ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಲುಮೆ..

ಶ್ರೀನಿವಾಸ.ಎಂ

ಹಾಲಲ್ಲಿ ಅಡಗಿದ ತುಪ್ಪಕ್ಕೆ…
ಪ್ರೀತಿಯೊಲುಮೆ!!
ಮರದಾಳದಿರುವ ಅಗ್ನಿಗೆ
ಕಿಚ್ಚಿನೊಲುಮೆ!

ಗಿರಿ ಶಿಖರದಿ, ನಲಿಯುವ
ನವಿಲಿಗೆ….?
ಚಿತ್ತಾರದೊಲುಮೆ!

ಪಶು – ಪಕ್ಷಿ…
ಜೀವರಾಶಿಗೆ…..
ಭೂಮಾತೆಯೊಲುಮೆ!

ನ್ಯಾಯದೇವತೆಗೆ…
ಸತ್ಯ – ಧರ್ಮ – ನೀತಿಯೊಲುಮೆ!!
ಪ್ರೀತಿ – ಪ್ರೇಮ – ತ್ಯಾಗಕೆ…
ಸ್ನೇಹದೊಲುಮೆ!

ಮಧುರ ನೆನಪುಗಳ…
ಮಾಧುರ್ಯಕೆ…..
ಭಾವದೊಲುಮೆ!

ಇಂಪಾಗಿ ಹೊರಹೊಮ್ಮುವ…
ಸಂಗೀತಕೆ…..
ಸಾಹಿತ್ಯದೊಲುಮೆ!

ಸಪ್ತಸ್ವರ ಸರಿಗಮಕೆ….?
ರಾಗದೊಲುಮೆ!
ನವರಸ ನರ್ತನಕೆ…
ನಾಟ್ಯದೊಲುಮೆ!

ಶಾಂತಿ, ನೆಮ್ಮದಿಗೆ…
ಜಗದ ಒಲುಮೆ!
ಜನುಮ – ಜನುಮದಿರುವ…
ಭವಭಂಧಕೆ…
ಅನುಬಂಧದೊಲುಮೆ!!

‍ಲೇಖಕರು Avadhi

28 December, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading