ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಗಲಿರುಳು ಯತ್ನಿಸಿದೆ ನಿನ್ನನು ಅರಿಯಲು..

ಮರಾಠಿ ಮೂಲ: ಮೋನಾ

ಕನ್ನಡಕ್ಕೆ: ಗಿರೀಶ ಜಕಾಪುರೆ

 

ಅನುಕ್ಷಣ ಚಿಂತಿಸಿದೆ

ಹಗಲಿರುಳು ಯತ್ನಿಸಿದೆ

ನಿನ್ನನು ಅರಿಯಲು

ಆವರಿಸಿತು ನಿನ್ನ ದಿವ್ಯ ಪ್ರೇಮ

ನನ್ನ ಮನೋಹಿಮಾಲಯವನು

 

ನಿನ್ನ ನೋಡಿದ ಆ ಕ್ಷಣ

ಕಂಗಳ ಕೊಳದಲಿ ಶಶಿಯುದಿಸಿದ

ಅರೆಘಳಿಗೆಯ ದರುಶನದಿಂದಲೇ

ನನ್ನ ಹೃದಯದಲಿ ಘಮಘಮಿಸಿದೆ

ಶ್ರೀಗಂಧದ ವನ

 

ನಿನ್ನ ಭೇಟಿ

ಮೃತನಿಗೆ ಅಮೃತ ನೀಡಿದೆ

ನಿನ್ನ ಸಹವಾಸ ರೋಮರೋಮಗಳಲಿ

ಪರಿಮಳದ ಪರ್ವತ ರಚಿಸಿದೆ

 

ಅಯ್ಯೋ ದುರ್ವಿಧಿಯೇ…

ಅಗೋ… ಹಿಮಾಲಯ ಕರಗಿ

ಹರಿಯುತಿದೆ ಪಾತಾಳಕೆ

ಶ್ರೀಗಂಧದ ವೃಕ್ಷಗಳೆಲ್ಲವೂ

ಹೊತ್ತಿ ಉರಿಯುತಿವೆ

ಈ ಜ್ವಾಲೆಯಲಿ ಸುಟ್ಟ ಕನಸುಗಳ

ಬೂದಿ ಮುಗಿಲಿಗೆ ರಾಚಿದೆ

 

ಕಣ್ಣುಗಳಲ್ಲಿ ಉದಿಸಿದ್ದ ಚಂದ್ರ

ಮುನಿದು ಹೋಗಿ ಕುಳಿತಿಹನು

ದೂರ ತೀರದ ಕ್ಷಿತಿಜದ ಮೇಲೆ

 

ಚಂಡಮಾರುತದ ಮಡಿಲಲ್ಲಿ

ಸಿಲುಕಿರುವ ನನ್ನ ದೋಣಿಯನು

ದಡ ಸೇರಿಸುವ ನಾವಿಕ

ನಿನ್ನ ಹೊರತು ಯಾರೂ ಇಲ್ಲ

‍ಲೇಖಕರು nalike

19 July, 2020

1 Comment

  1. T S SHRAVANA KUMARI

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading