ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎರಡು ಕವನಗಳು

‘ಕಲ್ಪನೆಗಳು’

ಕೆ ಬಿ ಜಗದೇಶ್ ಜೋಡುಬೀಟಿ

ಕ್ಷಿತಿಜಾದಾಚೆಗಿನ ದಿಟ್ಟ ನೋಟದಲ್ಲು
ಅಮ್ಮನ ಫ್ರಿಡ್ಜು, ಮಿಕ್ಸಿ, ಕುಕ್ಕರ್
ಹೀಗೆ ಕನಸುಗಳ ಚಿತ್ತಾರ..!
 
ಸಂಜೆ 6ರ ಹೊತ್ತಿಗೆ
ದುಪ್ಪಟ ಕಂಬಳಿಯೊಳಗೆ
ಅಪ್ಪನ ಗೊರಕೆಯ ಶಬ್ದ
 
ದಿನಕ್ಕೊಂದು ಸಲ
ತಿಕ್ಕಿ ತೆಗೆದು ಉಗುರುಗಳಿಗೆ
ಮೆತ್ತಿಕೊಳ್ಳುವ ನೈಲ್ ಪಾಲಿಶಿನ ಬಣ್ಣಗಳಲ್ಲು
ಅವನ ಮುಖ ಕಾಣುವಂತೆ
ಪದೇ ಪದೇ ನಾಚಿಕೊಳ್ಳುವ ತಂಗಿಯ ಮೊರೆ
 
ಇಷ್ಟೆಲ್ಲದರ ನಡುವೆಯೂ
ಮೇಣದ ಬತ್ತಿಯ ಬೆಳಕಿನಲ್ಲಿ
ನನ್ನದೇ ಆದ ಸುಂದರ

ಕುರುಡು ಕಲ್ಪನೆಯ ಮತ್ತು..!

 

‘ಈ ಹೊತ್ತು’


 

ಈ ಹೊತ್ತು ಬಾಸ್ಕರನು ಮೂಡಣದಿ
ಭೂಮಿಯ ಮುದ್ದಾಡುವ ಹೊತ್ತು
ಬಾನಿನಿಂದ ಭೂಮಿಗೆ ಮುತ್ತಿನ
ಮಳೆಗಳುದುರುವ ಹೊತ್ತು
 
ಈ ಹೊತ್ತು ಎಳೆ ಕಂದನು
ಕಿಲಕಿಲನೆ ನಗುತ್ತ
ಮಣ್ಣಿನೊಡನಾಡುವ ಹೊತ್ತು
ಅಮ್ಮನ ವಾತ್ಸಲ್ಯದ
ತುತ್ತನುಣ್ಣುವ ಹೊತ್ತು
 
ಈ ಹೊತ್ತು ಅರಳಿ ನಿಲ್ಲುವ
ಮೊಗ್ಗಿಗೆ ದುಂಬಿಗಳ ಮುತ್ತ ನೀಡುವ ಹೊತ್ತು
ಬಣ್ಣ ಬಣ್ಣದ ಚಿಟ್ಟೆಗಳ
ಹಾರಾಡುವ ಹೊತ್ತು
 
ಈ ಹೊತ್ತು ಹೂ ತೋಟದ
ಹಾದಿಯಲ್ಲಿ ಅವಳು ಕಾಯ್ದೂ ನಿಲ್ಲುವ ಹೊತ್ತು
 
ಈ ಹೊತ್ತು ಮೈ ಸುಡುವ
ಉರಿ ಬಿಸಿಲಿಗೆ
ರೈತನ ಬೆವರ ಹನಿ ಉದುರಿ
ಭೂತಾಯಿ ಹರ್ಷದಿ ನಲಿಯುವ ಹೊತ್ತು
 
ಹಕ್ಕಿಯ ಚಿಲಿಪಿಲಿಯ
ವಂದನೆಗಳ ವಾದ್ಯದೊಂದಿಗೆ
ಇರುಳಾಗುವ ಹೊತ್ತು
ರಾಗಿ ಮುದ್ದೆಯನುಂಡು
ಹೊದ್ದು ಮಲಗುವ ರೈತರ
ಪಾಲಿಗೆ ಸ್ವರ್ಗದ ಹೊತ್ತು

‍ಲೇಖಕರು avadhi

1 June, 2014

2 Comments

  1. vijaykanth patil

    kavitheyantha kavithegalu…

  2. mmshaik

    very nice..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading