ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಕವಿತೆ ಚಿಟ್ಟೆಯಾಗಿದೆ…' – ಸ್ಮಿತಾ ಅಮೃತರಾಜ್ ಕವಿತೆ

 

ಸ್ಮಿತಾ ಅಮೃತರಾಜ್

ಬಿಳಿಯ ಹಾಳೆಗಳ ಮೇಲೆ
ಒಂದೊಂದೇ ಅಕ್ಷರಗಳನ್ನು
ಆಯ್ದು ತಂದು ಜೋಡಿಸುತ್ತಿರುವೆ
ಖಾಲಿ ಬಿದ್ದ ಕ್ಷಣಗಳು ತುಂಬಿಕೊಳ್ಳುತ್ತಿವೆ.
 
ಅಕ್ಷರಗಳೆಲ್ಲಾ ಪದಗಳಾಗುತ್ತಿವೆ
ಗೊತ್ತಿದೆ ತಾನೇ..?ಪದಗಳು
ಬರೇ ಪದಗಳಲ್ಲ.
ನನ್ನ ತುಂಬು ಮೌನದಿಂದ
ಅಂಕುರಿಸಿದ ಭಾವಗಳು.

ಮಾತಿನ ತಂತುಗಳೆಲ್ಲಾ ತತ್ತರಿಸಿ
ಕತ್ತರಿಸಿಕೊಂಡು ಬಿದ್ದಿವೆ.
ಬಿದ್ದು ಹೊದ ಮಾತುಗಳನ್ನು
ಪದಗಳೇ ಬಂದು ಮೌನವಾಗಿ
ಮೇಲೆತ್ತಬೇಕಷ್ಟೆ.
 
ಧ್ಯಾನವಿಟ್ಟು ಪದ ಹೊಸೆದ ಫಲ
ಪದಗಳೆಲ್ಲಾ ಕವಿತೆಗಳಾಗಿ
ತೆವಳುತ್ತಿವೆ.
ಅಗೋ ! ಈಗ ನೋಡು ಕವಿತೆ
ಚಿಟ್ಟೆಯಾಗಿಬಿಟ್ಟಿದೆ.
 
ಚಿಟ್ಟೆ ಕವಿತೆ ಹಾರಿ ಬಂದು
ಏನಾದರೂ ಅರುಹಿತೇ
ಅಲ್ಲಿ?
ಮನಸ್ಯಾಕೋ ಸುಮ್ಮಗೆ ಮುದಗೊಂಡು
ಹಾಡುತ್ತಿದೆಯಲ್ಲ ಇಲ್ಲಿ..!
 

‍ಲೇಖಕರು G

1 January, 2015

7 Comments

  1. ಅಕ್ಕಿಮಂಗಲ ಮಂಜುನಾಥ

    ಸೊಗಸಾದ ಕವಿತೆ.ಹೊಸ ವರ್ಷದ ಶುಭ ಆಶಯಗಳು.ಕವಿತೆಗೆ,ನಿಮಗೆ ಮತ್ತು ಅವದಿಗೆ.

  2. ಬಾಲಸುಬ್ರಹ್ಮಣ್ಯ ಕಂಜರ್ಪಣೆ

    ಪದ್ಯ ಚೆನ್ನಾಗಿದೆ. ಅಭಿನಂದನೆ.
    ಬಾಲಸುಬ್ರಹ್ಮಣ್ಯ ಕಂಜರ್ಪಣೆ

  3. mmshaik

    hosa varshkke..hosa bhavada kavite..nice..smita hosa varshda shubhaashyagaLu..avdhige,avadhi odugarige…….

  4. Kajooru sathish

    ಒಳ್ಳೆಯ ಕವಿತೆ

  5. shwetha r prasad

    Super kane

  6. Umesh Chandra

    Superappa super

  7. satish javaregowda

    Utthama kavite.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading