ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಒಮ್ಮೆ ಓದಬಾರದೆ ಗೆಳೆಯ…’ – ನಿಶಾ ಗೋಪಿನಾಥ್


ನಿಶಾ ಗೋಪಿನಾಥ್

ಮಂಜಿನ ಹನಿ ನಿನ್ನ ಮುಖದ ಮಂದಾರ
ಮೋಡ ಕವಿದರೂ ಮಾಸದ
ಆ ನಿನ್ನ ನೆನಪುಗಳನು ಸುಂದರ
ಕವನಗಳ ರೀತಿಯಲ್ಲಿ ಬರೆದಿಹೆನು
ಒಮ್ಮೆಯಾದರೂ ಓದಬಾರದೆ ಗೆಳೆಯಾ…

**

ನನ್ನ ಪ್ರೀತಿಯನು ನಿನ್ನ ಹೃದಯದ
ಕಾಗದ ಮೇಲೆ ಬರೆಯುತಿರುವೆ,
ಮರೆಯದೆ ಒಮ್ಮೆ ಓದಿಬಿಡು.
ಮಾತಿನಲ್ಲಿ ಮನೆ ಕಟ್ಟಬೇಡ,
ಮೌನಕ್ಕೆ ಶರಣಾಗಬೇಡ,
ಕನಸಿನ ಲೋಕಕ್ಕೆ ಹೋಗಿ ಬಾ,
ನಾ ಕಾಣುವೆ ಅಲ್ಲಿ…
ಕನಸಿನಲ್ಲೂ ಕನವರಿಸುತ್ತಿದೆ
ನೀ ಬಂದ ನೆನಪು…
***
ನೀ ಕೊಟ್ಟ ಉಡುಗೊರೆ ಕಣೋ ಈ ನಗು
ನೀ ಕೊಟ್ಟ ಪ್ರೀತಿಯೇ ಈ ಜೀವನ
ಕಾದು ಕುಳಿತಾಗ ನೀ ಬಂದೆ
ಬರ ತುಂಬಿದ ಮನಕೆ
ತಂಪನೆಯ ಮಳೆ ತಂದೆ
ಹಗಲಿರುಳು ಜೊತೆಗಿದ್ದು
ನಡೆಸಿದೆ ಕೈ ಹಿಡಿದು
ನಾನು ಏನೆಂದು ಕರೆಯಲಿ
ನಿನ್ನ ನಿಷ್ಕಲ್ಮಶ ಸ್ನೇಹವನ್ನ…?
 

‍ಲೇಖಕರು G

26 July, 2013

7 Comments

  1. Anonymous

    Nice

  2. ರಮೇಶ್ ಹಿರೇಜಂಬೂರು

    ನನ್ನ ಪ್ರೀತಿಯನು ನಿನ್ನ ಹೃದಯದ
    ಕಾಗದ ಮೇಲೆ ಬರೆಯುತಿರುವೆ..
    ನೀ ಕೊಟ್ಟ ಉಡುಗೊರೆ ಕಣೋ ಈ ನಗು…
    ಕವಿತೆ ಚೆನ್ನಾಗಿವೆ… ನಿಮ್ಮ ಬರವಣಿಗೆ ಹೀಗೇ ಸಾಗಲಿ ನಿಶಾ…

  3. Sharanappa Bachalapur

    chennagide

  4. kantharaj

    Nimma Bhavanegala abhivyakthi, sundara pada punjagala rachane tumbane chennagide. Khanditha, neevu atyutthama kaviyitrhri aguviri.Nimminda innunu tumbane sundara kavanagalu baruttirali………………

  5. Anonymous

    ಬರೆಯುವದಕ್ಕೆ ಮಾತ್ರ ಅತಿ ಸುಂದರ……..
    ಅನುಭವಿಸುವದಕ್ಕೆ ತುಂಬಾ ಕಷ್ಟ………

  6. Anonymous

    nange ista aaithu

  7. maesh agali

    nimge nive sati suparbbbbbbbbbb lines nisha ji

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading