ಚಂಪಾ ಶೆಟ್ಟಿ ತಮ್ಮ ಮೊದಲ ಪ್ರಯತ್ನದಲ್ಲಿಯೇ ಗೆದ್ದಿದ್ದಾರೆ..

ದರ್ಶನ ಜಯಣ್ಣ 

ಅವಡುಗಚಿಕ್ಕಿ ಇದನ್ನು ಬರೆಯುತ್ತಿದ್ದೇನೆ …..ಈಗಷ್ಟೇ ‘ಅಮ್ಮಚ್ಚಿಯೆಂಬ ನೆನಪು’ ಚಿತ್ರವನ್ನು ನೋಡಿ ಬಂದು ಕುಂತಿದ್ದೇನೆ.

ಅಲ್ಲಿ ಕನಸುಗಳು ಕಮರಿ ಹೋಗಿವೆ, ಇಲ್ಲಿ ಮನಸ್ಸು ಮುದುರಿ ಹೋಗಿದೆ!

ಚಂಪಾ ಶೆಟ್ಟಿ ತಮ್ಮ ಮೊದಲ ಪ್ರಯತ್ನದಲ್ಲಿಯೇ ಗೆದ್ದಿದ್ದಾರೆ.

ಮನೆಯವರೆಲ್ಲ ಅರ್ಧ ರಾತ್ರಿಯಲ್ಲಿ, ಅಕ್ಕುವಿನ ತಿಕ್ಕಲುತನಕ್ಕೆ ಹೆದರಿ ಕಂಗಾಲಾಗಿ ದೆವ್ವ ಭೂತದ ಜಪ ಮಾಡುವಾಗ, ಅಮ್ಮಚ್ಚಿ ಅಲ್ಲಿಯೇ ದೂರದಲ್ಲಿ ತನ್ನ ಮನೆಯಲ್ಲಿ ಧೈರ್ಯವಾಗಿ ಒಬ್ಬಂಟಿಯಾಗಿ ಮಲಗುತ್ತಾಳೆ! ಇದ್ದ ಅವಳ ಒಬ್ಬ ಅಜ್ಜಿಯನ್ನು ಆ ಮನೆಯವರು ತಮ್ಮಲ್ಲಿಯೇ ಮಲಗಲು ಹೇಳುತ್ತಾರೆ! ಹೀಗೆ ಅಮ್ಮಚ್ಚಿಯ ಧೈರ್ಯ ಮೊದಲಿಂದಾ ಕಡೆಯವರೆಗೆ ನಿರೂಪಿತವಾಗಿದೆ.

ಸಂಕೋಲೆಯಿಲ್ಲದೆಯೂ ಬಂಧಿಯಾದ ಹೆಣ್ಣಿನ ಪರಿಸ್ಥಿತಿ, ಅದನ್ನು ಮೀರಿ ಅದರಿಂದ ಹೊರಬರಲು ಅವಳು ಪಡುವ ಪಾಡು ಮುಚ್ಚಿಟ್ಟು ಕೊಂಡು ನರಳಿದ್ದು, ಬಿಚ್ಚಿಟ್ಟು ಬಳಲಿದ್ದು ಎಲ್ಲಾ ಅವಳೇ! ಅಕ್ಕು, ಅಮ್ಮಚ್ಚಿ, ವೆಂಕಪ್ಪಯ್ಯ , ವಾಸು, ಸೀತಾ ನಾಗಕ್ಕ ಅತ್ತೆ  ಎಲ್ಲ ಪಾತ್ರಗಳೂ ಬಲವಾಗಿವೆ.


ಅಜ್ಜಿ ದೀಪ ಹಿಡಿದು ಅಟ್ಟದಿಂದ ನಿಧಾನವಾಗಿ ಇಳಿವಾಗಿನ ದೃಶ್ಯ, ಅಮ್ಮಚ್ಚಿಯನ್ನು ಸಂತೈಸುವಾಗ ಹಿನ್ನೆಲೆಯಲ್ಲಿ ಉರಿವ ಮೋಮ್ಬತ್ತಿ, ಮನೆಯವರೆಲ್ಲಾ ದೀಪಾವಳಿಗೆ ಕೂಡಿ  ಹಚ್ಚುವ ದೀಪಗಳು, ಅಮ್ಮಚ್ಚಿ ಹಿಂದಿರುಗಿ ಬಂದಾಗ ವೆಂಕಪ್ಪಯ್ಯ ಸತ್ತನೆಂದು ಹೇಳಿ ಮುಖಕ್ಕೆ ನೀರೆರೆಚಿ ಕೊಳ್ಳುವಾಗ ತೊಳೆದು ಹೋಗದ ಅವಳ ಹಣೆಯ ಕುಂಕುಮ ಇವೆಲ್ಲಾ  ಏನನ್ನು ಸೂಚಿಸುತ್ತಿವೆ ?

ವಾಸು ಆಗಾಗ ಅಕ್ಕುಗೆ ಹೊಡೆಯಲು ತೋರುವ ಹುಮ್ಮಸ್ಸು , ಅಕ್ಕುವಿನ ಜಾಗೃತ ಮತ್ತು ಗೌಣ ಮನಸ್ಸು, ಅವಳ ಚಡಪಡಿಕೆ ಮತ್ತು ತಿಕ್ಕಲುತನ, ಗಂಡನಿರದಾಗ ಅವನು ಬಂದಾಗ ಅವಳಲ್ಲಿ ಆಗುವ ಧಿಡೀರ್ ಬದಲಾವಣೆಗಳು, ಅಮ್ಮಚ್ಚಿಯ ಸ್ವಾತಂತ್ರ್ಯ ಮತ್ತು ಗಟ್ಟಿತನ ಹಾಗು ಸಂಕೋಲೆಯಂತಹಾ ಬಡತನ, ತೆರೆದ ಮನೆಯೊಳಗಿಂದ ಹೊರಹೋಗದಂತಹಾ  ಪರಿಸ್ಥಿತಿ! ಯಾವುದು ನಿಜ ಯಾವುದು ಸುಳ್ಳು ? ಇಲ್ಲಿ ನೋಡುಗ ಸ್ವಲ್ಪ ಎಚ್ಚರವಾಗಿರಬೇಕು ಅನಿಸುತ್ತದೆ !

ಹೂವು ಮೃದುವಾದರೂ ಚಂದವಾದರೂ ಸುವಾಸನೆ ಬೀರಿದರೂ ಅದು ಸೇರುವ ಜಾಗ ಮುಡಿಯೋ ಮಸಣವೋ ಅದಕ್ಕೇ ತಿಳಿಯದ ಪರಿಸ್ಥಿತಿ! ಹೂವಿಗೆ ಆಯ್ಕೆ ಉಂಟೆ? ಸಿನೆಮಾ ನೋಡಿ ಅದನ್ನು ನಾವೇ ಕಂಡುಕೊಳ್ಳಬೇಕು!

ವೈದೇಹಿಯವರು ಸಂಭಾಷಣೆಯನ್ನೂ ಬರೆದಿರುವುದರಿಂದ ಕುಂದಗನ್ನಡ ತುಂಬಾ ಸೊಗಸಾಗಿ ಕೇಳುತ್ತದೆ. ಎಲ್ಲ ಪಾತ್ರಗಳು ಸಹಜವಾಗಿವೆ, ಸಂಗೀತ -ಸಾಹಿತ್ಯ ಕಥೆಯನ್ನು ಬಹುಮುಖ್ಯವಾಗಿ ಅಂತಃ ಸತ್ವವನ್ನು ಹಿಡಿದಿಟ್ಟಿದೆ. ಈ ಕೃತಿ ಗಟ್ಟಿಯಾದ ಕಥೆ ಮತ್ತು ಸಂಭಾಷಣೆ, ಅತ್ಯಂತ ಪ್ರಾಮಾಣಿಕವಾದ ನಿರ್ದೇಶನ, ಕಥೆಯ ಭಾವದೊಡನೆ ಹೆಜ್ಜೆಹಾಕಿ ಬರುವ ಸಂಗೀತ, ಸಹಜವಾದ ಛಾಯಾಗ್ರಹಣ ಇವೆಲ್ಲವುಗಳಿಂದ ನೋಡುಗನಿಗೆ ಈ ಪ್ರಯತ್ನದ ಮೇಲೆ ಪ್ರೀತಿ ಹುಟ್ಟುತ್ತದೆ !

‍ಲೇಖಕರು Avadhi

November 12, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: