ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಕಣ್ಣೀರನ್ನು ಮಾರಲಿಟ್ಟಿದ್ದೇನೆ…’ – ಶ್ರೀದೇವಿ ಕೆರೆಮನೆ ಕವಿತೆ

582366_303456466411035_1847577355_n

ಶ್ರೀದೇವಿ ಕೆರೆಮನೆ

2
ಕಣ್ಣೀರನ್ನು ಮಾರಲಿಟ್ಟಿದ್ದೇನೆ
ಅತಿ ಕಡಿಮೆ ಬೆಲೆಯಲ್ಲಿ
ತರೇಹವಾರಿ ಕಣ್ಣೀರು
ನೋವಿಗೂ ದುಃಖಕ್ಕೂ
ಕೊನೆಗೂ ಸಂತೋಷಕ್ಕೂ
ವಿರಹದ .. ಉರಿಗೆ
ಕಳೆದು ಹೋದ ಪ್ರೀತಿಗೆ
ಎಲ್ಲದಕ್ಕೂ ಪ್ರತ್ಯೇಕ ದರ
ಗಲ್ಲಾಪೆಟ್ಟಿಗೆಯ ತುಂಬಾ ಕಾಂಜಾಣ
ಆದರೂ ನೆಮ್ಮದಿಯಿಲ್ಲ
ಬೇಕಿತ್ತು ಇನ್ನಷ್ಟು ಹಣ
ಕೊಂಡುಕೊಳ್ಳಲು ಮತ್ತಿಷ್ಟು ಗಿರಾಕಿ
ಈಗ ಕೆಲವು ಕಣ್ಣೀರಿಗೆ
ರಿಯಾಯತಿ ದರ ಘೋಷಿಸಿದ್ದೇನೆ
ವಿರಹದ ಕಣ್ಣೀರಿಗೆ
ಈಗ ಸ್ವಲ್ಪವೇ ದುಡ್ಡು
ಕಳೆದುಕೊಂಡ ಪ್ರೀತಿಗಂತೂ
ಮತ್ತೂ ಕಡಿಮೆ ಬೆಲೆ
ಮೊನ್ನೆ ಅಂಗಡಿಯ ಬಾಗಿಲಿಗೆ
ಒರಗಿ ನಿಂತವಳ ಕಣ್ಣಲ್ಲಿ
ಏನೋ ಒಂದು ನೋವು
ಪ್ರೀತಿಸಿದಾತನ ಮೋಸಕ್ಕೆ
ಬಲಿಯಾದವಳ ಎದೆಯಲ್ಲಿ
ಅಳುವಷ್ಟೂ ಇರಲಿಲ್ಲ ತ್ರಾಣ
ಹಣ ಕೊಟ್ಟು
ಕಣ್ಣಿರು ಖರೀದಿಸುವಷ್ಟೂ
ಶಕ್ತಿಯೂ ಆಕೆಗಿರಲಿಲ್ಲ
ಉಪಕಾರ ಮಾಡುತ್ತಿರುವ ಹಮ್ಮಿನಲಿ
ಒಂದಿಷ್ಟು ಕಣ್ಣೀರನ್ನು ದಾನ ಮಾಡಿದೆ
ಇಂದಾಕೆ ಆ ಕಣ್ಣೀರಿನ ಹಣವನ್ನು
ಕೊಟ್ಟು ಹೋಗಲು ಬಂದಿದ್ದಾಳೆ
ಆಕೆಯ ಪಕ್ಕದಲ್ಲೊಬ್ಬ
ಸಿರಿವಂತ ಹುಡುಗ
ಆಸೆಗಣ್ಣು ಹೊತ್ತು ನಿಂತಿದ್ದಾನೆ
ಆತ ಕಣ್ಣೀರಿಗೂ ಅರ್ಹನಲ್ಲ,
ಆತನ ಮೋಸಕ್ಕಿದು ಪ್ರತ್ಯುತ್ತರ
ಎಂದವಳ ಕಣ್ಣಲ್ಲಿ ಕಣ್ಣೀರಿನ ಬದಲಾಗಿ
ಸೇಡು ತೀರಿಸಿಕೊಂಡ ಸಂತೃಪ್ತಿ
ಪಕ್ಕದಲ್ಲಿ ಸೊಂಟ ಬಳಸಿ
ನಿಂತವನ ಕಣ್ಣಲ್ಲಿ ಲೋಲುಪ್ತಿ
ಯನ್ನು ಹಣವಾಗಿಸಿಕೊಳ್ಳುವ ಆತುರತೆ
ನಿನ್ನೆ ಬಂದ ಹುಡುಗನೊಬ್ಬನಿಗೆ
ಮೋಸದ ಕಣ್ಣೀರು ಬೇಕಿತ್ತು
ಒಂದಾಗಲು ಒಪ್ಪದ ಹುಡುಗಿಗೆ
ಜೀವ ಕಳೆದುಕೊಳ್ಳುವ ಬೆದರಿಕೆ
ಕೆಲಸ ಮಾಡದ್ದರಿಂದ
ಕಣ್ಣೀರು ಸುರಿಸಿಯಾದರೂ
ಆಕೆಯ ದೇಹ ಪಡೆಯಬೇಕಿತ್ತು
ವ್ಯವಹಾರಕ್ಕೆ ನಿಂತ ನನಗೆ
ಕೊಳ್ಳುವವರ ಕಾರಣ ಬೇಕಿರಲಿಲ್ಲ
ನಾಲ್ಕರಷ್ಟು ಅಧಿಕ ಮೊತ್ತ ಪಡೆದು
ಜೇಬು ತುಂಬಿಸಿಕೊಳ್ಳುವುದಷ್ಟೇ
ನನ್ನೆದುರಿನ ಸತ್ಯ; ಉಳಿದಿದ್ದೆಲ್ಲ ಮಿತ್ಯ
ಕಳೆದೆರಡು ದಿನಗಳಿಂದ ಆ ಮೂಲೆಯಲ್ಲಿ
ಸೊಂಟಕ್ಕೊಂದು ಮಗು ಸಿಕ್ಕಿಸಿ
ಎದೆ ಬತ್ತಿದ, ವಬೆನ್ನಿಗಂಟಿದ ಹೊಟ್ಟೆಯ
ಹೆಣ್ಣಿನಾಕೃತಿಯ ದೇಹದೆಡೆಗೆ
ಗಮನಹರಿಸುವಷ್ಟು ಪುರುಸೊತ್ತಿರಲಿಲ್ಲ
ಎಲ್ಲೋ ಅಪಘಾತದಲ್ಲಿ ಸತ್ತವರ ಸಂಬಂಧಿಕರಿಗೆ
ಕಣ್ಣಿರು ಪೂರೈಸಿ ನಾನೇ ಹೈರಾಣಾಗಿದ್ದೆ
ಸಮಯವಿದ್ದರೂ ಆಕೆ ಕೊಡಲಾಗದ ಹಣಕ್ಕೆ
ನನ್ನ ಸಮಯ ಕಳೆಯುವಷ್ಟು ಉದಾರತೆ ಇರಲಿಲ್ಲ
ಕೊನೆಗೂ ಎರಡು ದಿನದಿಂದ
ನಿಂತ ಜಾಗದಿಮದ ಕದಲದಾಕೆಯನ್ನು
ಸನ್ನೆ ಮಾಡಿ ಹತ್ತಿರ ಕರೆದೆ
ಹೌದು, ಆಕೆಗೂ ಕಣ್ಣೀರು ಬೇಕಿತ್ತು
ಸತ್ತ ಗಂಡನ ನೆನೆಸಿ ಅಳಬೇಕಿತ್ತು
ಕೊಡಲು ಮಾತ್ರ ಕಾಸಿರಲಿಲ್ಲ
ಬತ್ತಿ ಹೋದ ಕಣ್ಣೀರಿಗೆ
ನಾನಾ ಅರ್ಥ ಕಲ್ಪಿಸಿ, ಮನೆಯಿಂದ
ಹೊರನೂಕಿದ ಅತ್ತೆ ಮಾವ
ನೆರೆ ಹೊರೆಯವರಿಗಾಗಿ
ಆಕೆ ಅಳಲೇ ಬೇಕಿತ್ತು
ಮಗುವಿನ ಹೊಟ್ಟೆಗೊಂದು ತುತ್ತಿಗಾಗಿ
ತಲೆಯ ಮೇಲಿನ ಒಂದು ಸೂರಿಗಾಗಿ
ಸುತ್ತಲಿನ ಕಾಮದ ಕಣ್ಣಿಂದ ತಪ್ಪಿಸಿಕೊಳ್ಳುವುದಕ್ಕಾಗಿ
ಆಕೆಗೆ ಕಣ್ಣೀರಿನ ಅನಿವಾರ್ಯತೆಯಿತ್ತು
ತುತರ್ು ಕಾಲಕ್ಕಿರಲೆಂದು ಸಂಗ್ರಹಿಸಿಟ್ಟ
ಎಲ್ಲಾ ಕಣ್ಣೀರನ್ನು ಆಕೆಯ ಎದುರಿಗಿಟ್ಟು
ಒಂದೂ ಮಾತನಾಡದೆ ನಾನು
ಕಣ್ಣೀರಿನ ಅಂಗಡಿಗೆ ಬೀಗ ಹಾಕಿದೆ

‍ಲೇಖಕರು G

12 August, 2015

9 Comments

  1. Manjulanarayanarao

    Tumba chennagi – kanneeru bikarigide onaguva munna adare noovu

  2. Noorulla Thyamagondlu

    ಚೆನ್ನಾಗಿದೆ.

  3. shashikala

    Ekdum new idea of tears for sale
    congrats for thinking out of the box

  4. mahesh kalal

    ಬತ್ತಿ ಹೋದ ಕಣ್ಣೀರಿಗೆ
    ನಾನಾ ಅರ್ಥ ಕಲ್ಪಿಸಿ, ಮನೆಯಿಂದ
    ಹೊರನೂಕಿದ ಅತ್ತೆ ಮಾವ
    ನೆರೆ ಹೊರೆಯವರಿಗಾಗಿ
    ಆಕೆ ಅಳಲೇ ಬೇಕಿತ್ತು
    ಮಗುವಿನ ಹೊಟ್ಟೆಗೊಂದು ತುತ್ತಿಗಾಗಿ
    ತಲೆಯ ಮೇಲಿನ ಒಂದು ಸೂರಿಗಾಗಿ
    ಸುತ್ತಲಿನ ಕಾಮದ ಕಣ್ಣಿಂದ ತಪ್ಪಿಸಿಕೊಳ್ಳುವುದಕ್ಕಾಗಿ
    ಆಕೆಗೆ ಕಣ್ಣೀರಿನ ಅನಿವಾರ್ಯತೆಯಿತ್ತು
    ತುತರ್ು ಕಾಲಕ್ಕಿರಲೆಂದು ಸಂಗ್ರಹಿಸಿಟ್ಟ
    ಎಲ್ಲಾ ಕಣ್ಣೀರನ್ನು ಆಕೆಯ ಎದುರಿಗಿಟ್ಟು
    ಒಂದೂ ಮಾತನಾಡದೆ ನಾನು
    ಕಣ್ಣೀರಿನ ಅಂಗಡಿಗೆ ಬೀಗ ಹಾಕಿದೆ super !!!!!!!!!!!!!!!!!!!!!!!!

  5. ರಾಜೇಂದ್ರ ನಾಡಗೌಡ

    ಕಣ್ಣೀರಿಗೂ ಬೆಲೆ ಕಣ್ರಿ,ಹಸಿದ,ಬಸಿದ ಕಣ್ಣೀರಿನಲ್ಲಿ ಕೈ ತೊಳೆಯುವವರಲ್ಲಿ ಮಾರಾಟಕ್ಕಿಟ್ಟಿದ್ದು ಸೊಗಸಾದ ಕವಿತೆ.

  6. ಲಕ್ಷ್ಮೀಕಾಂತ ಇಟ್ನಾಳ

    ತುಂಬ ಚನ್ನಾಗಿದೆ ಕವನ. ‘ಆಂಖ ಅಗರ್ ಭರ್ ಆಯೀ ಹೈ, ಬೂಂದೇ ಬರಸ್ ಜಾಯೇಂಗೀ. ಕಲ್ ಕ್ಯಾ ಪತಾ ಇನ್ ಕೆ ಲಿಯೆ ಆಂಖೇಂ ತರಸ್ ಜಾಯೇಂಗೀ’ …ಕಂಬನಿಗೆ ಅಂಗಲಾಚುವ ಕಣ್ಣುಗಳಡೆ ಜಗದ ನೋಟವನ್ನು ಹೊರಳಿಸಿದ ಶ್ರೀದೇವಿಯವರೆ ವಾಹ್ ಎನ್ನಲೇಬೇಕು ನಿಮಗೆ,.. ವಂದನೆಗಳು

  7. Raj

    Very nice idea and writing..

  8. Anil Talikoti

    Loved this one

  9. mmshaik

    very nice thought..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading