ಎಸ್ ವಿ ಪ್ರಭಾವತಿ ಓದಿದ ‘ತಾನು ಕವಿತೆಯಾಗಿ ನನ್ನನ್ನು ಕವಿಯಾಗಿಸಿದಳು’

ಎಸ್ ವಿ ಪ್ರಭಾವತಿ

ಮೊದಲನೇ ಪಿಯುಸಿ ಯಿಂದಲೇ ನಾನು ಗಮನಿಸಿದಂತೆ ಕನ್ನಡ ಪಠ್ಯದ ಕವಿತೆ ಗಳ ಭಾಗದಲ್ಲಿ ಪಂಪ ಅಥವಾ ಕವಿರಾಜಮಾರ್ಗ, ರನ್ನ ಅಥವಾ ನಾಗ ಚಂದ್ರ, ವಚನಗಳು, ಹರಿಹರ ಅಥವಾ ರಾಘವಾಂಕ, ಕುಮಾರವ್ಯಾಸ ಅಥವಾ ಲಕ್ಷ್ಮೀಶ, ಮುದ್ದಣ, ನವೋದಯ, ನವ್ಯ, ದಲಿತ, ಸ್ತ್ರೀ ಸಂವೇದನೆ …… ಈ ಪ್ಯಾಟ್ರನ್ ಇರುವಂತೆ ತೋರುತ್ತಿತ್ತು. ಸ ಉಷಾ, ಸರ್ವಮಂಗಳಾ, ವೈದೇಹಿ, ಸವಿತಾ ನಾಗಭೂಷಣ, ಪ್ರತಿಭಾ ನಂದಕುಮಾರ್ … ಹೀಗೆ ಸ್ತ್ರೀ ಸಂವೇದನೆ ಯ ಕವಿತೆ ಗಳಿದ್ದರೆ.

ಗೋವಿಂಯ್ಯ ಅವರ ಅಆ ಮತ್ತು ….ಎಂಬ ಕವಿತೆ ಇರುತ್ತಿತ್ತು . ಅಂಬೇಡ್ಕರ್ ಜೀವನ ಚರಿತ್ರೆ ಇರುತ್ತಿತ್ತು. ಸಿದ್ದಲಿಂಗಯ್ಯ ನವರ ಊರು ಕೇರಿ ಇರುತ್ತಿತ್ತು. ಇವನ್ನು ಹಲವಾರು ಬಾರಿ ಪಾಠ ಮಾಡಿ ದಲಿತ ಲೋಕದ ಬಡತನ ಹಸಿವು ಅವಮಾನ ಗಳನ್ನು ಕುರಿತು ಹೇಳುತ್ತಿದ್ದೆವು. ಅದೇ ಮಾದರಿಯಲ್ಲಿ ಬಹು ವರ್ಷ ಪಾಠ ಮಾಡಿ*ಜಾಜಿ ಮಲ್ಲಿಗೆ * ಮಾಡಲು ತೊಡಗಿದಾಗ ಮೊದಲ ಬಾರಿಗೆ ತಡವರಿಸಿದ್ದೆ. ಇಲ್ಲಿ ಹಸಿವು ಕಷ್ಟ ಇಲ್ಲವೇ ಇಲ್ಲ . ಪುಟ್ಟ ಗುಡಿಸಲಿನಲ್ಲಿ ಕೆಟ್ಟ ಕನಸು ಗಳಿಲ್ಲ. ಮನಸು ಕನಸು ಗಳಿಲ್ಲಿ ಜಾಜಿಮಲ್ಲಿಗೆ ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ. * ಇಕ್ರಲಾ ಒದೀರ್ಲಾ ಈ ನನ್ ಮಕ್ಳ ಚರ್ಮ ಎಬ್ರಲಾ * ಎಂಬ ರೋಷವೇ ಇಲ್ಲ . ಮುಂದುವರಿದು ನಮಗೆ ಯಾರ ಮೇಲೂ ಕೋಪವಿಲ್ಲ ದ್ವೇಷವಿಲ್ಲ ಅನ್ನುತ್ತಾರೆ ……ಇದೇನು … ಓಹೋ ಅರ್ಥ ವಾಯಿತು ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷ ವಾಯಿತಲ್ಲವೇ ? ಸಂವಿಧಾನ ವು ನೀಡಿದ ಸವಲತ್ತುಗಳನ್ನು ಪಡೆದು ಕೊಂಡು ಹಸಿವು ಅವಮಾನವಿಲ್ಲದೆ ಬದುಕುತ್ತಿರುವ ಈ ತಲೆಮಾರಿನ ಅಭಿವ್ಯಕ್ತಿ ಇದು .

ಈ ಕವಿತೆ ಯಂತೂ ತುಂಬಾ ಪ್ರಸಿದ್ಧ. ಅವರಿಗೂ ಅದು ಇಷ್ಟ ವೇನೋ ಎಲ್ಲಾ ಕವಿಗೋಷ್ಠಿಗಳಲ್ಲಿಯೂ ಇದನ್ನೇ ಓದುತ್ತಿದ್ದರು. ಅವರ ಮಾತಿನಲ್ಲೇ ಹೇಳುವುದಾದರೆ ಅವರ ಅನೇಕ ಕವಿತೆ ಗಳು ಅನೇಕ ತರಗತಿಗಳಿಗೆ ಸತತವಾಗಿ ಪಠ್ಯ ವಾಗಿವೆ. ರಾಣಿ ಚೆನ್ನಮ್ಮ ವಿ ವಿ, ಮಂಗಳೂರು ವಿ ವಿ ,ಗುಲಬರ್ಗಾ ವಿ ವಿ, ಗಳಿಗೆ ಪಠ್ಯ ವಾಗಿರುವುದಲ್ಲದೇ * ಬಡವನಾದರೆ ಏನು ಪ್ರಿಯೆ ಕೈ ತುತ್ತು ತಿನಿಸುವೆ * ಎಂಬ ಪದ್ಯವು ದಾವಣಗೆರೆ, ಶಿವಮೊಗ್ಗ, ಕರ್ನಾಟಕ ವಿ ವಿ ಗಳಿಗೆ ಪಠ್ಯ ವಾಗುತ್ತಲೇ ಇರುವುದು ವಿಶೇಷ . ( ಇದನ್ನು ಸೊಗಸಾಗಿ ಹಾಡುತ್ತಾರೆ ಕೂಡ )

೨೦೧೬ ಡಿಸೆಂಬರ್ ೨೯ ರ ಗುರುವಾರ ತನ್ನ ೯೩ ರ ಪ್ರಾಯದಲ್ಲಿ ಅವರ ಅವ್ವ ತೀರಿಕೊಂಡಾಗ ಆ ಕ್ಷಣದಲ್ಲಿ ಮೂಡಿದ ಕವಿತೆ – ತಾನು ಕವಿತೆ ಯಾಗಿ ನನ್ನನ್ನು ಕವಿಯಾಗಿಸಿದಳು — ವಿಶ್ವ ವಾಣಿ ಪತ್ರಿಕೆ ಯಲ್ಲಿ ಇದು ಪ್ರಕಟವಾದಾಗ ಇದನ್ನು ಕುರಿತೇ ಪ್ರತಿ ಕ್ರಿಯೆಯನ್ನು ಆಹ್ವಾನಿಸಲಾಯಿತು. ಆಗ ನಾನು ಬರೆದ ಲೇಖನ ಇದರಲ್ಲಿದೆ . ಹೀಗಾಗಿ ನನಗೆ ಇದು ಸಿಕ್ಕಿತು ಇದರಲ್ಲಿ ಒಟ್ಟು ೫೫ ಲೇಖನ ಗಳಿವೆ .

ಲಂಕೇಶರ ಅವ್ವ ಕವಿತೆ ಯ ದಟ್ಟ ಪ್ರಭಾವವನ್ನು ಕೆಲವರು ಗುರುತಿಸಿದ್ದಾರೆ. ಇನ್ನೂ ಕೆಲವರು ಹಾಗಲ್ಲ ಎಂದೂ ಹೇಳಿದ್ದಾರೆ. ಒಟ್ಟಿನಲ್ಲಿ ಒಂದೆರಡು ದಿನ ತಡವಾಗಿಯಾದರೂ ವಿಶ್ವ ತಾಯಂದಿರ ದಿನಕ್ಕೆ ಇದು ಒಂದು ಕಾಣಿಕೆಯಾಗಿದೆ. ನನಗೊಂದು ಹುಚ್ಚಿತ್ತು ಈ ಪುಸ್ತಕ ದ ಮುಖಪುಟದ ಹೆಂಗಸಿನಂತೆ ನಾನೂ ಇರಬೇಕು .. ಈ ಹಾಳು ವಿದ್ಯೆ ನೌಕರಿ ಸಂಬಳ ಸಂಸ್ಕಾರ ಬಿಗುಮಾನ ಇದು ತಂದೊಡ್ಡುವ ಅನೇಕ ಮುಖವಾಡಗಳು … ಪ್ರೀತಿ ಯನ್ನೂ ಹೇಳುವಂತಿಲ್ಲ ದ್ವೇಷವನ್ನೂ ಹೇಳುವಂತಿಲ್ಲ. ಇದನ್ನು ಒಬ್ಬ ರಲ್ಲಿ ಹೇಳಿಕೊಂಡಾಗ ಅವರು ನಿಮ್ಮಂತಾಗಬೇಕೆಂದು ಕನಸು ಕಾಣುತ್ತಿರುತ್ತಾರೆ ಎಂದರು ಅದು ಹಾಗೇ ಯಾವಾಗಲೂ gross is greener the other side.

ಪುಸ್ತಕ : ‘ತಾನು ಕವಿತೆ ಯಾಗಿ ನನ್ನನ್ನು ಕವಿಯಾಗಿಸಿದಳು’ (ಕವಿತೆ ಒಂದು ಕವಲು ಹಲವು)
ಲೇ : ಸತ್ಯಾನಂದ ಪಾತ್ರೋಟ
ಪ್ರ : ಸಮತಾ ಪ್ರಕಾಶನ
ಬೆಲೆ : 325

‍ಲೇಖಕರು Admin

May 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: