ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎರಡು ಆಸ್ಪತ್ರೆ ಮತ್ತೊಂದು ಮಸಣ..

ಒಂದು ಬಾಂಬಿನ ಪರಿಧಿ

ಮೂಲ :ಯೆಹುದಾ ಅಮಿಚೈ

avinash-kannammanavar

ಕನ್ನಡಕ್ಕೆ: ಅವಿನಾಶ ಕನ್ನಮ್ಮನವರ

 

hands4ಬಾಂಬಿನ ಪರಿಧಿ ಮೂವತ್ತು ಸೆಂಟಿಮೀಟರಗಳಷ್ಟು,
ಸಿಡಿದ ತೀವ್ರತೆ ಇದ್ದೀತು ಏಳು ಮೀಟರುಗಳಷ್ಟು,
ಪಡೆದ ಬಲಿ ನಾಲ್ಕು, ಹನ್ನೊಂದು ಗಾಯಳುಗಳು,
ಇವರ ನೋವಿನ ಪರಿಧಿ ಇನ್ನಷ್ಟು  ದೊಡ್ಡದು
– ಇದರೊಳಗೆ ಎರಡು ಆಸ್ಪತ್ರೆ ಮತ್ತೊಂದು ಮಸಣ.

ಛಿದ್ರಗೊಂಡ ಮಹಿಳೆಯ ದಫನಾಗಿದೆ ಹುಟ್ಟಿದೂರಿನಲ್ಲಿ,
ಆ ದೂರ ಸೇರಿದರೆ ಬಾಂಬಿನ ಪರಿಧಿ ಹಿಗ್ಗೀತು ನೂರಾರು ಕಿಲೋಮೀಟರಗಳಷ್ಟು,
ಮಹಿಳೆಯ ಪ್ರಿಯಕರನ ದುಃಖ ಕಟ್ಟೆಯೊಡೆದಿರುವುದು ಭೂಮಿಯ ಮತ್ತೊಂದು ಮಗ್ಗುಲಿನಿಂದ,
ಇಲ್ಲಿಗೆ ಬಾಂಬಿನ ಪರಿಧಿ ಇಡೀ ಭೂಮಿಯಷ್ಟಾಯಿತು.

ಬಿಡು ಗಾಯಾಳುಗಳ ಯಾತನೆಯ ಬಗ್ಗೆ ಹೇಳಿದರೆ,
ದೇವರೂ ಕೂಡಾ ಕಿವಿ ಮುಚ್ಚಿಯಾನು.

ಅರಿವಾಯಿತೆ ಕರುಣೆಯೇ ಇಲ್ಲ ಈ ಪರಿಧಿಗೆ ಮತ್ತು ದೇವರಿಗೆ!

‍ಲೇಖಕರು Admin

29 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading