ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಓವನ್' ಬೀಪ್ ಮುಗಿಸಿದ ತಕ್ಷಣ..

ನನ್ನ ಪ್ರೀತಿಗೆ….
ಇನ್ಶಾ ಮಲ್ಲಿಕ್  
ಕನ್ನಡಕ್ಕೆ: ಮೆಹಬೂಬ್ ಮುಲ್ತಾನಿ 
ನನ್ನ ಮನಸ್ಸು ನಿನ್ನ ಶರ್ಟಿಗೆಂದೇ ಹೊಲೆದ
ಖಾಲಿ ಜೇಬು….
ನಿನ್ನ ಸ್ಪರ್ಶವಿಲ್ಲದೇ ಉಪೇಕ್ಷಿತ…!
ನಿನ್ನೆ ರಾತ್ರಿ ಊಟ ಮುಗಿಸಿ
“ಸಿಂಕ್”ಗೆ ಹಾಕಿದ ಪಾತ್ರೆಗಳಂತೆ
ಒಂದೇ ಸಮನೆ ನೆನೆಯುತ್ತಿದೆ…
ತುಂಬಿ ಹರಿಯುವ “ಬಾತ್ ಟಬ್”ನ ಸಪ್ಪಳದಲ್ಲಿ
ನನ್ನ ಎದೆಬಡಿತ ಮುಳುಗಿ ನಿನ್ನ ಉಪಚಾರಕ್ಕೆ ಕಾದಿದೆ….
ಈ ಮಧ್ಯೆ ಬಟ್ಟೆಗಳು
ದಬ್ಬಾಳಿಕೆಗೆ ಒಳಗಾದ ಆಜ್ಞೆಯಂತೆ
ಮನೆಯ ಎಲ್ಲ ಮೂಲೆಗಳಿಗೆ ಹರದಾಡಿ
“ವಾಷಿಂಗ್ ಮಷಿನ್” ಕಡೆ ಪಾದ ಬೆಳೆಸಿವೆ
ಖಿನ್ನತೆಯ ಮಂತ್ರ ಪಠಣದೊಂದಿಗೆ
ತಿರುಗತೊಡಗುತ್ತವೆ…..
“ಪೋನು” ರಿಂಗಣಿಸಿದಾಗ ಮಾತ್ರ ನೀನು
ನನ್ನ ಕೈ ಹಿಡಿದ ಅನುಭವ ನನಗೆ…!
“ಓವನ್” ಬೀಪ್ ಮುಗಿಸಿದ ತಕ್ಷಣ
ಊಟಕ್ಕೆ ಕುಳಿತುಕೊಳ್ಳುತ್ತೇನೆ.
ಈಗ ನನ್ನ ಪ್ರೀತಿ ಹೃದಯಕ್ಕೆ ಇರಿಯುತ್ತದೆ.
ನೋಡು ನಮ್ಮ ಜೀವನ ತುಂಬಾ ಸರಳವಾಗಿದೆ
ನಾನು ನಿನಗೆ “ಮುತ್ತು” ಟೆಕ್ಸ್ಟ್ ಕಳಿಸಿದ್ದೇನೆ…
ನಾನೀಗ ನನ್ನೊಲವಿನ ನಿದ್ದೆಗೆ ಜಾರಬೇಕಿದೆ…

‍ಲೇಖಕರು avadhi

27 May, 2018

1 Comment

  1. ashajagadeesh

    ವ್ಹಾ ಚೆಂದದ ಅನುವಾದ…..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading