ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಡಲೆಂಬ ಒಗಟು

ಕೆ ಎಸ್ ವೇಣುವಿನೋದ್

ಕಡಲೆಂಬೋ ಕಡಲಿಗೆ

ಎಲ್ಲೆಂದಲೆಲ್ಲಿಂದಲೋ

ನೀರು ಬಂದು ಸೇರುತ್ತದೆ..

ನಾವು ಯಾವುದಕ್ಕಾಗಿ

ಬಡಿದಾಡಿದ್ದೇವೋ ಆ ಮಣ್ಣನ್ನೇ

ನೀರು ಕೊಚ್ಚಿ ತಂದು

ಸಮುದ ಗರ್ಭಕ್ಕೆ ಸುರಿಸುತ್ತದೆ

ಪ್ರವಾಹಕ್ಕೆ ಸಿಲುಕಿ ಸತ್ತ

ದನ ನಾಯಿ ಕೋಳಿ

ಗಳ ಅಂತಿಮ ಯಾತ್ರೆಯೂ

ಬಂದು ಸೇರುವುದು ಸಮುದ್ರಕ್ಕೆ

 

ನಮ್ಮೆಲ್ಲಾ ಕೊಳೆಗಳನ್ನೂ

ತೊಳೆದು ತೋಡಿಗಟ್ಟಿದರೂ

ಅದರಲ್ಲಿ ಮಿಳಿತವಾದ ಪಾಪವೆಲ್ಲ

ಈಶ್ವರ ಹಾಲಾಹಲ

ನುಂಗಿದಂತೆ ಸಮುದ್ರ

ಅರಗಿಸಿಕೊಳ್ಳುತ್ತದೆ

 

ಸಮುದ್ರ ಏನನ್ನೂ

ತಿರಸ್ಕರಿಸುವುದಿಲ್ಲ..

ಸಮುದ್ರಕ್ಕೆ ಎಲ್ಲವೂಬೇಕು

ಮತ್ತು ಏನೂ ಬೇಡ!

ಹಾಗೆಂದು ಸಮುದ್ರವನ್ನೇ

ಹುಡುಕುವುದೂ

ಅಸಾಧ್ಯ..ಅದು ಅಭೇದ್ಯ

ಮೆಚ್ಚು · ·

 

‍ಲೇಖಕರು G

25 July, 2011

2 Comments

  1. sandhya

    ಇ೦ತಹ ಕಡಲಿಗೂ ನೆಲ ಮಡಿಲು…

  2. savitri

    ತಾಯಿಯ ಸೀರೆ ಸೆರಗಿಗೆ ಕೈ ಒರೆಸಿ, ಮಕ್ಕಳ ಸಿಂಬಳ ಒರೆಸಿದರೂ ಅದು ಮತ್ತೆ ಅಮ್ಮನ ಸೆರಗೆಂಬ ಕಾರಣಕ್ಕೆ ಅಮೂಲ್ಯವಾಗಿ ಗೋಚರಿಸುವುದಿಲ್ಲವೆ ಹಾಗೆ ಈ ಸಮುದ್ರವೂ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading