ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಜಿಪಿಎಸ್ ಕವಿತೆ…

ಸದಾಶಿವ್ ಸೊರಟೂರು

ಊರಿಗೆ ದಾರಿ
ಯಾರು ತೋರಿದರೇನು?
ಎನ್ನುವ
ಜಿಪಿಎಸ್ ನಂತಹ ಮಾತಿನಲ್ಲಿ
ನನಗೆ ಆಸಕ್ತಿಯಿಲ್ಲ

ದಾರಿ ತೋರಿ ಹೋದವನ
ಆ ದಾರಿಯಲಿ
ಬಹಳಮಾಡಿ ಏನುಂಟು?
ಗರಿಕೆಯೇ ಇಲ್ಲದ ಮಣ್ಣು ನೆಲ
ಇಲ್ಲವೇ ಡಾಮರು ರಸ್ತೆ
ಪಕ್ಕಕ್ಕೆ ಸವರಿದ ಬೇಲಿ ಸಾಲುಗಳು

ಊರು ಸೇರಬಹುದಷ್ಟೆ
ಆದರೆ
ಊರು ಸೇರುವುದೊಂದೇ
ಬದುಕಲ್ಲ!

ಕುದುರೆಯೂ ಸಾಗುತ್ತದೆ
ಕಣ್ಣುಕಟ್ಟಿಕೊಂಡು
ಸಾಗುವ ಸಿದ್ದ ದಾರಿಯೊಂದಿದ್ದರೆ

ಜಿಪಿಎಸ್ ನ ಹುಡುಗಿ
ದಾರಿಯಲಿ ನೀನು ಕಳೆದು
ಹೋಗಬೇಕೆಂದರೂ ಬಿಡುವುದಿಲ್ಲ

ಯಾರೊ ತೋರಿದ ಹಾದಿಯನು
ನೀನಾಗಿಯೇ ತಪ್ಪುವ ಧೈರ್ಯವೂ
ಮಾಡುವುದಿಲ್ಲ!

ಅತ್ತ ಆ ತುದಿಯಲಿ
ಏನಿದೆ ಎಂದು ಸ್ವತಃ ದಾರಿಗೂ
ತಿಳಿಯದ
ಯಾರೂ ತೋರದ ಹಾದಿಯಲಿ
ಪಾದಗಳನೊಮ್ಮೆ
ಊರಿ ನೋಡು

ಹೆಜ್ಜೆ-ಹಜ್ಜೆಗೂ ಒಲವು
ನಿಗೂಢ ನಾಳೆಗಳಂತ
ಚೆಲುವು!

ಸೇರುವುದಷ್ಟೇ ಗುರಿಯಲ್ಲ
ಸೇರುತ್ತಿರುವುದು ಗುರಿಯೇ!

‍ಲೇಖಕರು Admin

12 November, 2021

1 Comment

  1. prathibha nandakumar

    ಸದಾಶಿವ ಸೊರಟೂರ್ ಒಳ್ಳೆಯ ಕವನಗಳನ್ನು ಬರೆಯುತ್ತಿದ್ದಾರೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading