ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಕತ್ತಲಲ್ಲಿ ಕರಗಿ ಹೋಗಿದ್ದ ಅವರ್ಯಾರು ….’

ಬೆಳಕ ಆಯುವ ಫಕೀರನೂ…

ಪ್ರವರ ಕುಂ ವೀ

 

ಎಲ್ಲೆಲ್ಲಿಂದಲೋ
ಕತ್ತಲ ಹಿಂಜಿ ಹೆಕ್ಕಿ
ಬೆಳಕನ್ನು ಆಯ್ದು ಜೋಡಿಸಿಟ್ಟುಕೊಂಡು
ಕಣ್ಣು ಸವೆಸಿಕೊಂಡಿದ್ದೇನೆ,
.
ಹಾಗೆಂದು
ನಾನೇನು ಕುರುಡನಲ್ಲ
ಚಿತ್ರ ಆಕ್ರಮಣಕಾರಿಯಾಗಿ
ಪರದೆಯ ಮೇಲೆ
ಮೂಡುತ್ತದೆ
ನನಗಷ್ಟೆ ಗೋಚರಿಸುವಂತೆ
ನಾನಷ್ಟೆ ತಡವರಿಸಿ
ನೋಡುವಂತೆ
.
ಹಣೆ ಬೆವರ
ಒಳಗಿಂದ
ಪ್ರತಿಫಲಿಸುವಾಗ
ಕೋಲ್ಮಿಂಚು ಗೋಡೆ ಬಣ್ಣಕ್ಕೆ
ಅಂಟಿಕೊಂಡಿತು,
.
ನನ್ನ ಪಾಡಿಗೆ ನಾನೆ ಸೂಜಿ
ಪೋಣಿಸಿಕೊಂಡು ಹೊಲಿದುಕೊಂಡಿದ್ದು
ಬೆಳಕಿನಂಗಿಯ,
ಮೈಗೇರಿಸಿಕೊಂಡು
ದಾರಿಯಲ್ಲಿ ನಡೆಯುತಿದ್ದರೆ
ಕಾಣದಂತೆ ಅಂಡು ಬಡಿದುಕೊಂಡು
ನಕ್ಕರು,
.
ಕತ್ತಲಲ್ಲಿ ಕರಗಿ
ಹೋಗಿದ್ದ ಅವರ್ಯಾರು
ನನಗೆ ಕಾಣಿಸಲಿಲ್ಲ
ಮುಂದಿದ್ದ ದಾರಿಯ ಹೊರತು,
ಬೇಕಿದ್ದವರು ಹೆಜ್ಜೆ ಎಣಿಸಿಕೊಂಡು
ಬರಲಿ,
ಗೆರೆಯ ಕೊನೆಗೆ
ಅಪರಿಮಿತ ಜಾಗವಿದೆ ಅಂಗಿಯೊಳಗೆ
ಎಳೆದುಕೊಳ್ಳುತ್ತೇನೆ ಕೈಯ ಚಾಚಿ.

‍ಲೇಖಕರು avadhi

21 March, 2013

3 Comments

  1. Raghunandan K

    ಚಂದ ಕವನ ಪ್ರವರ, ಚಿತ್ರ ಕೂಡ…

  2. Prakash B. Jalahalli

    kviteya salueglu `belaka ayuv fakera’tumba chennagive..

  3. ಪ್ರಸಾದ್.ಡಿ.ವಿ.

    ಚೆಂದದ ಕವಿತೆ ಪ್ರವರ. ಬೆಳಕ ಆಯುವ ಫಕೀರನನ್ನು ಚೆನ್ನಾಗಿ ಪರಿಚಯಿಸಿದ್ದೀರಿ.
    – ಪ್ರಸಾದ್.ಡಿ.ವಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading