ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉರಿಯುವುದಾದರೆ ಉರಿಯಲಿ ಬಿಡು..

ಉರಿ

ಅರ್ಪಣಾ ಮೂರ್ತಿ

ಉರಿಯುವುದಾದರೆ ಉರಿಯಲಿ ಬಿಡು,
ಅಪ್ರಯೋಜಕ ಜನ ಇನ್ನೇನು ತಾನೇ ಮಾಡಿಯಾರು,
ಉರಿದುರಿದು ಬಿದ್ದ ಅವರೊಡಲ ಬೂದಿ ಗೊಬ್ಬರವಾದರೂ ಆದೀತು
ನಾಳಿನ ನಿನ್ನ ಏಳಿಗೆಯ ಚಿಗುರಿಗೆ,

ನಿನ್ನೆಡೆ ಇಣುಕಿ ಅಣಕಿಸಿ ಕುಣಿಯುವುದಾದರೆ ಕುಣಿಯಲಿ ಬಿಡು,
ನಿನ್ನ ಉನ್ನತಿಯ ಸಂಭ್ರಮಕೆ ನರ್ತಕರು ಸಿಕ್ಕಿಯಾರು,
ಅವರೆಡೆಗೆ ನೀ ಇಣುಕುವಷ್ಟು
ವಿಶೇಷತೆಯೇನಿಲ್ಲ ಅವರಲ್ಲಿ,

ಅವರು ಹಾರುವುದಾದರೆ ಹಾರಲಿ ಬಿಡು,
ನೀ ನೆಲದಿ ಗಟ್ಟಿಯಾಗಿ ಬೇರೂರು ಸಾಕು,
ಹಾರಿ ಚೀರಿ ಮೇಲಕೇರಿ ಸೋತು
ಕೊನೆಗೊಮ್ಮೆ ನಿನ್ನ ಪಾದದ ಬುಡ ತಲುಪಲೆಬೇಕು….

 

‍ಲೇಖಕರು avadhi

25 December, 2019

2 Comments

  1. D.M.NADAF

    ಅವರೆಡೆಗೆ ನೀ ಇಣುಕುವಷ್ಟು ವಿಶೇತೆಯೇನಿಲ್ಲ ಅವರಲ್ಲಿ, ಹಾರುವದಾದರೆ
    ಹಾರಲಿ ಬಿಡು,ಈ ನೆಲದಿ ಗಟ್ಟಿಯಾಗಿ ಬೇಲೂರು
    ಕವಿ ನೀಡಿದ ಕಾಲದ ಕರೆಯಂತಿದೆ
    ಅಭಿನಂದನೆಗಳು .
    ಡಿ.ಎಮ್ ನದಾಫ್ ಅಫಜಲಪುರ.

  2. T S SHRAVANA KUMARI

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading