ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕವನ ಹುಟ್ಟಿತು

ಎಲ್‍.ಎಸ್‍. ಶಂಕರಸ್ವಾಮಿ

ಗರಿಕೆ ಹುಲ್ಲೊಂದು
ಗಾಳಿಗೆ ತೂಗಿ
ಚೆಲ್ಲಿತು ಮಂಜಿನ ಹನಿಗಳ

ನೀರಿನಲೆಯೊಂದು
ಚಿಪ್ಪನೊಂದನು ಅಪ್ಪಿತು
ಮಡಿಲ ತೊಟ್ಟಿಲಿಗೆ

ಬೆಳಕಿನ ಕಿರಣವೊಂದು
ಕುಕ್ಕಿ ಕತ್ತಲನು
ಕೋರೈಸುವ ಒಳನೋಟವಿತ್ತು

ಕಂಪಿಸಿ ಗರಿಯೊಂದು
ಶಾಯಿಯ ಕತ್ತಲಲಿ
ಸಾಲು ಕಟ್ಟುವುದು ವಸ್ತು ಪ್ರಾಸಗಳ

ಆ ಕ್ಷಣ ಲಲನೆಯರು ಹಾಡುವರು, ಕುಣಿವರು
ಕುಣಿವರು ನೆರಳುಗಳ ಅಟ್ಟಿ
ಪದಗಳ ಕಟ್ಟಿ

ಒಂದು ಕವನ ಹುಟ್ಟಿತು

‍ಲೇಖಕರು Avadhi

14 September, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading