ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಷ್ಟು ಚಂದ ನೀವು ಮರಳಿ ಬಂದರೆ..

t-card1b

-ಅಜಿತ್ ಎಸ್ ಕೌಂಡಿನ್ಯ

ಹಿಡಿದದ್ದು ಕೈಯಲ್ಲೊಂದು ಕೋವಿ
ಕುತ್ತಿಗೆಗೆ ನೇತುಬಿದ್ದದ್ದು ಕ್ಯಾಮೆರ
ಬಿಳಿ ಕುರುಚಲು ಈ ಗಡ್ಡಧಾರಿ
ಹಿಡಿದ ದಾರಿ ಶಿಕಾರಿ

ಅಲೆದಾಡುತ ಕಾಡೆಲ್ಲಾ
ಮುಂದೆ ಮುಂದೆ ಕಿವಿ
ಹಿಂದೆ ಗುರು ತೇಜಸ್ವಿ

ಮನೆ ಹಿಂದೆಯೇ ಇದ್ದ ಕೆರೆ
ಇವರಿಗೆ ಪಕ್ಷಿವೀಕ್ಷಣೆಯ ತಾಣ
ಭಾದ್ರಾ ನದಿ ದಂಡೆಯಲಿ
ಮೀನಿಗೆ ಗಾಳದ ಬಾಣ

‘ನಿರುತ್ತರ’ದ ನಾಯಕ
ಕರ್ವಾಲೊ, ಪರಿಸರದ ಕಥೆ, ಮಾಯಾಲೋಕ,
ರಚಿಸಿದ್ದಾರೆ ಅದೆಷ್ಟೋ
ಕಥೆ, ಕಾದಂಬರಿ ನಾಟಕ

ಮೂಕಾಗಿದೆ ನೀವಿಲ್ಲದ ಮೂಡಿಗೆರೆ
ಎಷ್ಟು ಚಂದ ನೀವು ಮರಳಿ ಬಂದರೆ!


‍ಲೇಖಕರು avadhi

2 April, 2009

1 Comment

  1. prakash hegde

    ವಾವ್…! ಕೌಂಡಿನ್ಯ…!

    ತೇಜಸ್ವಿಯವರನ್ನು ಚೆನ್ನಾಗಿ ಚಿತ್ರಿಸಿದ್ದೀರಿ…

    ಅವರ ನೆನಪು ಬಹುವಾಗಿ ಕಾಡುತ್ತದೆ ಅಲ್ಲವೇ..?

    ಚಂದದ ಕವನಕ್ಕೆ

    ಅಭಿನಂದನೆಗಳು…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading