ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎದೆ ಕೊಡು..

ವಿನಯಾ ಎ ಎಸ್

ಅಂಗೈಯಾಚೆಗಿನ ಪ್ರಪಂಚ ಕಣ್ತೆರೆದು
ಮೊಲೆಯಾಚೆಯ ಜಗತ್ತನ್ನು ಕಂಡಾಗ
ನೋಡಿದ್ದೆಲ್ಲಾ ಬೆರಗೇ

ಎಳೆಯ ಮತ್ತು ತುಂಬಿದ ಎದೆ ಗೊಂಚಲುಗಳ
ನೋಡುತ್ತಾ ಹಿತ್ತಲ ಹಣ್ಣು ಬೇಸರಾಗಿ
ನೋಡುವುದೆಲ್ಲಾ ಆಸೆಯೇ

ಮಗುವೇ ಆದರೂ ಕಂಡ ಕಂಡಲ್ಲಿ ಹಾಲೂಡದ ಹೆಂಗಸು, ಹೇಗೆ ಬಿಚ್ಚಿಯಾಳು‌ ಕುಪ್ಪಸವನ್ನ
ತಾನಾಗಿಯೇ ಹಾಲಾಡದೇ

ಎದೆ ಕೊಡಬೇಕು ನೀನು, ಹಿಂಡಿದರಷ್ಟೇ ತ್ರೃಪ್ತಿ
ಕಾಮವೇರಿದ ಕಾವೇರಿದ ಮದಕ್ಕೆ ಎದೆ ಬಿಡಿಸಿ,
ಮರೆತು ಹೆಣ್ಣಿನ ಘನತೆ ಇನಿತು ಸರಿಯೇ

‍ಲೇಖಕರು Avadhi

31 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading