– ನಾ ದಿವಾಕರ
ಖ್ಯಾತ ಕಲಾವಿದ ಎಂ.ಎಫ್ . ಹುಸೇನ್ ಅವರ ಮೊದಲ ಪುಣ್ಯತಿಥಿಯ ಸಂದರ್ಭದಲ್ಲಿ (09-6-2012)
ಎಲ್ಲಿ ಮರೆಯಾಗಿಬಿಟ್ಟರಿ ಹುಸೇನರೇ ಬಿಳಿ ಕುರುಚಲು ಗಡ್ಡ ಬಿಳಿಯ ಜುಬ್ಬವ ಧರಿಸಿ ಗೆರೆಗಳಂಚಿನಲ್ಲೇ ಅಡ್ಡಾಡುತ್ತಿದ್ದ ಬೊಗಸೆಗಂಗಳ ಅಜ್ಜ ಎತ್ತ ಹೋದಿರಿ ? ನಿಮ್ಮ ಕಂಗಳಿಂದ ಸೂಸುವ ಕಿರಣಗಳು ಸ್ನಿಗ್ಧ ಕೈಬೆರಳುಗಳೊಳಗಿಂದ ಸೃಷ್ಟಿಸಿದ ಗೆರೆಗಳು ನಿಜರ್ೀವ ನಿಭರ್ಾವ ಜಡವಸ್ತುಗಳಿಗೂ ಜೀವ ನೀಡಿದಾಗ ಅನಿಸುತ್ತಿತ್ತು ಇದು ಸಾಧ್ಯವೇ ? ಏನೆಲ್ಲಾ ಸೃಷ್ಟಿಸಿದಿರಿ ನಿಮ್ಮ ಅಂತರಂಗದ ಕಲಾಕುಂಚದೊಳಗಿಂದ ರಾಗ ಭಾವ ತಾಳಕ್ಕೆ ತಕ್ಕಂತೆ ಭರತನಾಟ್ಯ- ವಾಡುತ್ತಿದ್ದ ಆ ಸುಕ್ಕುಗಟ್ಟಿದ ಕೈಗಳು ಜೀವ ನೀಡಿದ್ದು ಗೆರೆಗಳಂಚಿನ ಪ್ರತಿಮೆಗಳಿಗಲ್ಲ ಭವ್ಯ ಭಾರತದ ಸಂಸ್ಕೃತಿಗೆ ! ಏನೆಲ್ಲಾ ಅವಾಂತರ ಸಾಹೇಬರೇ ! ನೋಡಿ ನಿಮ್ಮ ಸುವರ್ಣ ರೇಖೆಗಳನ್ನೇ ತುಂಡುತುಂಡಾಗಿಸಿ ಒಂದಾಗಿ ಸೇರಿಸಿ ಮದ್ದು ಸೀಸಗಳ ತುಂಬಿ ಕಡಲಾಳದ ಗಾನ ಸರಸ್ವತಿಯ ನಗ್ನತೆಯಡಿ ಇಟ್ಟೇ ಬಿಟ್ಟರು ಸ್ಫೋಟಗೊಳ್ಳಲು : ಸಿಡಿಯಿತಲ್ಲವೇ ಬಾಂಬುಗಳಂತೆ ಸೀಸದ ಕಡ್ಡಿಗಳು ಎತ್ತರಿಸಿ ಸುನಾಮಿ ಅಲೆಗಳನು ಲಗ್ಗೆ ಇಟ್ಟಾಯಿತು ಮಾನವ ಸಂವೇದನೆಗಳಿಗೆ ಹೃದಯದ ಅಭಿವ್ಯಕ್ತಿಗೆ ; ಕಿಡಿ ಹೊತ್ತಿಸಿದವರೆಲ್ಲೋ ತಿಳಿಯದು ಕುಂಚವಾದಿಗಳೇ ನೀವಂತೂ ಹೊರಟುಬಿಟ್ಟಿರಿ ಪರದೇಶಿಯಂತೆ ಹುಟ್ಟಿ ಮೆಟ್ಟಿದ ನೆಲ ತೊರೆದು ಸಹೃದಯಿಗಳನು ಮರೆತು ! ನಿಮ್ಮ ಅಸ್ಥಿಯೂ ಇಲ್ಲ ಮತಿಗೇಡಿಗಳ ಪಂಜರವೂ ಇಲ್ಲ ಆದರೂ ನಿಮ್ಮ ಹೆಜ್ಜೆ ಗುರುತುಗಳು ಅಲ್ಲಲ್ಲಿ ತುಂಡು ಗೆರೆಗಳ ನಡುವೆ ಗಹಗಹಿಸಿ ನಗುತ್ತಿರುತ್ತವೆ ; ಮರೆವುದಂತು ಸಾಹೇಬರೇ ಗೆರೆಗಳನ್ನು ಸ್ಫೋಟಿಸಬಹುದು ಸ್ಫೋಟದಿಂದ ಮೂಡಿದ ಗೆರೆಗಳನು ಕಾಣಲಾದೀತೇ ? ಇರಲಿ ಬಿಡಿ ಹುಸೇನರೇ ನೀವೆಲ್ಲಿರುವಿರೋ ತಿಳಿಯದು ನಿಮ್ಮ ನೆನಪುಗಳು ಸದಾ ಹಿಂಬಾಲಿಸುತ್ತವೆ ಸಾರಸ್ವತ ತಾರಾ ಪುಂಜದ ನಡುವೆ ನೆನೆದೇವು ನೆನೆದೇವು ಗೆರೆಗಳ ಸಾಮ್ರಾಟನನ್ನು ವಿಷಾದದ ನಗೆಯೊಂದಿಗೆ ! ]]>





Kavana thumba chennagide, congrats
tumba chenaagide..
very nice
ಕಲಾವಿದ ಬದುಕಿದ್ದಾಗ ಸಿಗದ ಗೌರವ ಸತ್ತ ನಂತರವಾದರೂ ಜಗತ್ತು ಅರಿತುಕೊಳ್ಳುವುದು ಈ ಜಗತ್ತಿನ ದುರಂತಗಳಲ್ಲಿ ಒಂದು.ಅದು ಹುಸೇನ್ ಸಾಬರನ್ನು ಮಾತ್ರವಲ್ಲ, ಬದುಕಿರುವ ಹಲವರನ್ನು ಈಗಲೂ ಬಿಟ್ಟಿಲ್ಲ. ಈ ಜಗತ್ತಿನಲ್ಲಿ ಹುಟ್ಟಿಸುವುದು ಎಷ್ಟು ಸುಲಭವೋ , ಕೊಲ್ಲುವುದು ಅಷ್ಟೇ ಸುಲಭ. ಎರಡಕ್ಕಿರುವ ಅಂತರ ವಿಪರ್ಯಾಸ ಮಾತ್ರ. ಇದು ಸಾಹಿತ್ಯಕ್ಕೂ ಅನ್ವಯಿಸುತ್ತದೆ.