ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಕಲಿತಷ್ಟು ಸಾಲದೆನೋ…' ಪ್ರತೀಭಾ ಕಾಗೆ ಕವನ

ಡಾ ಪ್ರತೀಭಾ ಕಾಗೆ


ಕಲಿತಷ್ಟು ಕಡಿಮೆಯೆನೋ?
ನಾನೆಂದುಕೊಂಡದ್ದೆಲ್ಲವೂ ಆಯಿತಿಂದು
ಆಗಲಿನ್ನೆನು ಉಳಿಯಲಿಲ್ಲ ಹಾಗೆಂದರೆ
ಬೇರೆನೊ ತಿಳಿದಿತು ಸುತ್ತಲೂ ನಡೆವದೆಲ್ಲವೂ
ಕಲ್ಪನೆಯಲ್ಲ ವಾಸ್ತವದ ಹತ್ತಿರವಾದ
ಎಳೆಯೋಂದು ನೊಡುತ್ತಲೆ
ಮಾಯವಾದಂತೆ ಗೊಚರಿಸುತ್ತದ್ದರು
ಸತ್ಯಕ್ಕೆ ಎಂದು ಸಾವಿಲ್ಲ
ಕಲ್ಪನೆಗೂ ಜೀವ ಬಂದಿಹುದು
ಅರಗಿಸಿಕೊಳ್ಳಲು ಆಗದೆ ಇರುವದು
ಕತ್ತಲೆಯಲೂ ಬೆಳಕಿನ ಕಿರಣಗಳು
ಮಿಂಚುತಿಹವು ನಿತ್ಯ ನೂರಾರು
ಜಂಜಡಗಳ ನಡುವೆಯೂ
ಅದಕ್ಕೊಂದಿಷ್ಟು ಸಮಯ ಮೀಸಲು
ಕಲಿಯುವಿಕೆಗಾಗಿ ಎಷ್ಟು ಕಲಿತರು
ಆದೀತು ಸತ್ವಪರೀಕ್ಷೆಗಳೆದುರಿಸಲು
ಕಲಿತಷ್ಟು ಸಾಲದೆನೋ
ನಿರಂತರ ಸಾಗುತಿಹ ಏಳುತಿಹ
ಬೀಳುತಿಹ ಸರಪಣಿಯದು
ಕಲಿತಷ್ಟು ಕಡಿಮೆಯದು
ಮನವೊಪ್ಪುವ ಮಾತು

‍ಲೇಖಕರು G

20 November, 2014

2 Comments

  1. mahesh kalal

    kavithe chennagide

  2. ಸುರೇಶ.ಎಲ್.ರಾಜಮಾನೆ, ರನ್ನಬೆಳಗಲಿ

    ನಿರಂತರ ಕಲಿಕೆ ಸಾಗಲೇಬೇಕು. ಬದುಕು ಸಾಗಿದಂತೆಲ್ಲ ಕಲಿಕೆಯನ್ನು ಅಳವಡಿಸಿಕೊಂಡು ಮುನ್ನಡೆಯಬೇಕು.. ಚೆನ್ನಾಗಿದೆ ಮೆಡಮ್ ಕವಿತೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading