ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್ ಆರ್ ರಮೇಶ ಕವಿತೆ- ಹೌದು…

ಎಚ್ ಆರ್ ರಮೇಶ

ಹಾಗಿಲ್ಲದಿದ್ದರೂ
ಹಾಗೆಯೇ ಇರಬೇಕೆನ್ನುವ ಹಠ
ಸುಳ್ಳಿಗೆ ಸತ್ಯದ ಬಣ್ಣ
ಪುರಾಣ ವಾಸ್ತವ ಸಂಗತಿ
ಪ್ರಶ್ನಾರ್ಥಕ ಚಿಹ್ನೆಗಳ ಹತ್ಯಾಕಾಂಡ ಹತ್ಯೆಗೈಯ್ದ ಹತಾರಗಳ ಶುದ್ಧಿ ಪವಿತ್ರ ಜಲದಲ್ಲಿ ಅದ್ದಿ
ಮಾಡಿಸಿ ತಾಲೀಮು ನೇಪಥ್ಯಕೆ ಸರಿದಿರುವುದ
ಮತ್ತೆ ರಂಗಕೆ
ಹಿಂದಿನದರಲಿ ಇಂದಿನದು

ಯಾವ ಶವವಾದರೂ ಕರಗಿಸುವುದು ಮಣ್ಣು ಕಣವಾಗಿ
ಕಣದ ಅಣು ಬ್ರಹ್ಮಾಂಡ 
ಆದರೆ ಇರುವುದರಲ್ಲಿ ಇಲ್ಲದಿದ್ದುದರ ರಸಾಯನ 
ಹಾಗಿಲ್ಲದಿದ್ದರೂ ಹಾಗೆಯೇ ಇರುವಂತೆ ಹುನ್ನಾರ
ವಿಲಕ್ಷಣ ಸಂಭ್ರಮ 
ಕಲುಷಿತವಾದುದರಲ್ಲಿ ಉಸಿರಿರದು ಸಹಜ 
ಆತ್ಮಹತ್ಯಾ ದಾಳಿ.

‍ಲೇಖಕರು Admin

5 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading