ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಮಾ ಸೂಗೂರೇಶ ಹಿರೇಮಠ ಕವಿತೆ- ಸತ್ಯ- ಸುಳ್ಳು

ಉಮಾ ಸೂಗೂರೇಶ ಹಿರೇಮಠ

ಕೋಟೆಯ ಸುತ್ತಲು
ಸುಳ್ಳಿನ ಪ್ರೇತಾತ್ಮ ಓಡಾಡುತ್ತಿದೆ
ಅದಕ್ಕೆ ಯಾರ ಮುಲಾಜಿಯೂ ಇಲ್ಲ
ದಿಗಂಬರವಾಗಿ ದಿಕ್ಕು ದಿಕ್ಕಲ್ಲಿ
ಚಲನೆ ನಡೆಸುತ್ತಿದೆ

ಅಹಂಮ್ಮಿನ ನಶೆಯೊಳಗೆ
ತೇಲಾಡಿ ವೈಭೋಗದಿಂದ
ಕುಣಿದು ಕುಪ್ಪಳಿಸಿ
ಕೇಕೆ ಹಾಕಿ ಚಪ್ಪಾಳೆ ತಟ್ಟಿ
ನಿಷ್ಕ್ಮಲಶದೆದುರಿಗೆ
ಸಂತಸದಿಂದ ನಗೆಯಾಡುತ್ತಿದೆ

ಇದ್ದಂತ ಕುರುಹುಗಳನ್ನು
ಸುಟ್ಟು ಬೂದಿ ಮಾಡಿ
ಇರಲಾರದಂತಹ ಕಟ್ಟು ಕಥೆಗಳನ್ನ
ಸೃಷ್ಟಿಸಿದಾಗಲೆಯೇ
ಈ ಹುಸಿಗೆ ಮತ್ತಷ್ಟು ಖುಷಿಯಾಗಿದೆ

ದಿಕ್ಕು ದೋಚದೆ ಸತ್ಯವು
ಕಣ್ಣೀರು ತುಂಬಿಕೊಂಡು
ಅಂಗಲಾಚಿ ಅತ್ತರೂ
ಯಾರೂ ಕೇಳುವರಿಲ್ಲ
ಸತ್ಯದ ಎದುರಿಗೆ ಸುಳ್ಳು
ಹಬ್ಬವನ್ನಾಚರಿಸಿಕೊಂಡಿದೆ

ಸುಳ್ಳು ಇಂದು ರಾಜಾರೋಷವಾಗಿ
ಮೈ ಮರೆತು ಮೆರೆಯುತಿದೆ
ಅಂತ್ಯಕಾಲ ಒದಗಿ ಬಂದಾಗಲೆ
ಸತ್ಯದ ಎದುರು ಬಾಯಿ ಮುಚ್ಚಿಕೊಂಡಿರುತ್ತದೆ

ಕುಣಿಯುವವರೆಗು ಕುಣಿಯಲಿ ಬಿಡು
ಒಂದಲ್ಲ ಒಂದು ದಿನ
ಕಾಲು ಮುರಿದು ಬೀಳಲೆಬೇಕೆಂದು
ನಿಜವು ನಿಜಾಂಶವನ್ನರಿತು ಸುಮ್ಮನಾಗಿದೆ…

‍ಲೇಖಕರು Admin

11 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading