ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕರ್ಣ ಸುಂದರಿ!

ವಿಧಾತ್ರಿ ಭಟ್

ಹೇ ಕರ್ಣ ಸುಂದರಿ,

ಊರ ಜಾತ್ರೆಯ ಜಂಗುಳಿಯಲಿ
ನನ್ನ ಕಣ್ಣುಗಳು ಅರಸುವುದು ನಿನ್ನನೇ
ದೊಡ್ಡ ದೊಡ್ಡ ಪ್ರದರ್ಶನದಲ್ಲಿ, ಹಬ್ಬದಲ್ಲಿ
ನಾ ಮತ್ತೆ ಮತ್ತೆ ಹುಡುಕುವುದೂ ನಿನಗಾಗಿಯೇ

ಫಳಫಳಿಸುವ ಬೆಳಕಿನಡಿ,
ಸಾಲಾಗಿ ಹರವಿ ನಿಂತು,
ಹೊಳೆಯುವ ನಿನಗಾಗಿ;
ಅರಸುವೆ ಪದೇಪದೇ

ಜಾತ್ರೆಯಲ್ಲಿ ಅಮ್ಮನಲ್ಲಿ ಕೇಳುವುದು
ನಿನ್ನನ್ನೇ; ಆಕೆ ಗದರುತ್ತಾಳೆ,
‘ನಿನಗೇನು ಈ ಓಲೆ, ಜುಮುಕೀಯ ಗಿರ
ಮನೆಯಲ್ಲೇ ಅಂಗಡಿ ತೆರೆವಷ್ಟಿದೆ…’
ಏನೇ ಇರಲಿ, ನನಗೆ
ನಿನ್ನ ಮೇಲೇ ಒಲವು

ನೀನು ಹೀಗೆಯೇ
ಹುಚ್ಚು ಹಿಡಿಸುವ ಹಾಡಿನಂತೆ
ಜೋಳಿಗೆಗೆ ಬಣ್ಣ – ಬಣ್ಣಗಳಲ್ಲಿ,
ತುಂಬಿಸಿದರೂ ತೃಪ್ತಿಯಿಲ್ಲ
ಪದೇ ಪದೇ ನೀನೇ…

‍ಲೇಖಕರು Avadhi

21 March, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading