಗೊಮ್ಮೆ
ಒಡಲ ಅನುಬಂಧ
ಒದ್ದು ಬಿಡಬೇಡ ನಲ್ಮೆಯಸಂಗ

ಕರೆದು ಮಾತಾಡು ಮೌನ ಬಿಟ್ಟೆದ್ದು
ಕಳೆದುಹೋಗುವ ಮುನ್ನ
ಕರೆದೊಡನೆ ಅವ, ಮುಗಿಯಿತೆಲ್ಲ ಆಟಾಟೋಪ……

‍ಲೇಖಕರು Avadhi

12 November, 2018

1 Comment

  1. Narayana Govindaswamy

    Today’s Reality expressed beautifully, the anguish is so painful and the appeal for being human touches the heart….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading