-ಉದಯಕುಮಾರ ಹಬ್ಬು
ನಮ್ಮ ದೇಶದಲ್ಲಿ ಸೂರ್ಯ ಕಾಣೆಯಾಗಿದ್ದಾನೆ;
ವಾಯುಭಾರ ಒತ್ತಡದಿಂದ
ಉಂಟಾದ ಧರ್ಮ ಧರ್ಮಗಳ ಸಂಘರ್ಷವೆಂಬ ಕಪ್ಪು ಮೋಡಗಳಡಿಯಲ್ಲಿ
ಸತ್ಯದ ಮುಖವಾಡ ಹಾಕಿಕೊಂಡು ಸುಳ್ಳುಗಳ ಸರಮಾಲೆ ಸ್ಫೋಟಿಸುವ ಭಯೋತ್ಪಾದಕರ
ಕ್ರೂರ ಬಲೆಗೆ ಬೀಳಿಸಿ ಸಾಯಿಸಿ
ಗಹಗಹಿಸಿ ನಗುವ ವಿಕಟ ಅಟ್ಟಹಾಸದಲ್ಲಿ
ನಮ್ಮ ದೇಶದ ಸೂರ್ಯ ಕಾಣೆಯಾಗಿದ್ದಾನೆ
ಎಡ ಬಲದ ಸಂಘರ್ಷ ಸುಳ್ಳು ಆರ್ಭಟದ ಪುಂಡು ವೇಷ ಭಳಿರೆ ಭಾಪುರೆ ವಿಲಿ ವಿಲಿ ಒದ್ದಾಡುವಾಗ
ಅಬ್ಬರಿಸುವ ದುಷ್ಟ ಗೋಮುಖದ ವ್ಯಾಘ್ರರ
ಘನಘೋರ ಘರ್ಜನೆಯಲ್ಲಿ ಸೂರ್ಯ ಕಾಣೆಯಾಗಿದ್ದಾನೆ
ಬೆಳಕು ಮಳೆ ಅನ್ನ ಕೊಡುವ ಸೂರ್ಯನನು
ಸುಖಾ ಸುಮ್ಮನೆ ಕಳೆದುಕೊಂಡಿದ್ದೀರಿ
ನೀವು ಮಾಡಿದ ಕರ್ಮದ ಫಲವನುಂಡು
ವಿಶ್ವಾಸಘಾತುಕ ನಡೆಯು ವಿಶ್ವಾಸದ ಸೋಗು
ಹಾಕಿ ಅಲೆಲೆಲೆಲೆ ಕೀಹಾ ಎಂದು
ಪ್ರೀತಿಯ ದೊಂದಿಯ ಸುಟ್ಟು ಬೂದಿಯಡಿ
ನಮ್ಮ ದೇಶದ ಸೂರ್ಯ ಕಾಣೆಯಾಗಿದ್ದಾನೆ
ಸದಾ ಕವಿದಿರುವ ಅಜ್ಞಾನದಂಧಃಕಾರದ ಕಪ್ಪು ಮೋಡಗೞಡಿ
ನಮ್ಮ ದೇಶದ ಸೂರ್ಯ ಕಾಣೆಯಾಗಿದ್ದಾನೆ
ಪುಟಾಣಿ ಮಕ್ಕಳು ಬಯಲಲ್ಲಿ
ರೆಕ್ಕೆ ಬಲಿತ ಪುಟಾಣಿ ಹಕ್ಕಿಗಳಂತೆ
ಹಾರಾಡುವ ಇವರ ಮಿದುಳೊಳಗೆ
ದ್ವೇಷ ಬೀಜಬಿತ್ತುವ ರಾಕ್ಷಸ ಲಾಟಿಗಳು,
ಮೋಸ ಸುಳ್ಳು ವಂಚನೆ ಭ್ರಷ್ಟಾಚಾರದ ದಟ್ಟ
ಕಪ್ಪು ಮೋಡಗಳಡಿಯಲ್ಲಿ






0 Comments