ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಒಡಲ ದಾಟುವ ತವಕ ತಿಳಿಗೊಳ್ಳುವ ತನಕ…' – ಕಾವ್ಯ ಕಡಮೆ

ಹಸಿವು ಜೀವಂತ

kavya

ಕಾವ್ಯಾ ಕಡಮೆ ನಾಗರಕಟ್ಟೆ

ಹಸಿವು 1:  ತೇವ
ತಟ್ಟಲೇನು ಭಾಗ್ಯದ ಬಟ್ಟಲ ಬಾಗಿಲ
ಸುಟ್ಟ ಗಂಟಲ ಗಂಟುಗಳ ನಯ
ಬಾಗಿಸಿ ಜೀವ ಕತ್ತರಿಸಿ ತೇವ ಹರಿಯಲು
ಪುಟಕ್ಕಿಟ್ಟ ಸಂಕಟ ಉಸಿರಾಡಿತು
ನಡುವೆ ಕಲುಕಲಾರದ ಪ್ರಾಣ
ಅಲ್ಲೆಲ್ಲೋ ಹಸಿವಿಗೆ ತುಸು ಜಾಗ ಕೊಡೆಂದು
ಬೇಡುತ್ತದೆ ಉದರ ಅವನ ಪಾದದ ಬಿರುಕು
ಇವನ ಮನೆ
ಅವನುಸಿರ ಹಿಡಿದರೆ ಇವನ ಬದುಕು
ಬಿಟ್ಟರೆ ಒಡಕು
ಕಾಣುತ್ತದೆ
ಇವನ ಚಪ್ಪಲಿ ಹೊಲಿದ ದಾರ ಬಿಡಿಸಿ
ಅವನು ಬಿರಿದ ತನ್ನ ಚರ್ಮಕೆ ತೇಪೆ ಹಾಕುವುದ
೧೨೧
ನಿನ್ನ ಅನ್ನ ಕಸಿದು ನಾನು ನುರಿದು
ಫೇಶಿಯಲ್ ಹಚ್ಚಿಕೊಳ್ಳುತ್ತೇನೆ
ಹತ್ತಿಯಲ್ಲದ್ದಿ
ನನ್ನ ತಂಪು ಮೊಗದಲ್ಲೀಗ ನಿನ್ನ
ಹಸಿವ ನಿಶಾನೆ ಜೀವಂತ.
ಹಸಿವು ಎರಡು: ತೇವ
ಜಿಗಿಯುವ ನಿಗಿ ಕೆಂಡದ ಕಡಲು
ಜೀವ ಝರಿಯ ಝಳ ತೊಟ್ಟು
ತಿಳಿ ಜಲ ಸಳ ಸಳ ಮಿಣುಕು ಹುಳ
ಬಿಳಿ ಬಯಲು ಸುಡು ಸುಡುವ ಬಿಸಿ ನರ
ಕಸಿದು ಕೂಡಲು
ಬಿಟ್ಟು ಕಳೆದೆ ತಟ್ಟುತ ತೇವ
ಕೊಲ್ಲ ಬಯಸುತ
ಈ ನಡುವೆ
ಎಷ್ಟೆಲ್ಲ ಮಾತುಗಳು
ಆಡದೇ ಉಳಿದುಬಿಟ್ಟವು
ಒಡಲ ದಾಟುವ ತವಕ ತಿಳಿಗೊಳ್ಳುವ ತನಕ
ನನ್ನ ಲೋಕ ನಿನ್ನೊಳಗೆ ಸೇರುವುದ
ನೋಡುತ್ತ ಸೇರುತ್ತೇನೆ
ಬೇಯುತ್ತ ಕಾಯುತ್ತೇನೆ
ಕುದಿಯುವುದು ನಂತರ.
ತೇವ-
ತೇಯ್ದರೆ ಹಾದರದ ಸ್ಪರ್ಶ
ಕಾದರೆ ಗಂಧ
ಹಾದರೆ ಬೆಂಕಿ
ತೊಯ್ದರೆ ಹಾಲು ಬಣ್ಣದ ಜಿಂಕೆ
ಮಾಯವಾಯ್ತು ಕಾನನದಲಿ
ಮತ್ತೆ ಹಸಿವು ಜೀವಂತ.

‍ಲೇಖಕರು avadhi-sandhyarani

28 August, 2015

3 Comments

  1. mahesh kalal

    kadmeyavare nimma kavyakke bhavanathmkavada shkthi ide good poet

  2. ಅಕ್ಕಿಮಂಗಲ ಮಂಜುನಾಥ

    @ಪದ್ಯ ಚೆನ್ನಾಗಿದೆ.

  3. mmshaik

    nice poem..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading