ನಿಮಗೆ ತಿಳಿದಿರಲಿ : ಕಂಪ್ಯೂಟರಲ್ಲಿ ಕನ್ನಡ ತಂತ್ರಾಂಶ

ಅವಿನಾಶ್

ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್‌ನಂತಹಾ ಸಾಮಾಜಿಕ ಜಾಲ ತಾಣಗಳಿಗೆ ಗ್ರಾಮಾಂತರ ಪ್ರದೇಶಗಳ ಮಂದಿಯೂ ಆಕರ್ಷಿತರಾಗುತ್ತಿದ್ದಾರೆ ಮತ್ತು ಸಾಕಷ್ಟು ಸ್ವಂತ ಕೆಲಸ ಕಾರ್ಯಗಳನ್ನು ಕಂಪ್ಯೂಟರಿನಲ್ಲಿಯೇ ಮಾಡಿಕೊಳ್ಳುವ ಮೂಲಕ, ‘ಕಂಪ್ಯೂಟರ್ ಸಾಕ್ಷರರು’ ಎಂಬ ಪಟ್ಟಿಗೆ ಸೇರಿಕೊಳ್ಳುತ್ತಿದ್ದಾರೆ. ಆದರೆ ಕಂಪ್ಯೂಟರಿನಲ್ಲಿ ಕನ್ನಡ ಬಳಸುವ ಬಗ್ಗೆ ಅವರಿಗೆ ಗೊಂದಲಗಳಿದ್ದೇ ಇವೆ. ಅಂಥವರ ಅನುಕೂಲಕ್ಕಾಗಿ ಈ ಮಾಹಿತಿ.

ಕೀಬೋರ್ಡ್‌ನಲ್ಲಿ ಇಂಗ್ಲಿಷ್ ಅಕ್ಷರಗಳಿರುವಾಗ ಕನ್ನಡ ಟೈಪ್ ಮಾಡುವುದು ಹೇಗೆ ಎಂಬುದು ಜನಸಾಮಾನ್ಯನ ಪ್ರಶ್ನೆ. ಜನ ಸಾಮಾನ್ಯರು ಬಳಸುವ ಬಹುತೇಕ ಕಂಪ್ಯೂಟರ್‌ಗಳು ಮೈಕ್ರೋಸಾಫ್ಟ್ ಕಂಪನಿಯ ವಿಂಡೋಸ್ ಎಕ್ಸ್‌ಪಿ ಹಾಗೂ ವಿಂಡೋಸ್-7 ಅಥವಾ ವಿಂಡೋಸ್-8 ಕಾರ್ಯಾಚರಣಾ ವ್ಯವವಸ್ಥೆಗಳನ್ನು ಹೊಂದಿವೆ. ಮೈಕ್ರೋಸಾಫ್ಟ್ ಕಂಪನಿಯೇ ಯುನಿಕೋಡ್ ಟೈಪ್ ಮಾಡಲು ಒಂದು ಟೂಲ್ ನೀಡಿದೆ ಎಂಬುದು ಹೆಚ್ಚಿನವರಿಗೆ ಗೊತ್ತಿರಲಾರದು.

ಈ ಟೂಲ್ ಇನ್‌ಸ್ಟಾಲ್ ಮಾಡಿಕೊಳ್ಳಲು ಹೀಗೆ ಮಾಡಿ: ಇಂಟರ್ನೆಟ್ ಸಂಪರ್ಕವಿರುವ ನಿಮ್ಮ ಕಂಪ್ಯೂಟರಿನ ಬ್ರೌಸರಿನಲ್ಲಿ http://www.bhashaindia.com/ilit/Kannada.aspx ವಿಳಾಸ ಟೈಪ್ ಮಾಡಿ. ಅಲ್ಲಿ Install Desktop Version ಅಂತ ಇರುವಲ್ಲಿ ಕ್ಲಿಕ್ ಮಾಡಿದರೆ, kannada.exe ಎಂಬ ಫೈಲೊಂದು ಡೌನ್‌ಲೋಡ್ ಆಗುತ್ತದೆ.

ಅದನ್ನು ಕ್ಲಿಕ್ ಮಾಡಿದರೆ, ಸೂಚನೆಗಳನ್ನು ಸರಿಯಾಗಿ ಓದಿ ನೋಡಿ ಕ್ಲಿಕ್ ಮಾಡುತ್ತಾ ಹೋದರೆ, ತಂತ್ರಾಂಶವು ನಿಮ್ಮ ಕಂಪ್ಯೂಟರಿನಲ್ಲಿ ಸ್ಥಾಪನೆಯಾಗುತ್ತದೆ. (ಇದಕ್ಕೆ Microsoft ನ .NET framework 2 ಎಂಬ ಪೂರಕ ತಂತ್ರಾಂಶವೂ ಬೇಕಿರುತ್ತದೆ. ಅದು ನಿಮ್ಮ ಕಂಪ್ಯೂಟರಿನಲ್ಲಿ ಇಲ್ಲದಿದ್ದರೆ, ಈ ಟೂಲ್ ಸ್ಥಾಪನೆಯಾಗುವಾಗಲೇ ಇನ್‌ಸ್ಟಾಲ್ ಮಾಡಲು ಅವಕಾಶವಿದೆ. ಇದರ ಸ್ಥಾಪನೆಗೆ 5-10 ನಿಮಿಷ ಬೇಕಾಗಬಹುದು.)

ಈ ರೀತಿ ಇನ್‌ಸ್ಟಾಲ್ ಆದ ಟೂಲ್ ಅನ್ನು ಎನೇಬಲ್ ಮಾಡಲು ಹೀಗೆ ಮಾಡಿ: Start ಬಟನ್ ಕ್ಲಿಕ್ ಮಾಡಿ, Control Panel ಕ್ಲಿಕ್ ಮಾಡಿದ ಬಳಿಕ Regional and Language Options ಎಂಬ ಐಕಾನ್ ಕ್ಲಿಕ್ ಮಾಡಿ. ಕಾಣಿಸುವ 3 ಟ್ಯಾಬ್‌ಗಳಲ್ಲಿ Languages ಎಂಬ ಟ್ಯಾಬ್ ಕ್ಲಿಕ್ ಮಾಡಿ.

(ಅಲ್ಲಿ Install files for complex script and right-to-left languages (including Thai) ಎಂಬ ಚೆಕ್‌ಬಾಕ್ಸ್‌ನಲ್ಲಿ ರೈಟ್ (√) ಮಾರ್ಕ್ ಇದ್ದರೆ, ಯುನಿಕೋಡ್ ಟೈಪ್ ಮಾಡಲು ಅನುಕೂಲವಾಗುತ್ತದೆ. ಚೆಕ್ ಮಾರ್ಕ್ ಇಲ್ಲದಿದ್ದರೆ, ಅದಕ್ಕೆ ವಿಂಡೋಸ್ ಕಾರ್ಯಾಚರಣಾ ವ್ಯವಸ್ಥೆಯ ಸಿಡಿ ಬೇಕಾಗುತ್ತದೆ ಎಂಬುದು ನೆನಪಿರಲಿ.) ಬಳಿಕ Details ಬಟನ್ ಒತ್ತಿರಿ. (ಚಿತ್ರ ನೋಡಿ.)

ಇಲ್ಲಿ English ಮಾತ್ರ ಇರುತ್ತದೆ. ಕನ್ನಡ ಇನ್‌ಪುಟ್ ಟೂಲ್ ಸೇರಿಸಲು ‘Add’ ಬಟನ್ ಕ್ಲಿಕ್ ಮಾಡಿ, ಕನ್ನಡದಲ್ಲಿ Microsoft Indic Language Input Tool ಆಯ್ದುಕೊಂಡು OK ಬಟನ್ ಒತ್ತಿರಿ.

ಇಲ್ಲಿಗೆ ನಿಮ್ಮ ಪ್ರಕ್ರಿಯೆ ಮುಗಿಯಿತು. ಮೈಕ್ರೋಸಾಫ್ಟ್ ವರ್ಡ್, ನೋಟ್‌ಪ್ಯಾಡ್, ವರ್ಡ್‌ಪ್ಯಾಡ್, ಎಕ್ಸೆಲ್ ಮುಂತಾದ ಬರವಣಿಗೆ ಪ್ರೋಗ್ರಾಂಗಳನ್ನು ತೆರೆದು Alt + Shift ಒತ್ತಿದರೆ ನಿಮ್ಮ ಇನ್‌ಪುಟ್ ವಿಧಾನವು ಕನ್ನಡಕ್ಕೆ, ಪುನಃ ಅದನ್ನೇ ಒತ್ತಿದರೆ ಇಂಗ್ಲಿಷಿಗೆ ಬದಲಾಗುತ್ತದೆ. ಇದು ಲಿಪ್ಯಂತರ (ಟ್ರಾನ್ಸ್‌ಲಿಟರೇಶನ್ – ಅಂದರೆ ‘kannada’ ಅಂತ ಟೈಪ್ ಮಾಡಿದರೆ ‘ಕನ್ನಡ’ ಎಂದು ಆಗುವ) ಮಾದರಿಯಲ್ಲಿ ಬರೆದು ಅಭ್ಯಾಸವಿರುವ ಹೆಚ್ಚಿನವರಿಗೆ ಅನುಕೂಲಕರ ಕನ್ನಡ ಟೈಪಿಂಗ್ ಟೂಲ್.

 

‍ಲೇಖಕರು avadhi

March 21, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Ananda Prasad

    ಅಂತರ್ಜಾಲದಲ್ಲಿ ಕನ್ನಡದಲ್ಲಿ ಯಾವುದೇ ಟೂಲ್, ಸಾಫ್ಟ್ ವೇರ್ ಇಲ್ಲದೆ ಬರೆಯಲು ಸುಲಭ ವಿಧಾನವಿದೆ. ಇದು ಅಂತರ್ಜಾಲ ಸಂಪರ್ಕ ಇರುವಾಗ ಮಾತ್ರ ಸಾಧ್ಯ. http://www.google.com/intl/kn/inputtools/cloud/try/ ಈ ವಿಳಾಸವನ್ನು ಬ್ರೌಸರ್ ಟೈಪಿಂಗ್ ಬಾರ್ ಜಾಗದಲ್ಲಿ ಟೈಪ್ ಮಾಡಿದರೆ ಗೂಗಲ್ ಇನ್ಪುಟ್ ಪರಿಕರಗಳು ಬರುತ್ತದೆ. ಅದರಲ್ಲಿ ಕನ್ನಡ ಶಬ್ದಗಳನ್ನು ಇಂಗ್ಲಿಷ್ ಅಕ್ಷರಗಳ ಮೂಲಕ ಬರೆದು ಎಂಟರ್ ಕೀ ಒತ್ತಿದರೆ ಅದು ಕನ್ನಡ ಅಕ್ಷರಗಳಲ್ಲಿ ಮೂಡುತ್ತದೆ. ಗೂಗಲ್ ಪರಿಕರ ಐದಾರು ಸಂಭಾವ್ಯ ಕನ್ನಡ ಶಬ್ದಗಳನ್ನು ಒಂದರ ಕೆಳಗೆ ಒಂದರಂತೆ ತೋರಿಸುತ್ತದೆ. ಅದರಲ್ಲಿ ಮೇಲ್ಗಡೆ ಹೆಚ್ಚು ಸರಿಯಾದ ಶಬ್ದವನ್ನೇ ತೋರಿಸುತ್ತದೆ. ಒಂದು ವೇಳೆ ಅದು ಸರಿ ಇರದಿದ್ದರೆ ಬೇರೆ ಸರಿಯಾದ ಶಬ್ದವನ್ನು ಕೆಳಗೆ ಮೂಡಿದವುಗಳಿಂದ ಆರಿಸಿ ಮೌಸ್ ಒತ್ತಿದರೆ ಅದೇ ಶಬ್ದ ಬರುತ್ತದೆ. ಒಂದು ವೇಳೆ ನಮಗೆ ಬೇಕಾದ ಶಬ್ದ ಬರದೆ ಇದ್ದಲ್ಲಿ ಆ ಶಬ್ದವನ್ನು ಒಡೆದು ನಂತರ ಅವುಗಳನ್ನು ಜೋಡಿಸಿ ಸರಿಯಾದ ಶಬ್ದವನ್ನು ಮೂಡುವಂತೆ ಮಾಡಬಹುದು. ಕೆಲವೊಮ್ಮೆ ಉದ್ದವಿರುವ ಶಬ್ದಗಳು ಸಮರ್ಕಪಕವಾಗಿ ಮೂಡಿಬರುವುದಿಲ್ಲ. ಆಗ ಅವುಗಳನ್ನು ಎರಡು ಅಥವಾ ಮೂರು ತುಂಡುಗಳಾಗಿ ಒಡೆದು ನಂತರ ಜೋಡಿಸಿ ರೂಪಿಸಲು ಸಾಧ್ಯವಾಗುತ್ತದೆ. ಈ ರೀತಿ ಬರೆದ ಶಬ್ದಗಳನ್ನು ಅಂತರ್ಜಾಲದಲ್ಲಿ ಎಲ್ಲಿ ಬೇಕಾದರೂ (ಫೇಸ್ಬುಕ್, ಜಿಮೈಲ್, ಬೇರಾವುದೇ ಈ-ಮೇಲ್ಗಳಿಗೆ, ಅಂತರ್ಜಾಲದಲ್ಲಿ ಪ್ರತಿಕ್ರಿಯೆ (ಕಮೆಂಟ್ ನೀಡುವ ಜಾಗಕ್ಕೆ) ಕಾಪಿ ಪೇಷ್ಟ್ ವಿಧಾನದ ಮೂಲಕ ಹಾಕಬಹುದು.
    ಇದು ಮಾತ್ರವಲ್ಲದೆ http://www.quillpad.in/editor.html ಈ ವಿಳಾಸದಲ್ಲೂ ಇದೇ ರೀತಿ ಕನ್ನಡದಲ್ಲಿ ಬರೆದು ಬೇರೆ ಕಡೆ ಕಾಪಿ ಪೇಷ್ಟ್ ಮಾಡಬಹುದು ಅಥವಾ ಕ್ವಿಲ್ ಪ್ಯಾಡ್ ರೋಮಿಂಗ್( http://roaming.quillpad.in/?utm_source=editor_banner&utm_medium=web&utm_campaign=roamingpromo) ಗೆ ಹೋಗಿ ಅಲ್ಲಿ ನಮಗೆ ಬೇಕಾದ ಭಾಷೆ ಆಯ್ಕೆ ಮಾಡಿಕೊಂಡು ಬೇರೆ ವೆಬ್ ಸೈಟುಗಳಲ್ಲಿ ನೇರವಾಗಿ ಕನ್ನಡದಲ್ಲಿ ಬರೆಯಬಹುದು.

    ಪ್ರತಿಕ್ರಿಯೆ
  2. ಪವನಜ

    ಕನ್ನಡದಲ್ಲಿ ಬೆರಳಚ್ಚು ಮಾಡಲು ಹಲವು ವಿಧಾನಗಳಿವೆ. ಅದರ ಪೂರ್ತಿ ಪಟ್ಟಿಯನ್ನೇ ವಿಕಾಸ ಹೆಗಡೆ ನೀಡಿದ್ದಾರೆ. ನೋಡಿ – http://bit.ly/KannadaTyping

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: