ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಏನೋ ಸದ್ದು ಕೇಳಿ ಬರುತ್ತಿದೆ..

ಕೊರೊನಾ ಕಾಲದ ಕವಿತೆ

ದಾದಾಪೀರ್ ತರೀಕೆರೆ

ಲಾಕ್‌ಡೌನ್ ನಲ್ಲಿ
ಗೂಡು ಸೇರಿಕೊಂಡವರ
ಎದೆಗೂಡಿನಿಂದ
ಏನೋ ಸದ್ದು ಕೇಳಿ ಬರುತ್ತಿದೆ
ಗೋಳ ಗುಮ್ಮಟವೇ
ಬೇಕಿಲ್ಲ, ದನಿ ಮಾರ್ದನಿಸಲು
ಪಿಸು ಮಾತು ಕಟ್ಟೆ ಹೊಡೆಯಲು

‘ಕೂಸು ಇದ್ದ ಮನಿಗೆ
ಬೀಸಣಿಕೆ ಏತಕ’ ಎಂದು
ಉಬ್ಬಿ ಹೋಗಿದ್ದಳು
ಹಡೆದವ್ವ
ಹೊಟ್ಟೆಗೆ ಹಿಟ್ಟಿಲ್ಲದೆ ಮುದುರಿ ಮಲಗೋಳೆ
ಕೂಸು ಎದೆಗೊತ್ತಿದರೂ ಜಿನುಗುತ್ತಿಲ್ಲ ಮೊಲೆ ಹಾಲು
ನನ್ನವ್ವಳ ಸಂಕಟ
ಬೀದಿಗೆ ಕೇಳುತ್ತಿದೆ

ಬರಿಗಾಲಲ್ಲಿ ಹಾದಿ
ಸವೆಸಿ ನಡೆದವರ
ಕಾಲಲ್ಲಿ ಒಸರಿದರಕ್ತ ಚಿತ್ತಾರಗಳಲ್ಲಿ
ಅನಾವರಣಗೊಂಡ ಕರಾಳ ಮುಖಗಳು
ಈ ಮಧ್ಯೆ ನೀನು ನಡೆದು ಹೋದ
ಹೈ ಹೀಲ್ಡ್ ಚಪ್ಪಲಿಗಳ
ಗುರ್ತು ಎಲ್ಲೂ ಕಾಣುತ್ತಿಲ್ಲ

ಜನ ಇರದ
ಬೀದಿಗಳಲ್ಲಿ
ಕೈ ಕೈ ಹಿಡಿದು
ನಡೆಯಬಹುದು
ನಿರ್ಭೀತಿಯಿಂದ
ಅಂದ್ಕಂಡಿದ್ದೆ
ಆದರೆ ಈ ಕೊರೊನಾ
ಬಹಳ ವಿಶೇಷ
‘ಯಾರು ಇಲ್ಲದ ಬೀದಿಯಲ್ಲಿ
ಜನ ನಮ್ಮನ್ನೆ ದಿಟ್ಟಿಸಿ ನೋಡುವಂತಿದೆ
ಬಳಿ ಸುಳಿದಾಡಿದಂತಿದೆ
ಕೈ ಹಿಡಿದು ಏನೋ
ಕೇಳುವಂತಿದೆ
‘ಜನತೆಯ ಎದೆಗೂಡಿನ ಭಾಷೆ
ಯಾರಿಗೆ ಅರ್ಥವಾಗಿದೆ ಹೇಳು’

‍ಲೇಖಕರು Avadhi

6 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading