ಬಿಲ್ಲು ಕೇಳಿ ಸ್ವಾಮಿ

ತೆರಿಗೆ ನಿಮಗೆ ಅರಿವಿಲ್ಲದಂತೆ ಪಾವತಿಸಿರುವಿರಿ ಅರಿವುಂಟೇ

ಎನ್  ನಾರಾಯಣಸ್ವಾಮಿ


ಹೀಗೆ ತೆರಿಗೆ ಎಂದರೆ ಬೆಚ್ಚಿ ಬೀಳುತ್ತೀರಲ್ಲವೇ?ಏಕೆಂದರೆ ನೀವು ಖರೀದಿಸುವಾಗ ನೀಡುವ ಬೆಲೆಗಿಂತ ಹಚ್ಚಿಗೆ ಹಣ ತೆರಿಗೆಗೆ ನೀಡಬೇಕೆಂಬುದು ನಿಮ್ಮ ಅನಿಸಿಕೆಯಲ್ಲವೇ? ಆದರೆ ನೀವು ನಿಮ್ಮ ಅರಿವಿಗೆ ಬಾರದಂತೆ ತೆರಿಗೆ ಪಾವತಿಸಿರುತ್ತೀರಿ ಅದನ್ನು ತಿಳಿದಾಗ ಮಾತ್ರ ನೀವು ಬೆಚ್ಚಿ ಬೀಳುತ್ತೀರಿ.
ನೀವು ಹಾಕುವ ಬಟ್ಟೆಯ ಮೇಲೆ ತೆರಿಗೆ ಪಾವತಿಸಿರುವಿರೇ? ಖಂಡಿತ ಪಾವತಿಸಿರುತ್ತೀರಿ. ನೀವು ರೆಡಿಮೇಡ್ ಶರ್ಟ್ ಖರೀದಿಸಿದರೆ 5.5% ತೆರಿಗೆ ಪಾವತಿಸಿರುತ್ತೀರಿ ಆದರೆ ಬಿಲ್ಲು ಮಾತ್ರ ಕೇಳುವುದಿಲ್ಲ. ಶರ್ಟಿನ ಬಟ್ಟೆ ಅಥವಾ ಸೀರೆ ಖರೀದಿಸಿದರೆ ಇದಕ್ಕೆ ಮೌಲ್ಯವರ್ದಿತ ತೆರಿಗೆ ಇರುವುದಿಲ್ಲ. ಆದರೆ ಕರ್ನಾಟಕ ಪ್ರವೇಶ ತೆರಿಗೆಯೆಂದು 1% ತೆರಿಗೆ ಇರುತ್ತದೆ. ಅದು ನಿಮ್ಮ ಅರಿವಿಗೆ ಬರುವುದಿಲ್ಲ. ಆದರೂ ತೆರಿಗೆ ಪಾವತಿಸಿರುತ್ತೀರಿ. ನೀವು ತಿನ್ನುವ ತರಕಾರಿ, ಬೇಳೆ, ಬೆಲ್ಲ, ಅಕ್ಕಿ, ರಾಗಿ ಇದಕ್ಕೆ ತೆರಿಗೆ ಇಲ್ಲ. ಆದರೆ ನೀವು ಉಪಯೋಗಿಸುವ ಅಡಿಗೆ ಎಣ್ನೆಗೆ 5.5% ತೆರಿಗೆ ಪಾವತಿಸಿರುತ್ತೀರಿ. ಅದೇ ರೀತಿ ನೀವು ತಲೆಗೆ ಉಪಯೋಗಿಸುವ ಪ್ಯಾರಾಚೂಟ್ ತೆಂಗಿನ ಎಣ್ಣೆಗೆ 14.5% ತೆರಿಗೆ ಪಾವತಿಸಿರುತ್ತೀರಿ. ವಿಚಿತ್ರವೆಂದರೆ ಇದೇ ತೆಂಗಿನೆಎಣ್ಣೆಯನ್ನು ಮಂಗಳೂರಿನಲ್ಲಿ ಅಡಿಗೆಗೆ ಉಪಯೋಗಿಸುತ್ತಾರೆ. ಅದಕ್ಕೆ ತೆರಿಗೆ 5.5% ಮಾತ್ರವೇ? ಏಕೆಂದರೆ ಇದು ಅಡಿಗೆ ಎಣ್ಣೆ.
ನೀವು ಖರೀದಿಸಿರುವ ಪ್ರಿಜ್, ಟಿ,ವಿ, ಇವುಗಳಿಗೆ 14.5% ತೆರಿಗೆ ಪಾವತಿಸಿರುತ್ತೀರಿ. ಅದರಂತೆ ಕಂಪ್ಯೂಟರ್ಗೆ 5.5% ತೆರಿಗೆ ಪಾಪತಿಸಿರುತ್ತೀರಿ. ಆದರೆ ನೀವು ಈ ಸರಕುಗಳನ್ನು ಖರೀದಿಸಿದಾಗ ಬಿಲ್ಲು ಕೇಳುತ್ತೀರ? ಇಲ್ಲ. ಕೇಳಿದರೆ ಅಂಗಡಿಯವನು ಹೇಳುತ್ತಾನೆ, ನೀವು ತೆರಿಗೆ ಪಾವತಿಸಬೇಕಾಗುತ್ತದೆ. ನೀವು ಬೆಚ್ಚಿ ಬೀಳುತ್ತೀರಿ. ಬೇಡ ಬಿಲ್ಲು ಬೇಡವೇ ಬೇಡ. ನಿಮ್ಮ ನಿರ್ಧಾರ.
ಆದರೆ ನೀವು ಬೇಡವೆಂದರೂ, ಖರೀದಿಸಿದ ಸರಿಕೆಗೆ ಬೇಕಾಗುವಷ್ಟು ತೆರಿಗೆ, ಅದನ್ನು ಅವನು ಖರೀದಿಸಿದ ನಂತರ ಅವನ ಅಂಗಡಿಗೆ ಸಾಗಿಸಲು ತಗಲುವ ವೆಚ್ಚ, ಅವನ ಲಾಭ, ಇಷ್ಟನ್ನೂ ಸೇರಿಸಿ ಕೆರಿದಿರುತ್ತಾನೆ? ನಿಮಗೆ ಗೊತ್ತಾದರೆ ತಾನೆ?
ನೀವು ನೆರೆ ಹೊರೆಯವರನ್ನು ಗಮನಿಸಿದ್ದೀರಲ್ಲವೇ? ನಿಮ್ಮ ಪಕ್ಕದ ಮನೆಯವನೋ ಅಥವಾ ಇನ್ಯಾರೊ ಯಾವುದೊ ಒಂದು ಅಂಗಡಿಯನ್ನು ತೆಗೆದು ವ್ಯಾಪಾರ ಶುರು ಮಾಡುತ್ತಾನೆ. ನೀವು ನೋಡುತ್ತಲೇ ಇರುತ್ತೀರಿ ಒಂದೂ ಒಂದೂವರೆ ವರ್ಷದಲ್ಲಿ ಹಿಂದಿಗಿಂತಲೂ ತಂಪಾಗಿ ಓಡಾಡಿದನೆಂದರೆ, ನೀವು ಖಂಡಿತವಾಗಿಯೂ ಅನುಮಾನಿಸಬೇಕು ಅವನು ತೆರಿಗೆಯನ್ನು ಸರಿಯಾಗಿ ಪಾವತಿಸುತ್ತಿಲ್ಲವೆಂದು. ನಿಮ್ಮ ಮನೆಯ ಪಕ್ಕದಲ್ಲಿ ಒಬ್ಬ ಬೇಕರಿ ತೆರೆಯುತ್ತಾನೆ ಜಗಮಗಿಸುವ ಗ್ಲಾಸು. ತಿಂಡಿಗಳನ್ನಿಡಲು ಷೊ ಕೇಸು. ಘಮಘಮಿಸುವ ವಾಸನೆಯ ಕೇಕು, ಸಾಕು ಬೇಕೆನ್ನಿಸುವಷ್ಟು ಸೊಳ್ಳೆ ನೊಣಗಳ ತ್ರಾಸು,ಆದರೂ ಸಹ ನೀವು ಅವನ ಬೇಕರಿಯಿಂದ ತಿಂಡಿಗಳನ್ನು ಎತ್ತುತ್ತಲೇ ಇರುತ್ತೀರಿ. ಆದರೆ ಅವನು ಮಾತ್ರ ಬಿಲ್ಲು ಪುಸ್ತಕವನ್ನು ಮುಟ್ಟುವುದೇ ಇಲ್ಲ. ಪ್ರತಿ ದಿನವೂ ನೀವು ನೋಡುತ್ತಲೇ ಇರುತ್ತೀರಿ, ಜನವೋ ಜನ, ಪ್ರತಿದಿನವೂ ಏನಿಲ್ಲವೆಂದರೂ ದಿನಕ್ಕೆ 30000 ವ್ಯಾಪಾರವೆಂದರೂ ತಿಂಗಳಿಗೆ 900000 ಲಕ್ಷವಾಯಿತು. ಆದರೆ ಅವನ ತಿಂಗಳ ನಮೂನೆಯನ್ನು ಸಾದ್ಯವಾದರೆ ಗಮನಿಸಿ ತಿಂಗಳಿಗೆ 30000 ಸಾವಿರವೂ ಇರುವುದಿಲ್ಲ. ಅವನನ್ನು ಧಬಾಯಿಸಿ ಬಿಲ್ಲು ಕೇಳುತ್ತೀರಿ. ಆಗ ಅವನ ಪಕ್ಕದಲ್ಲೇ ಅವನು ಸಾಕಿದ ನಾಯಿ ಸ್ವರೂಪದ ಮನುಷ್ಯರು ನಿಮ್ಮ ಜನ್ಮ ಜಾಲಾಡುತ್ತಾರೆ.  ಮೂರು ನಾಲ್ಕು ವರ್ಷದಲ್ಲಿ ಮನೆ ಸೈಟು ಎಲ್ಲಾ ಮಾಡಿ ಹಬ್ಬಕ್ಕೆ ವರ್ಷಕ್ಕೊಂದು ಸಾರಿ ಇನ್ನೋವ ಕಾರಿನಲ್ಲಿ  ಊರಿಗೆ ಹೋಗಿ ಬರುತ್ತಾರೆ.ಮತ್ತೊಂದು,ಮಗದೊಂದು ಬೇಕರಿ ತೆರೆದು ಅದೇ ಲಾಭ.ಅದೇ ಕಸುಬು.ನೀವು ಮಾತ್ರ ಅವನ ಬೇಕರಿಯ ತಿಂಡಿ ತಿಂದು ಶುಗರ್,ಭೀಪೀ.ಗ್ಯಾಸು ಎಲ್ಲವೂ ತಂದು ಕೊಂಡಿರುತ್ತೀರಿ.ಅವನು ಮಾತ್ರ ತೆರಿಗೆ ಕದ್ದು ಮೇಲೆ ಬಂದಿರುತ್ತಾನೆ.
ನೀವು ಪುಟ್ಪಾತ್ ಮೇಲೆ ಖರೀದಿಸಿದ ಬಟ್ಟೆ,ಬಿಲ್ಲಿಲ್ಲದೆ ಖರೀದಿಸಿರುವ ಪ್ರಿಜ್,ಟಿ.ವಿ ಪ್ರತಿಯೊಂದರ ಮೇಲು ನಿಮಗೆ ಗೊತ್ತಿಲ್ಲದೆ ತೆರಿಗೆ ಪಾವತಿಸಿರುತ್ತೀರಿ. ಆದರೆ ಬಿಲ್ಲು ಕೇಳುವುದನ್ನು ಮಾತ್ರ ಮರೆತಿರುತ್ತೀರಿ. ಆ ತೆರಿಗೆಯ ಹಣದಿಂದ ಟೀವಿ ಮಾರಿದವನು ಟ್ರಿಮ್ ಆಗುತ್ತಾನೆ, ನೀವು ಠೀವಿಯಿಂದ ಟೀವಿ ನೋಡಿ ನೋಡಿ ಡ್ರಮ್ ಆಗುತ್ತೀರಿ. ಈಗಲಾದರೂ ಖರೀದಿಸುವ ಪ್ರತಿಯೊಂದು ವಸ್ತುವಿಗೂ ತೆರಿಗೆಯಿದ್ದರೆ ಬಿಲ್ಲು ಕೇಳಿ ಪಡೆಯಿರಿ.
 
 
 
 
 

‍ಲೇಖಕರು G

July 26, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Kiran

    It is immaterial whether the shopkeeper is paying tax or not. If you ask the bill, he will add additional 5.5% or 14.5%. Like, if you buy goods worth Rs.1000/-, it is true that the tax is already included whether you ask for bill or not. But if you insist on bill, it will be either Rs 1055/- or Rs 1145/- Where does this amount go?

    ಪ್ರತಿಕ್ರಿಯೆ
    • ಎಚ್. ಸುಂದರ ರಾವ್

      ಇದು ಚರ್ಚೆಗೆ ಒಳ್ಳೆಯ ವಿಷಯ.
      ಈ ಹಣ ಎಲ್ಲಿಗೆ ಹೋಗುತ್ತದೆ? ಕಿರಣರ ಪ್ರಶ್ನೆ. ಈಗ ಮಾಹಿತಿ ಹಕ್ಕು ಜಾರಿಯಲ್ಲಿದೆ.

      ಪ್ರತಿಕ್ರಿಯೆ
  2. baboo

    1. Every one knows that obtaining bill is not of use in any way, until it has some warranty/guarantee for the goods covered in it.
    2. Bakery product though expiry date is mentioned, you cannot go to consumer goods for any of your health upset due to consumption of such bakery product.
    3. Tiles / Marbles / guarantee / warrantee not covered and it may be onus of owner to maintain them once purchased. I have named a few as there are thousands of products we consume in our daily lives knowingly or unknowingly. Do you obtain bills for bangalore dairy outlet for the milk they sell? I do not think anybody would have obtained in his life time. Keeping such thing in mind, government must give “exemption” against production of cash bills in individual income tax limit (of course by raising the limit) so that every one can be covered and made honest as much as possible.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: