ತೆರಿಗೆ ಹೆಂಗೆಲ್ಲಾ ಕದೀತಾರೆ ಗೊತ್ತಾ?

ದುಡ್ಡು ಕೊಟ್ಟ ಮೇಲೆ ’ಬಿಲ್ಲು ಕೇಳಿ ಸ್ವಾಮಿ ’ ಎಂದು ನಾರಾಯಣ ಸ್ವಾಮಿ ಅವರು ಬರೆದ ಲೇಖನದ ಮುಂದಿನ ಭಾಗ

ಎನ್ ನಾರಾಯಣಸ್ವಾಮಿ

ತೆರಿಗೆ ಕದಿಯುವ ಮಾರ್ಗಗಳು


ನೀವು ದಿನ ನಿತ್ಯವೂ ಕೆಲವಾರು ಸಂಗತಿಗಳನ್ನು ಗಮನಿಸುತ್ತಿರುತ್ತೀರಿ. ಅಥವಾ ನೀವೆ ಮನೆ ಕಟ್ಟಲು ಶುರುಮಾಡಿದಾಗ ನಿಮಗೆ ಗ್ರಾನೈಟ್, ಕಬ್ಬಿಣ, ವಿದ್ಯುತ್ ಉಪಕರಣಗಳು, ಮರಮುಟ್ಟು ಇತರೆ ಸರಕುಗಳನ್ನು ಖರೀದಿ ಮಾಡುವಾಗ ನಿಮಗೆ ಗೋಚರವಾಗುವುದೇ ಈ ಬಿಲ್ಲುಗಳ ಸಹವಾಸ. ಈ ಬಿಲ್ಲುಗಳ ಸಹವಾಸದಿಂದ ನಿಮಗೆ ಮನೆ ಕಟ್ಟಿ ನೋಡು ಎನ್ನುವುದಕಿಂತ ಬಿಲ್ಲು ಕೇಳಿ ನೋಡು ಎಂಬ ಪರಿಷೃತ ಗಾದೆ ಹುಟ್ಟುತ್ತದೆ. ಈ ಎಲ್ಲಾ ಸರಕುಗಳ ವ್ಯಾಪಾರಿಗಳು ಬಹುತೇಕವಾಗಿ ಮಾರವಾಡಿಗಳೇ ಆಗಿರುತ್ತಾರೆ. ಬಿಲ್ಲು ಪುಸ್ತಕವನ್ನು ಮುಟ್ಟುವುದೆಂದರೆ ಆವರಿಗೆ ಅದು ಶಿವ ಧನುಸ್ಸಿನಷ್ಟೇ ಭಾರವಾಗಿ ಕಾಣಿಸಿ ಕಿರಿ ಕರಿಯನ್ನುಂಟು ಮಾಡುತ್ತಾರೆ.  ಏಕೆಂದರೆ ನೀವು ನೀಡಿದ ಮೊತ್ತಕ್ಕೆ ತೆರಿಗೆ ಪಾವತಿಸಬೇಕೆಂದರೆ ಅದು ಅವನ ಕೈಯಲ್ಲಿ ಸಾದ್ಯವಾಗುವುದಿಲ್ಲ ಅವನು ಆ ಸರಕನ್ನು ಬಹಳ ಕಡಿಮೆ ಬೆಲೆಗೆ ಖರೀದಿಸಿರುತ್ತಾನೆ. ನೀವು ಫುಟ್ಪಾತ್ ಮೇಲೆ ಒಂದು ವ್ಯಾನಿಟಿ ಬ್ಯಾಗ್ ಖರೀದಿಸುತ್ತೀರಲ್ಲವೇ? ನೀವು ನೀಡುವುದು 200 ರೂ ಆದರೆ ಅದರ ಖರೀದಿ ಬೆಲೆ ಅವನ ಖರೀದಿ ಬಿಲ್ಲಿನ ಪ್ರಕಾರ ಕೇವಲ 20 ರೂ!  ಆಶ್ಚರ್ಯವಾಯಿತೆ? ಖಂಡಿತವಾಗಲೂ ಸತ್ಯ. ನೀವು ಖರೀದಿಸುವ ಚಪ್ಪಲಿ, ಟಿ ಶರ್ಟ ಗಿಲೀಟು ಸರಕುಗಳು ಇವೆಲ್ಲಾ ಇದೇ ರೀತಿ ಬಿಕರಿಯಾಗುತ್ತವೆ.
ಇನ್ನು ತೆರಿಗೆ ತಪ್ಪಿಸುವ ಎರಡನೇ ಮಾರ್ಗವೆಂದರೆ ಬಿಲ್ಲು ಇಲ್ಲದೇ ಖರೀದಿ. ಅದೇ ರೀತಿ ಬಿಲ್ಲು ಕೊಡದೆ ಮಾರಾಟ. ಇವಕ್ಕೆಲ್ಲಾ ಯಾವುದೇ ತೆರಿಗೆಯನ್ನು ನೀವು ನಿರೀಕ್ಷಿಸುವಂತೆಯೇ ಇಲ್ಲಾ. ನೀವು ಬೆಳಗ್ಗೆ ರವೀಂದ್ರ ಕಲಾಕ್ಷೇತ್ರದ ಮುಂದೆ ನಿಂತುಕೊಂಡರೆ ಸಣ್ಣ ಸಣ್ಣ ಮೂರು ಚಕ್ರದ ಮತ್ತು ಕೈ ಗಾಡಿಗಳಲ್ಲಿ ಬಿರ ಬಿರನೇ ಹೋಗುವ ಸರಕುಗಳನ್ನು ನೋಡಗಹುದು ಇವೆಲ್ಲಾ ಬಿಲ್ಲಿಲ್ಲದ ಮತ್ತು ಬೇರೆಯವರ ಹೆಸರಿಗೆ ಬಂದ ಸರಕು ಇನ್ಯಾರದೋ ಹೆಸರಿಗೆ ಹೋಗುತ್ತಿರುವಂತಹುಗಳೇ.
ಬೇರೆಯವರ ಹೆಸರಿಗೆ ಸರಕು ತರಿಸುವಂತಹ ಪರಿಪಾಠ ಮುಂದಿನಿಂದಲೂ ಇದೇ ಈಗಲೂ ಇದೇ. ನೀವೂ ಮೌಲ್ಯವರ್ಧಿತ ತೆರಿಗೆ ಅಢಿಯಲ್ಲಿ ನೋಂದಣೆ ಪಡೆದರೇ ಇಂತಹ ಸರಕನ್ನೇ ಖರೀದಿಸಿ ಮಾರಬೇಕೆಂಬ ನಿಯಮವಿರುತ್ತದೆ. ಬಹಳಷ್ಟು ಜನ ಯಾವ ಯಾವುದೋ ಕಾರಣಕ್ಕೋಸ್ಕರ ನೋಂದಣೆ ಪಡೆದಿರುತ್ತಾರೆ. ಆದರೆ ಅವರು ವ್ಯಾಪಾರವನ್ನೇ ಮಾಡದೇ ಸುಮ್ಮನೇ ಖಾಲಿ ಮಾಸಿಕ ನಮೂನೆಗಳನ್ನು ಸಲ್ಲಿಸುತ್ತಿರುತ್ತಾರೆ. ಇಂತಹ ವರ್ತಕರ ಮಾಹಿತಿ ಈ ಕಳ್ಳರಿಗೆ ಸೋರಿಕೆಯಾಯಿತೋ ಕಥೆ ಮುಗಿದಂತೆಯೇ. ಇವರ ಹೆಸರಿನಲ್ಲಿ ಕಬ್ಬಿಣ ಸೀಮೇಂಟ್ ವಿದ್ಯುನ್ಮಾನ ಉಪಕರಣಗಳು ಪ್ಲೈವುಡ್ ಮುಂತಾದ ಸರಕುಗಳನ್ನು ಖರೀದಿಸಿ ತೆರಿಗೆ ತಪ್ಪಿಸಿ ಪರಾರಿಯಾಗುತ್ತಾರೆ. ಈ ಬಗ್ಗೆ ತನಿಖೆ ನಡೆದು ವಿಷಯ ಬಹಿರಂಗವಾದಾಗ ನಿಜವಾದ ನೋಂದಣೆ ಪಡೆದವರು ಸಂಕಷ್ಟಕ್ಕೇ ಸಿಕ್ಕಿಹಾಕಿಕೊಳ್ಳುತ್ತಾರೆ.ಆದ್ದರಿಂದಲೇ ಅಗತ್ಯವಿಲ್ಲದ ನೋಂದಣೆ ಮಾಡಿಸಲೇ ಬಾರದು.
ಗ್ರಾನೈಟ್ನವರದೂ ಇನ್ನೂ ಅಧ್ವಾನ. ಅವರ ಕಥೆ ಕೇಳಿ. ನೀವು ಸಾದರಹಳ್ಳಿ ಗ್ರಾನೈಟ್ ಎಂಬ ಬಿಳಿ ಕಲ್ಲನ್ನೂ ಮನೆಯ ನೆಲಹಾಸಿಗೆ ಹಾಕುತ್ತೀರಲ್ಲವೇ? ಅದರ ಬೆಲೆ ಚದರ ಅಡಿಯೊಂದಕ್ಕೇ ಐವತ್ತು ರೂಪಾಯಿಗಳ ಹಾಸು ಪಾಸಿನಲ್ಲಿರುತ್ತದೆ. ಆ ಗ್ರಾನೈಟ್ಗೆ ಉಪಯೋಗಿಸು ಮೂಲ ಕಲ್ಲಿನ ಬೆಲೆ ಬೇಕಾಬಿಟ್ಟಿ 50 ಚದರ ಅಡಿ ಕಲ್ಲಿಗೆ ಕೇವಲ ಸಾವಿರ ರೂಪಾಯಿಗಳಿರಬಹುದು. ಅದೂ ಕಲ್ಲು ತಂದು ಹಾಕಿ ಒಂದು ಜೊತೆ ಚಪ್ಪಲಿ ಸವಿಸಿದ ಮೇಲೇ ಅವನಿಗೆ ಕಾಸು. ಕಲ್ಲು ಏನಾದರೂ ಸರಿಯಿಲ್ಲದಿದ್ದರೆ ಅದೂ ಇಲ್ಲ. ಈ ಗ್ರಾನೈಟ್ ಮಾರುವವರೆಲ್ಲಾ ಯಾರು ಗೊತ್ತೆ ರಾಜಾಸ್ಥಾನದವರು. ಕೋಟಿಗಟ್ಟಲೇ ಸಾಲ ಮಾಡಿ ಕಾರ್ಖಾನೆ ತೆರೆಯುತ್ತಾರೆ. ಲಾಭ ಮಾಡುತ್ತಾರೆ. ಸಾಲ ತೀರಿಸಿದರೆ ಅದು ಕರ್ನಾಟಕದ ಬ್ಯಾಂಕುಗಳ ಪುಣ್ಯ. ಸಾಲ ತೀರಿಸದ ಅಂತಹ ಎಷ್ಟೋ ಕೇಸುಗಳಿವೆ. ನೀವು ಜಿಗಣಿಗೆ ಹೋಗಿ, ಒಂದು ಗ್ರಾನೈಟ್ನ ಹೊಸರೂಪವೇ ನಿಮ್ಮ ಮುಂದೆ ಪ್ರತ್ಯಕ್ಷವಾಗುತ್ತದೆ. ಇವರಿಗೆ ಗ್ರಾನೈಟ್ಗೆ ಉಪಯೋಗಿಸುವ ಬಂಡೆಗಲ್ಲುಗಳನ್ನು ಸರಬರಾಜು ಮಾಡಲು ತಮಿಳುನಾಡಿನಿಂದ ಹಿಡಿದು ಕನಕಪುರದವರೆಗೂ ನಾನಾ ರೀತಿಯ ಜನರಿದ್ದಾರೆ. ಗ್ರಾನೈಟ್ ಪಾಲೀಸು ಮಾಡಿ ಒಂದಕ್ಕೇ ನೂರು ಪಟ್ಟು ಬೆಲೆ ಏರಿಸಿ ಕರ್ನಾಟಕದವರಿಗೆ ಮಾರುತ್ತಾರೆ.
ತೆರಿಗೆ ಕದಿಯುವ ಹುಲ್ಲುಗಾವಲುಗಳೆಂದರೆ, ಬರ್ಮಾ ಬಜಾರ್,  ನ್ಯಾಷನಲ್ ಮಾರ್ಕೆಟ್ , ಹಾಂಗ್ ಕಾಂಗ್ ಬಜಾರ್ ಇತ್ಯಾದಿ. ಇಲ್ಲಿ ನೀವು ಬಿಲ್ಲು ಕೇಳಿದರೂ ಕೊಡುವುದಿಲ್ಲ. ಇನ್ನು ಮಾರಾಟ ತೆರಿಗೆ ಅದಿಕಾರಿಗಳು ಕೇಳಿದರೇ ಅವರ ಕಥೆ ಮುಗಿದಂತೆಯೇ? ಈ ವರ್ತಕರ ಕೃತ್ಯಗಳಿಗೆ ಸಹಕರಿಸುವವರೂ ನಮ್ಮ ಕರ್ನಾಟಕದವರೇ. ಏನು ಮಾಡೋಣ?
 

‍ಲೇಖಕರು avadhi

August 1, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಪ್ರಮೋದ್

    ಇಟಾಲಿಯನ್ ಮಾರ್ಬಲ್ ಕಥೆ ಗೊತ್ತೇ.. ಅವು ಇಟಲಿಯಿ೦ದ ಬ೦ದವಲ್ಲ. ಅವು ಇಟಲಿಗೆ ಕಳಿಸಿ, ಅಲ್ಲಿ ರಿಜೆಕ್ಟ್ ಆಗಿ ಬ೦ದವು. ಇಲ್ಲಿ ಅದನ್ನು ಇ೦ಪೋರ್ಟೆಡ್ ಅದು ಇದು ಅ೦ತ ಘಟ್ಟ ಹತ್ತಿಸಿ ಮಾರುತ್ತಾರೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: