ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ವಿನಿಮಯದ ಲೆಕ್ಕಪತ್ರ

 

 

 

 

ರಜನಿ

 

 

 

 

ಬಾಗಿಲಲಿ ನೀನು ಮುಗುಳುನಗೆ ಇಟ್ಟಿದ್ದೆ

ನಾನದನು ಮನೆಯೊಳಗೆಲ್ಲ ಹಾಸಿದೆ

ತಿರುಗಿ ನಿನಗೆ ಕುಡಿನೋಟ ಇಟ್ಟಿದ್ದೆ

 

ಮಾರನೆಯ ದಿನ ನೀನು

ಸವಿಮಾತನಿಟ್ಟಿದ್ದೆ

ನಾನದನು ಪಾನಕಮಾಡಿ ಕುಡಿದೆ

ನಿನಗೆಂದು ಚೆಂದದ ಕನಸನಿಟ್ಟಿದ್ದೆ

ಇನ್ನೊಮ್ಮೆ ನೀನು ಮಮತೆಯನಿಟ್ಟಿದ್ದೆ

ನಾನದನು ಅಂಗಿ ಹೊಲಿದು ತೊಟ್ಟುಕೊಂಡು ಓಡಾಡಿದೆ

ಅಲ್ಲಿ ನಿನಗಾಗಿಯೇ ಎಂದು ನಂಬುಗೆಯನಿಟ್ಟಿದ್ದೆ

 

ಮುಂದೊಂದು ದಿನ ನೀನು ಪ್ರೇಮವನಿಟ್ಟಿದ್ದೆ

ನಾನದನ್ನು ಎದೆಯ ಮೇಲಿನ ಪದಕ ಮಾಡಿಕೊಂಡೆ

ಪ್ರೀತಿಯನು  ನಿನ್ನ ಬೊಗಸೆಯಲಿ ತುಂಬಿಸಿದೆ

 

ನೀನು ಅಂಗಳದ ತುಂಬೆಲ್ಲ ಮುತ್ತು ಸುರಿದು ಹೋದೆ

ನಾನದನು ಸರ ಪೋಣಿಸಿ  ಹಾಕಿಕೊಂಡೆ

ಬಹಳಷ್ಟು ಅಪ್ಪುಗೆಯನ್ನು ನಿನಗಂತ ಇಟ್ಟಿದ್ದೆ

 

ಮೊನ್ನೆ ನೀನು ಒಂದಿಷ್ಟು ಕೋಪ ಇಟ್ಟುಹೋಗಿದ್ದೆ

ನಾನದನು ಉರಿಸಿ ಅಡುಗೆಮಾಡಿ ಊಟಮಾಡಿದೆ

ನೀನು ಹೊತ್ತೊಯ್ಯಲೆಂದು  ಹೆಬ್ಬಂಡೆ ಇಟ್ಟಿದ್ದೆ

 

ಇಂದು ನೀನು ದೊಡ್ಡ ಮೌನವನ್ನು ಇಟ್ಟುಹೋದೆ

ನಾನದನು ಹೊದ್ದು ಮಲಗಿಬಿಟ್ಟಿದ್ದೇನೆ

ತಿರುಗೇನೂ ಕೊಡಲಾರದೆ

 

‍ಲೇಖಕರು avadhi

17 November, 2017

4 Comments

  1. Abhishek umesh

    ಇಟ್ಟಿದ್ದೆಲ್ಲವೂ ಸಿಕ್ಕಿತು.
    ತಿರುತಿರುಗಿ ನೋಡಲು….
    ಮತ್ತಿನ್ನೇನು ಇಟ್ಟಿರಬಹುದೆಂದು

  2. Basavanneppa.K

    super padya

  3. Sangeeta Kalmane

    ಕವಿತೆಯಲ್ಲಿ ಹೊಸತನವಿದೆ

  4. ನೂತನ ದೋಶೆಟ್ಟಿ

    ಮಲಗೆದ್ಥು ಎಂಥ ಸಾಲುಗಳನ್ನು ಹೆಣೆದುಬಿಟ್ಟೆಯಲ್ಲೇ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading